Chithrapady Children Santhe : ಮಕ್ಕಳ ದಿನಾಚರಣೆ : ಚಿತ್ರಪಾಡಿ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ

ಇಂದು ದೇಶದಾದ್ಯಂತ ಪಂಡಿತ್‌ ಜವಾಹರಲಾಲ್‌ ನೆಹರು ಅವರ ಜನ್ಮದಿನದ ಸ್ಮರಣಾರ್ಥವಾಗಿ ಮಕ್ಕಳ ದಿನಾಚರಣೆಯನ್ನು(Chithrapady Children Santhe) ಆಚರಿಸಲಾಗಿದೆ. ಈ ದಿನದಂದು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಅದರಲ್ಲೂ ಉಡುಪಿ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಲ್ಲಿ ವ್ಯವಹಾರ ಹಾಗೂ ಹಣಕಾಸಿನ ಜ್ಞಾನವನ್ನು ಹೆಚ್ಚಿಸಲು ಮಕ್ಕಳ ಸಂತೆಯನ್ನು ಏರ್ಪಡಿಸಲಾಗಿದೆ.

ಮಕ್ಕಳ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದಲ್ಲಿರುವ ಚಿತ್ರಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(Government Higher Primary School, Chithrapady) ತರಕಾರಿ ಹಾಗೂ ಇನ್ನಿತರ ಸಾಮಾಗ್ರಿಗಳ ಸಂತೆಯನ್ನು ಮಕ್ಕಳ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಲು ಆಯೋಜಿಸಲಾಗಿದೆ. ಈ ಮಕ್ಕಳ ಸಂತೆಯಲ್ಲಿ ಚಿತ್ರಪಾಡಿ ಶಾಲೆಯ ಆರನೇ ಮತ್ತು ಏಳನೇ ತರಗತಿ ವಿದ್ಯಾರ್ಥಿಗಳಿಂದ ನಡೆಸಲಾಗಿದೆ. ಪಠ್ಯಪುಸ್ತಕದ ಜ್ಞಾನದೊಂದಿಗೆ ಮಕ್ಕಳ ಭವಿಷ್ಯದ ಉನ್ನತಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ ಮಕ್ಕಳು ಸ್ವತಃ ಜನರನ್ನು ತಮ್ಮ ವ್ಯಾಪಾರದ ಕಡೆಗೆ ಹೇಗೆ ಗಮನ ಸೆಳೆಯುತ್ತಾರೆ, ತಮ್ಮ ಬಳಿ ಬಂದ ಜನರ ಜೊತೆ ವ್ಯಾಪಾರವನ್ನು ಹೇಗೆ ನಡೆಸುತ್ತಾರೆ. ತಮ್ಮ ವ್ಯಾಪಾರ ದಿಂದ ಹೇಗೆ ಲಾಭವನ್ನು ಪಡೆಯುತ್ತಾರೆ. ಹಾಗೆ ವ್ಯಾಪಾರದಲ್ಲಿ ಆಗುವ ಲಾಭನಷ್ಟಗಳನ್ನು ಹೇಗೆ ಸರಿದೂಗಿಸುತ್ತಾರೆ ಎಂದು ತಿಳಿಯಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ತರಕಾರಿ, ಸೊಪ್ಪು, ತೆಂಗಿನಕಾಯಿ, ತಿಂಡಿ -ತಿನ್ನಿಸು ಸೇರಿದಂತೆ ಅನೇಕ ವ್ಯಾಪಾರ ಸಾಮಾಗ್ರಿಗಳನ್ನು ತಂದು ಶಾಲೆಯ ವರಾಂಡದಲ್ಲಿ ಇಟ್ಟುಕೊಂಡು ನಾವು ದೊಡ್ಡವರಿಗಿಂತ ಕಮ್ಮಿ ಇಲ್ಲ ಎನ್ನುವಂತೆ ವ್ಯಾಪಾರವನ್ನು ಚೆನ್ನಾಗಿ ನಡೆಸಿ ಲಾಭವನ್ನು ಗಳಿಸಿರುತ್ತಾರೆ.

Chithrapady Children Santhe
https://www.youtube.com/watch?v=DLJ4TjF_uoo

ಇದನ್ನೂ ಓದಿ : Children’s Day 2022 : ಜವಾಹರಲಾಲ್‌ ನೆಹರು ಕೋಟ್‌ ಮೇಲೆ ಯಾವಾಗಲೂ ಗುಲಾಬಿ ಇರುತ್ತೆ ಏಕೆ ಗೊತ್ತಾ ?

ಸರಕಾರಿ ಶಾಲೆಗಳ ಬೆಳವಣೆಗೆ ಹಾಗೂ ಮಕ್ಕಳ ಜ್ಞಾನ ಬೆಳವಣೆಗೆಗೆ ಪೂರಕವಾದ ಶಿಕ್ಷಣವನ್ನು ಕೊಡಿಸುವುದು ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ. ಪುಸ್ತಕದೊಳಗಿನ ಜ್ಞಾನವಷ್ಟೇ ಅಲ್ಲದೇ ಪ್ರಪಂಚದ ಜ್ಞಾನವನ್ನು ಬೆಳೆಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಇದೀಗ ಸರಕಾರಿ ಶಾಲೆಗಳ ಮಕ್ಕಳಿಗೆ ಪ್ರಾಪಂಚಿಕ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಕಲೆ ಹಾಗೂ ಸಾಹಿತ್ಯದ ಜ್ಞಾನವನ್ನು ಹೆಚ್ಚಿಸಲು ಪ್ರತಿಭಾಕಾರಂಜಿ, ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ, ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸುವುದಕೊಸ್ಕರ ಶಾಲೆಯಲ್ಲಿ ಸಂತೆಯ ರೀತಿಯಲ್ಲಿ ಮಕ್ಕಳಿಂದ ಚಟುವಟಿಕೆಯನ್ನು ನಡೆಸಿರುತ್ತಾರೆ. ಈ ರೀತಿಯ ಚಟುವಟಿಯಿಂದ ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಹೆಚ್ಚಿಸುವ ಉನ್ನತ ಮಾರ್ಗವಾಗಿದೆ.

Chithrapady Children Santhe

Chithrapady Children Santhe : Children’s Day Celebration : Chithrapady Children’s Santa who attracted attention in school

Comments are closed.