ಭಾನುವಾರ, ಏಪ್ರಿಲ್ 27, 2025
HomekarnatakaNandini milk : ನಂದಿನಿ ಹಾಲು ಲೀಟರ್ 3 ರೂಪಾಯಿ ಹೆಚ್ಚಳ: ಸರ್ಕಾರಕ್ಕೆ ಸಲ್ಲಿಕೆಯಾಯ್ತು ದರ...

Nandini milk : ನಂದಿನಿ ಹಾಲು ಲೀಟರ್ 3 ರೂಪಾಯಿ ಹೆಚ್ಚಳ: ಸರ್ಕಾರಕ್ಕೆ ಸಲ್ಲಿಕೆಯಾಯ್ತು ದರ ಏರಿಕೆ ಪ್ರಸ್ತಾವನೆ

- Advertisement -

ಬೆಂಗಳೂರು : ಈಗಾಗಲೇ ಬೆಲೆ ಏರಿಕೆ ಹಾಗೂ ಬಿಸಿಲಿನ ಬೇಗೆ ಗೆ ಕಂಗೆಟ್ಟಿರುವ ಕರ್ನಾಟಕದ ಜನರಿಗೆ ಇನ್ಮುಂದೇ ಕುಡಿಯೋ ಟೀ ಕಾಫಿಯೂ ಗಂಟಲು ಸುಡೋ ಸಾಧ್ಯತೆ ದಟ್ಟವಾಗಿದ್ದು ಹಾಲಿನ ದರ (Nandini milk) ಏರಿಕೆಗೆ ಪಟ್ಟು ಹಿಡಿದಿರೋ ಕೆಎಂಎಫ್ ಮತ್ತೊಮ್ಮೆ ಸರ್ಕಾರಕ್ಕೆ ಬೆಲೆ ಏರಿಕೆಯ ಪ್ರಸ್ತಾಪವನ್ನು ಸಲ್ಲಿಸಿದೆ. ಪ್ರತಿ ಲೀಟರ್ ಹಾಲಿಗೆ 3 ರೂ. ದರ ಹೆಚ್ಚಳಗೊಳಿಸುವಂತೆ ಕೋರಿ ಸಿಎಂಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಹಾಗೂ ಪ್ರಸ್ತಾಪ ಸಲ್ಲಿಸಿದ್ದಾರೆ. ಮಂಗಳವಾರ ಸಿಎಂ ಭೇಟಿ ಮಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಪ್ರತಿ ಲೀಟರ್ ಹಾಲಿಗೆ ಮೂರು ರೂಪಾಯಿ ದರ ಏರಿಸುವಂತೆ ಮನವಿ ಸಲ್ಲಿಸಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ, ಅಧಿಕಾರಿಗಳು ಹಾಗೂ ಸಂಬಂಧಿಸಿದವರ ಜೊತೆ ಚರ್ಚಿಸಿ ನಿರ್ಣಯಕೈಗೊಳ್ಳುವುದಾಗಿ ತಿಳಿಸಿದ್ದಾರಂತೆ. ಹೀಗಾಗಿ ರಾಜ್ಯದಲ್ಲಿ ಇನ್ನು ಎರಡು ದಿನಗಳಲ್ಲಿ ಹಾಲಿನ ದರ ಏರಿಕೆ ಅಥವಾ ಯಥಾಸ್ಥಿತಿ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದ್ದು , ದರ ಏರಿಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಕಳೆದ ಎರಡು ತಿಂಗಳ ಹಿಂದೆಯೂ ಹಾಲಿದ ದರ ಏರಿಕೆ ಬಗ್ಗೆ ಮನವಿ ಮಾಡಿದ್ದ KMF ಹೆಚ್ಚಳದ 3 ರೂಪಾಯಿನಲ್ಲಿ, ಕನಿಷ್ಠ 2 ರೂ.‌ ಹಾಲು ಉತ್ಪಾದಕರಿಗೆ ಮತ್ತು 1 ರೂ. ಹಾಲು ಉತ್ಪಾದಕ ಸಹಕಾರಿ ಸಂಘ, ಹಾಲು ಒಕ್ಕೂಟ ಮತ್ತು ಹಾಲು ಮಾರಾಟಗಾರರಿಗೆ ನೀಡಲಾಗುವುದು ಎಂದು ಮನವಿ ಮಾಡಿತ್ತು. ಕೊರೋನಾದಿಂದ ಬಳಲಿದ ಎರಡು ವರ್ಷಗಳಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘ, ಹಾಲು ಒಕ್ಕೂಟಗಳು ನಷ್ಟದಲ್ಲಿದ್ದು, ನಷ್ಟವನ್ನು ಸರಿತೂಗಿಸಿಕೊಂಡು ಚೇತರಿಸಿಕೊಳ್ಳಲು ಈ ಬೆಲೆ ಏರಿಕೆ ಅನಿವಾರ್ಯ ಎಂದು ಕೆಎಂಎಫ್ ವಾದಿಸುತ್ತ ಬಂದಿದೆ.

ಹೀಗಾಗಿ ಈ ಭಾರಿ ಸಿಎಂ ಬಸವರಾಜ್ ಬೊಮ್ಮಾಯಿ ಕೆಎಂಎಫ್ ಬೇಡಿಕೆಗೆ ಮಣಿಯಲಿದ್ದು ಹಾಲಿನ ದರ ಏರಿಕೆಗೆ ಅವಕಾಶ ನೀಡೋ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.
ಸಿಎಂ ಭೇಟಿ ವೇಳೆ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಸಾಧನೆ ಹಾಗೂ ಅಂತರಾಜ್ಯಗಳೊಂದಿಗಿನ ವ್ಯವಹಾರ, ಆರ್ಥಿಕತೆ ಚೇತರಿಕೆಯ ಕುರಿತು ಮಾಹಿತಿ ನೀಡಿದ್ದು, ಅಭಿವೃದ್ಧಿ ದೃಷ್ಟಿಯಿಂದ ಬೆಲೆ ಏರಿಕೆಗೆ ಮನವಿ ಮಾಡಿದ್ದಾರಂತೆ. ಆದರೆ ಈಗಾಗಲೇ ಎಲ್ಲ ರೀತಿಯ ಬೆಲೆ ಎರಿಕೆಯಿಂದ ನಲುಗಿದ ಜನರಿಗೆ ಹಾಲಿನ ದರ ಏರಿಕೆ ಹೊರೆಯಾಗಲಿದ್ದು ಈ ಬಗ್ಗೆ ಸಿಎಂ ಕೈಗೊಳ್ಳುವ ತೀರ್ಮಾನ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : Covid-19 4th Wave : ವೈದ್ಯರು, ಸ್ವಾಬ್ ಟೆಸ್ಟ್ ಸಿಬ್ಬಂದಿ ನೇಮಕಕ್ಕೆ ಸಜ್ಜಾದ ಬಿಬಿಎಂಪಿ

ಇದನ್ನೂ ಓದಿ : ಹಿಂದೂ ದೇವಾಲಯಗಳಿಗೆ ವಾರ್ನಿಂಗ್ : ಬೆಂಗಳೂರು ಪೊಲೀಸರ ಕ್ರಮಕ್ಕೆ ಆಕ್ರೋಶ

Nandini milk proposes hike in milk price by Rs 3 per liter

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular