ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಹೊಸ ರೂಲ್ಸ್‌ : ಅನರ್ಹರ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ? ಚೆಕ್‌ ಮಾಡಿ

Gruha Lakshmi Scheme : ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರ ಹೊಸ ರೂಲ್ಸ್‌ ಜಾರಿ ಮಾಡಿದೆ. ಒಂದೊಮ್ಮೆ ಸರಕಾರದ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಗೆ ಜಮೆ ಆಗೋದಿಲ್ಲ.

Gruha Lakshmi Scheme : ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರ ಹೊಸ ರೂಲ್ಸ್‌ ಜಾರಿ ಮಾಡಿದೆ. ಒಂದೊಮ್ಮೆ ಸರಕಾರದ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಗೆ ಜಮೆ ಆಗೋದಿಲ್ಲ. ಅಷ್ಟಕ್ಕೂ ಸರಕಾರದ ಹೊಸ ರೂಲ್ಸ್‌ನಲ್ಲೇನಿದೆ ಅನ್ನೋ ಮಾಹಿತಿ ಇಲ್ಲಿದೆ.

New rules related to Gruha Lakshmi Scheme Ineligibles will not get Gruha Lakshmi money, is your name in this list Gruha Lakshmi DBT Status Check
Image Credit to Original Source

ಕರ್ನಾಟಕದಲ್ಲಿ ನಕಲಿ ಬಿಪಿಎಲ್‌ ಕಾರ್ಡುದಾರರ ಪತ್ತೆ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಈಗಾಗಲೇ ಸಾವಿರಾರು ನಕಲಿ ಬಿಪಿಎಲ್‌ ಕಾರ್ಡು ಗಳನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇಂತಹ ನಕಲಿ ಕಾರ್ಡುಗಳನ್ನು ನೀಡಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ, ಇದುವರೆಗೆ ಹಣವನ್ನು ಪಡೆದುಕೊಳ್ಳುತ್ತಿರುವ ಜನರಿಗೆ ಸರಕಾರ ಬಿಸಿ ಮುಟ್ಟಿಸಿದೆ.

ಅರ್ಹರಾಗಿದ್ದರೂ ಕೂಡ ಬಿಪಿಎಲ್‌ ಕಾರ್ಡ್‌ ಪಡೆದುಕೊಂಡಿರುವ ಪಡಿತರ ಕಾರ್ಡುದಾರರಿಗೆ ಇನ್ಮುಂದೆ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಸಿಗೋದಿಲ್ಲ. ಸರಕಾರ ಆದಾಯ ತೆರಿಗೆ ಪಾವತಿದಾರರಿಗೆ, ಸರಕಾರಿ ನೌಕರರಿಗೆ, ನಾಲ್ಕು ಚಕ್ರದ ವಾಹನ ಹೊಂದಿದವರಿಗೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದೆ. ಇದೇ ಮಾನದಂಡವನ್ನೇ ಇದೀಗ ಗೃಹಲಕ್ಷ್ಮೀ ಯೋಜನೆಗೆ ಪ್ರಯೋಗಿಸುತ್ತಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಪಡೆಯಲು NPCI ಕಡ್ಡಾಯ : ಸರಕಾರದಿಂದ ಜಾರಿಯಾಯ್ತು ಹೊಸ ರೂಲ್ಸ್‌

ಗೃಹಲಕ್ಷ್ಮೀ ಯೋಜನೆಯ ಅನರ್ಹರ ಪಟ್ಟಿ ಪರಿಶೀಲಿಸಿ

ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಯಾರ ಹೆಸರು ಅನರ್ಹರ ಪಟ್ಟಿ ಸೇರ್ಪಡೆ ಆಗಿದೆ ಎಂಬ ಮಾಹಿತಿ ಇಲ್ಲಿದೆ. ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ : https://ahara.kar.nic.in/Home/EServices ಭೇಟಿ ನೀಡಬೇಕು. ನಂತರದಲ್ಲ ರೇಷನ್‌ ಕಾರ್ಡ್‌ ಎಂದು ಸೂಚಿಸುವ ಟ್ಯಾಬ್‌ ಓಪನ್‌ ಮಾಡಬೇಕು.

