Mother got suicide with childrens: 3 ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಬಾಗಲಕೋಟೆ: (Mother got suicide with childrens) ತನಗೆ ಮೂರು ಹೆಣ್ಣು ಮಕ್ಕಳು ಎಂಬ ಕಾರಣಕ್ಕೆ ಮನನೊಂದ ತಾಯಿ ಜ್ಯೂಸ್‌ ಬಾಟಲಿಯಲ್ಲಿ ವಿಷ ಬೆರೆಸಿ ಮಕ್ಕಳಿಗೆ ನೀಡಿ ಕೊನೆಗೆ ತಾನು ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ರೇಖಾ(28 ವರ್ಷ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸನ್ನಿಧಿ(7 ವರ್ಷ), ಸಮೃದ್ದಿ(4 ವರ್ಷ), ಶ್ರೀನಿಧಿ(2 ವರ್ಷ) ತಾಯಿಯ ಜೊತೆ ಸಾವನ್ನಪ್ಪಿದ ಮೂರು ಹೆಣ್ಣು ಮಕ್ಕಳು.

ತನಗಿದ್ದ ಮೂರು ಮಕ್ಕಳು ಕೂಡ ಹೆಣ್ಣು ಎಂದು ಮನನೊಂದಿದ್ದ ರೇಖಾ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ (Mother got suicide with childrens)ಯತ್ನಿಸಿದ್ದರು ಎನ್ನಲಾಗಿದೆ. ತನಗೆ ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ ಓದು, ಮತ್ತು ಅವರ ಮುಂದಿನ ಜೀವನ ಹೇಗೆ ಎಂಬ ಆಲೋಚನೆಯಲ್ಲಿದ್ದ ರೇಖಾ ಅದನ್ನೇ ಚಿಂತಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

ಮೂರು ಹೆಣ್ಣು ಮಕ್ಕಳೆಂದು ಮನನೊಂದಿದ್ದ ತಾಯಿ ರೇಖಾ ತನ್ನ ಮನೆಗೆ ಜ್ಯೂಸ್‌ ಬಾಟಲಿಯೊಂದನ್ನು ತರಿಸಿದ್ದಳು. ಏನು ಅರಿಯದ ಮಕ್ಕಳಿಗೆ ಜ್ಯೂಸ್‌ ನಲ್ಲಿ ವಿಷ ಬೆರೆಸಿ ಕುಡಿಸಿದ್ದಾಳೆ. ಮಕ್ಕಳು ಪ್ರಾಣ ಬಿಟ್ಟ ನಂತರದಲ್ಲಿ ತಾನೂ ಕೂಡ ಅದೇ ಜ್ಯೂಸ್‌ ಕುಡಿದು ಮೃತಪಟ್ಟಿದ್ದಾಳೆ. ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಆಕೆಯ ನಿರ್ಧಾರಕ್ಕೆ ಪ್ರಪಂಚವನ್ನೇ ಅರಿಯದ ಮುದ್ದು ಕಂದಮ್ಮಗಳು ಬಲಿಯಾಗಿದ್ದವು.

ಇದನ್ನೂ ಓದಿ : Mangaluru hindu worker death: ನೇತ್ರಾವತಿ ನದಿಯಲ್ಲಿ ಹಿಂದೂ ಕಾರ್ಯಕರ್ತನ ಶವ ಪತ್ತೆ: ಸಾವಿನ ಸುತ್ತ ಹಲವು ಶಂಕೆ

ಇದನ್ನೂ ಓದಿ : ಕೋಟ : ಇಸ್ಪೀಟು ಅಡ್ಡದ ಮೇಲೆ ದಾಳಿ ಪೊಲೀಸರ ದಾಳಿ : 4 ಮಂದಿ ಅರೆಸ್ಟ್

ಇದನ್ನೂ ಓದಿ : LLB student suicide: ಪ್ರಿನ್ಸಿಪಾಲ್‌ ಬುದ್ದಿ ಹೇಳಿದ್ದಕ್ಕೆ ಮನನೊಂದು ಎಲ್.ಎಲ್‌.ಬಿ ವಿದ್ಯಾರ್ಥಿ ಅತ್ಮಹತ್ಯೆ

ಮೃತ ತಾಯಿ ರೇಖಾ ಹಾಗೂ ಕುಟುಂಬ ಕಳೆದ 7 ವರ್ಷಗಳಿಂದ ತಿಮ್ಮಾಪುರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ರೇಖಾಳ ಪತಿ ಅರ್ಜುನ ಎಂಬಾತ ಕಬ್ಬು ಕಟಾವು ಮಾಡುವ ಕೆಲಸ ಮಾಡುತ್ತಿದ್ದ. ಹೀಗಾಗಿ ಬಡತನದಿಂದಲೇ ಮಾನಸಿಕ ಚಿಂತನೆಯಿಂದ ಬಳಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

Mother got suicide with childrens: Mother committed suicide by poisoning 3 daughters

Comments are closed.