ಹುಬ್ಬಳ್ಳಿ : ಪ್ರಧಾನಿ ಮೋದಿ ಇಂದು ಗುರುವಾರ (ಜನವರಿ 12) ದಂದು ಕರ್ನಾಟಕದಲ್ಲಿ ಹುಬ್ಬಳ್ಳಿ ರಾಷ್ಟ್ರೀಯ ಯುವಜನೋತ್ಸವದ (Hubli National Youth Festival) ಉದ್ಘಾಟನೆಗೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಹುಬ್ಬಳ್ಳಿ ಗೆ ಆಗಮಿಸುವುದು ಒಂದು ರೀತಿ ಇಡೀ ಉತ್ತರ ಕರ್ನಾಟಕ್ಕೆ ಎನರ್ಜಿ ಇದ್ದಂತೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಬರುವಿಕೆಗಾಗಿ ಅವರ ಫೋಟೋಗಳನ್ನು ಹಿಡಿದುಕೊಂಡು ಮೋದಿ ಮೋದಿ ಎಂದು ಇಡಿ ಹುಬ್ಬಳ್ಳಿಯ ಜನತೆ ಜೈಕಾರ ಹಾಕುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಬರುವ ಹಾದಿಯಲ್ಲಿ ಅಪರಿಚಿತ ಮಹಾರಾಷ್ಟ್ರ ನೋಂದಾಯಿತ ಕಾರೊಂದು ಮಾರ್ಗ ಮಧ್ಯೆ ನಿಂತಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.
ಪ್ರಧಾನಿ ಮೋದಿ ಬರುವ ಹಾದಿ ಮಧ್ಯೆ ಅಪರಿಚಿತ ಕಾರೊಂದು ಎರಡು ದಿನದಿಂದ ನಿಂತಿರುತ್ತದೆ. ಈ ಅನಾಮಧೇಯ ಕಾರು ಹೊಸೂರು ಸರ್ಕಲ್ ಬಳಿ ನಿಂತಿದ್ದು, ಮಹಾರಾಷ್ಟ್ರ ನೋಂದಾವಣಿ ಹೊಂದಿರುವುದಾಗಿದೆ. ಈ ಕಾರು ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯದು ಎಂದು ಗುರುತಿಸಲಾಗಿದೆ. ಅಷ್ಟೇ ಅಲ್ಲದೇ ಈ ಕಾರು ಮಹಾರಾಷ್ಟ್ರದ ಸಾಂಗ್ಲಿ ಜಲ್ಲೆಯ ಮಕರಂದ ಎನ್ನುವರಿಗೆ ಸೇರಿದ ಕಾರು ಎಂದು ಗುರುತಿಸಲಾಗಿದೆ. ಕಾರು ನಂಬರ್ MH-10-CA-6984 ಆಗಿದ್ದು ಪೋಕ್ಸೋ ವ್ಯಾಗರ್ ಕಂಪನಿಯ ಕಾರ್ ಆಗಿರುತ್ತದೆ. ಎರಡು ದಿನದಿಂದ ಅನುಮಾಸ್ಪದವಾಗಿ ನಿಂತಿದ್ದ ಕಾರನ್ನು ಹುಬ್ಬಳ್ಳಿ ಟ್ರಾಫಿಕ್ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ : ಕರ್ನಾಟಕಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ
ಹುಬ್ಬಳ್ಳಿಯ ರಾಷ್ಟ್ರೀಯ ಯುವ ಉತ್ಸವಕ್ಕೆ ಈಗಾಗಲೇ ಪ್ರಧಾನಿ ಮೋದಿಯವರ ಆಗಮನಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಜನರು ಸೇರಿದ್ದಾರೆ. ದೆಹಲಿಯಿಂದ ಹುಬ್ಬಳ್ಳಿಯತ್ತ ಪ್ರಧಾನಿ ಮೋದಿ ಪ್ರಯಾಣ ಆರಂಭಿಸಿದ್ದು, ಮಧ್ಯಾಹ್ನ 3.45ಕ್ಕೆ ಹುಬ್ಬಳ್ಳಿಯನ್ನು ತಲುಪಲಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿಯವರನ್ನು ರಾಜ್ಯಪಾಲರು ಸ್ವಾಗತಿಸಲಿದ್ದಾರೆ. ಅವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಇರಲಿದ್ದಾರೆ.
Hubli National Youth Festival : An unknown vehicle was spotted on the way of Prime Minister Modi