Vastu Tips : ಮನೆಯಲ್ಲಿ ಕನ್ನಡಿಯನ್ನು ಇರಿಸುವ ಮುನ್ನ ಗಮನದಲ್ಲಿರಲಿ ಈ ಮುಖ್ಯ ವಿಚಾರ

Vastu Tips : ಪ್ರತಿಯೊಂದು ಮನೆಯಲ್ಲಿಯೂ ಕನ್ನಡಿ ಇರುವುದು ಅನಿವಾರ್ಯ. ಮನೆ ಎಂತಹದ್ದೇ ಆಗಿರಲಿ. ಆ ಮನೆಯಲ್ಲಿ ಒಂದಾದರೂ ಕನ್ನಡಿಯಂತೂ ಇದ್ದೇ ಇರುತ್ತದೆ. ಮಲಗುವ ಕೋಣೆ, ಸ್ನಾನಗೃಹ ಇನ್ನೂ ಕೆಲವು ಮನೆಗಳಲ್ಲಿ ಡೈನಿಂಗ್​ ಟೇಬಲ್​ಗಳು ಇರುವ ಕೋಣೆಯಲ್ಲಿಯೂ ಕನ್ನಡಿಯನ್ನು ಅಳವಡಿಸಲಾಗುತ್ತದೆ. ಆದರೆ ಈ ಕನ್ನಡಿಗಳನ್ನು ಅಳವಡಿಸುವ ಮುನ್ನ ನೀವು ವಾಸ್ತುವಿನ ಕಡೆಗೆ ಗಮನ ಹರಿಸಲೇಬೇಕು. ನೀವು ಈ ದಿಕ್ಕಿನಲ್ಲಿ ಕನ್ನಡಿಗಳನ್ನು ಇಟ್ಟಲ್ಲಿ ಮಾತ್ರ ಏಳ್ಗೆ ಕಾಣುತ್ತೀರಿ ಎಂದು ವಾಸ್ತು ಶಾಸ್ತ್ರ ಹೇಳಿದೆ.

ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಅಳವಡಿಸುವ ಮುನ್ನ ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕನ್ನಡಿಗಳು ಅವುಗಳ ಮುಂದೆ ಏನಿವೆ ಎಂಬುದನ್ನು ಪ್ರತಿಬಿಂಬಿಸುವುದರ ಜೊತೆಯಲ್ಲಿ ಅವುಗಳನ್ನು ಇರಿಸಲಾದ ಜಾಗದ ಮೇಲೂ ಸಹ ಪ್ರಭಾವ ಬೀರುತ್ತವೆ. ಹೀಗಾಗಿ ವಾಸ್ತು ಶಾಸ್ತ್ರದಲ್ಲಿ ಕನ್ನಡಿಗಳನ್ನು ಇರಿಸುವಾಗ ದಿಕ್ಕುಗಳ ಕಡೆಗೂ ಗಮನ ನೀಡುವಂತೆ ಹೇಳಲಾಗಿದೆ. ಕನ್ನಡಿಯನ್ನು ನೀವು ಸೂಕ್ತವಾದ ದಿಕ್ಕಿನಲ್ಲಿ ಇರಿಸಿದಲ್ಲಿ ಮಾತ್ರ ಅದು ಮನೆಗೆ ಒಳಿತನ್ನು ಮಾಡುತ್ತದೆ. ಮಲಗುವ ಕೋಣಡಯಲ್ಲಿ ಕನ್ನಡಿಗಳನ್ನು ಇರಿಸುವ ಮುನ್ನ ಕೆಲವೊಂದು ವಿಚಾರಗಳ ಕಡೆಗೆ ಗಮನ ನೀಡಬೇಕು.

ದಂಪತಿ ಮಲಗುವ ಕೋಣೆಯಲ್ಲಿ ದಂಪತಿ ಹಾಸಿಗೆಯ ಮೇಲೆ ಮಲಗುವಾಗ ಕನ್ನಡಿ ದಂಪತಿಯನ್ನು ಪ್ರತಿಬಿಂಬಿಸುವಂತಿರಬಾರದು. ಇನ್ನೂ ನಿರ್ದಿಷ್ಟವಾಗಿ ಹೇಳಬೇಕು ಅಂದರೆ ಕನ್ನಡಿಯು ಹಾಸಿಗೆಯ ಕಡೆಗೆ ಮುಖ ಮಾಡಿ ಇರಬಾರದು. ಇದರ ಜೊತೆಯಲ್ಲಿ ಎರಡು ಕನ್ನಡಿಗಳನ್ನು ಒಂದಕ್ಕೊಂದು ಮುಖ ಮಾಡಿ ಇಡಬಾರದು. ಇದರಿಂದ ಮನೆಯ ಸದಸ್ಯರಲ್ಲಿ ಗೊಂದಲ ವಾತಾವರಣ ಉಂಟಾಗಿರುತ್ತದೆ.

ಹಾಸಿಗೆಯ ಎದುರು ಕನ್ನಡಿಗಳನ್ನು ಇರಿಸುವುದರಿಂದ ದಂಪತಿಯ ನಡುವೆ ಆಗಾಗ ವಾದ ಹಾಗೂ ಜಗಳಗಳು ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳಿದ್ದಾರೆ. ಹೀಗಾಗಿ ಹಾಸಿಗೆಯನ್ನು ಪ್ರತಿಬಿಂಬಿಸದ ರೀತಿಯಲ್ಲಿ ಗೋಡೆಗಳ ಮೇಲೆ ಕನ್ನಡಿಯನ್ನು ಇರಿಸುವುದು ಉತ್ತಮವಾಗಿದೆ. ಇಲ್ಲವಾದಲ್ಲಿ ಬೆನ್ನು ನೋವಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಕೆಲವರು ಮನೆಯ ಗೋಡೆಗಳ ಅಂದವನ್ನು ಹೆಚ್ಚಿಸಲು ಮುರಿದ ಕನ್ನಡಿ ಅಥವಾ ಕನ್ನಡಿಯ ತುಣುಕುಗಳನ್ನು ಬಳಕೆ ಮಾಡುತ್ತಾರೆ. ಇದರಿಂದ ಮನೆಯ ಸದಸ್ಯರ ನಡುವೆ ಗೊಂದಲ ಉಂಟಾಗುತ್ತದೆ.

ಇದನ್ನು ಓದಿ : Vastu Tips: ದಂಪತಿಯ ನಡುವಿನ ಭಿನ್ನಾಭಿಪ್ರಾಯಗಳನ್ನು ದೂರಮಾಡಲು ಮನೆಯಲ್ಲಿರಲಿ ಈ ವಸ್ತು

ಇದನ್ನೂ ಓದಿ : Vastu Tips : ಮನೆಯಲ್ಲಿ ಖುಷಿ ಹೆಚ್ಚಬೇಕು ಅಂದರೆ ಈ ದಿಕ್ಕಿನಲ್ಲಿ ಲಾಫಿಂಗ್​ ಬುದ್ಧನನ್ನು ಇರಿಸಿ

Vastu Tips for Placing Mirrors in Your Bedroom

Comments are closed.