Night curfew Order Cancel : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಟ್‌ ಕರ್ಪ್ಯೂ ವಾಪಾಸ್‌ : ನಿಷೇಧಾಜ್ಞೆ ಮುಂದುವರಿಕೆ

ಮಂಗಳೂರು : (Night curfew Order Cancel) ಪ್ರವೀಣ್‌ ನೆಟ್ಟಾರು, ಫಾಜಿಲ್‌ ಹತ್ಯೆಯ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೇರಿಕೆ ಮಾಡಲಾಗಿದ್ದ ನೈಟ್‌ಕರ್ಪ್ಯೂ ಆದೇಶವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ವಾಪಾಸ್‌ ಪಡೆದುಕೊಂಡಿದೆ.

ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕಿನಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿತ್ತು. ಆದರೆ ಎರಡು ದಿನಗಳ ನಂತರದಲ್ಲಿ ಸುರತ್ಕಲ್‌ನಲ್ಲಿ ಫಾಜಿಲ್‌ ಹತ್ಯೆಯಾಗಿತ್ತು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೈಟ್‌ ಕರ್ಪ್ಯೂ ಜಾರಿ ಮಾಡಿತ್ತು. ಅಲ್ಲದೇ ನಿಷೇಧಾಜ್ಞೆಯನ್ನು ಜಿಲ್ಲೆಯಾದ್ಯಂತ ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು. ನೈಟ್‌ ಕರ್ಪ್ಯೂ ಅವಧಿಯಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡುವಂತೆ ಸೂಚನೆಯನ್ನು ನೀಡಲಾಗಿತ್ತು.

ಆದ್ರೆ ಅಗಸ್ಟ್‌ 4 ರಂದು ನೈಟ್‌ಕರ್ಪ್ಯೂ ಆದೇಶದಲ್ಲಿ ಅವಧಿಯನ್ನು ಕಡಿತಗೊಳಿಸಿತ್ತು. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಮಾತ್ರವೇ ನೈಟ್‌ ಕರ್ಪ್ಯೂ ಹೇರಿಕೆ ಮಾಡಿತ್ತು. ಆದ್ರೀಗ ನೈಟ್‌ ಕರ್ಪ್ಯೂ ಆದೇಶವನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ. ಆದರೆ ನಿಷೇಧಾಜ್ಞೆ ಅಗಸ್ಟ್‌ 8ರಿಂದ 14 ರ ವರೆಗೆ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸಾಲು ಸಾಲು ಹತ್ಯೆಯಿಂದ ಉದ್ವಿಗ್ನವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್‌ ಇಲಾಖೆ ಮತ್ತು ನಗರ ಪೊಲೀಸ್‌ ಆಯುಕ್ತರು ಜಿಲ್ಲೆಯಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ಭದ್ರತೆಯನ್ನು ಕೈಗೊಂಡಿದ್ದಾರೆ. ಜನರಲ್ಲಿ ಶಾಂತಿ ಕಾಪಾಡುವಂತೆ ಪೊಲೀಸ್‌ ಇಲಾಖೆ ಮನವಿ ಮಾಡಿಕೊಂಡಿದೆ. ಅಲ್ಲದೇ ಶಾಂತಿ ಕದಡುವ ಕೃತ್ಯವನ್ನು ಎಸಗುವವರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ : CWG 2022 India Women : ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟ ಟೀಂ ಇಂಡಿಯಾ

ಇದನ್ನೂ ಓದಿ : Ravi Bopanna : ಈ ಶರೀರ ಯಾಕೆ ಹಿಂಗೇ….! ಮಾದಕ‌ ಹಾಡಿನೊಂದಿಗೆ ಮತ್ತೆ ಬಂದ‌ ರವಿಚಂದ್ರನ್

ಇದನ್ನೂ ಓದಿ : Nalin Kumar Change : ಪ್ರವೀಣ್, ಹರ್ಷ ಹತ್ಯೆಗೆ ನಳಿನ್ ಕುಮಾರ್ ತಲೆದಂಡ : ವಾರದಲ್ಲೇ ಹೊಸ ರಾಜ್ಯಾಧ್ಯಕ್ಷರ ನೇಮಕ

Night curfew Order Cancel Dakshina Kannada district, prohibition order continued

Comments are closed.