New rules related to Gruha Lakshmi Scheme Ineligibles will not get Gruha Lakshmi money, is your name in this list Gruha Lakshmi DBT Status Check
Image Credit to Original Source

ರೇಷನ್‌ ಕಾರ್ಡ್‌ ಲಿಂಕ್‌ ಕ್ಲಿಕ್‌ ಮಾಡುತ್ತಿದ್ದಂತೆಯೇ ನಿಮಗೆ ಯಾವೆಲ್ಲಾ ಕಾರ್ಡುಗಳನ್ನು ರದ್ದು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಇನ್ನು ಜಿಲ್ಲೆ, ತಾಲೂಕು, ತಿಂಗಳು ಹಾಗೂ ವರ್ಷವನ್ನು ನಮೂದಿಸಿದ್ರೆ ನಿಮ್ಮ ರೇಷನ್‌ ಕಾರ್ಡ್‌ ರದ್ದಾಗಿದೆಯಾ ಇಲ್ಲವೇ ಅನ್ನೋದು ತಿಳಿಯಲಿದೆ.  ಗೃಹಲಕ್ಷ್ಮೀ ಅನರ್ಹರ ಪಟ್ಟಿ ಈ   ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ಯುವನಿಧಿ ಯೋಜನೆಗೆ ಹೊಸ ರೂಲ್ಸ್‌ : ಈ ದಾಖಲೆ ಸಲ್ಲಿಸದಿದ್ರೆ ಸಿಗಲ್ಲ ಯುವನಿಧಿ ಯೋಜನೆಯ ಹಣ

ಒಂದೊಮ್ಮೆ ನಿಮ್ಮ ರೇಷನ್‌ ಕಾರ್ಡ್‌ ರದ್ದಾಗಿದ್ರೆ ನೀವು ನಿಮಗೆ ಇನ್ಮುಂದೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗೋದಿಲ್ಲ. ಹೀಗಾಗಿ ನಿಮ್ಮ ಕಾರ್ಡ್‌ ಯೋಗ್ಯವೇ ಅನ್ನೋದನ್ನು ಒಮ್ಮೆ ತಿಳಿದುಕೊಳ್ಳಿ. ಗೃಹಲಕ್ಷ್ಮೀ ಯೋಜನೆಯ ಮೂಲಕ ಕರ್ನಾಟಕ ಸರಕಾರ ಪ್ರತೀ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು 2,೦೦೦ ರೂಪಾಯಿ ಹಣವನ್ನು ನೀಡುತ್ತಿದೆ.

New rules related to Gruha Lakshmi Scheme Ineligibles will not get Gruha Lakshmi money, is your name in this list Gruha Lakshmi DBT Status Check
Image Credit to Original Source

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದಂತೆಯೇ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯ ಮೂಲಕ ಲಕ್ಷಾಂತರ ಮಂದಿ ಮಹಿಳೆಯರು ಪ್ರತೀ ತಿಂಗಳು 2 ಸಾವಿರ ರೂಪಾಯಿ ಆರ್ಥಿಕ ಸಹಾಯವನ್ನು ಪಡೆಯುತ್ತಿದ್ದಾರೆ. ಸರಕಾರ ಪ್ರತೀ ತಿಂಗಳ ಮೊದಲ ವಾರದಲ್ಲೇ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ : NPS To OPS : ಹಳೇ ಪಿಂಚಣಿ ಯೋಜನೆ ಜಾರಿ : ಕರ್ನಾಟಕ ಸರಕಾರದಿಂದ ಅಧಿಕೃತ ಆದೇಶ

ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇದ್ದವರು ಇದೀಗ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿಯೂ ಅಕ್ಕಿಯ ಬದಲು ಸರಕಾರ ಹಣವನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದು, ಮನೆಯ ಯಜಮಾನಿಯರ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ.

New rules related to Gruha Lakshmi Scheme : Ineligibles will not get Gruha Lakshmi money, is your name in this list ? Gruha Lakshmi DBT Status Check

Comments are closed.