ಚಿಕ್ಕಮಗಳೂರು : ಗಲಭೆಕೋರರ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಿರುವ ಉತ್ತರ ಪ್ರದೇಶ ಸರಕಾರದ ಕ್ರಮ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಇದೀಗ ಇಂತಹದ್ದೇ ಪ್ರಯೋಗಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸ್ವಕ್ಷೇತ್ರ ಕಾಫಿನಾಡು ಚಿಕ್ಕಮಗಳೂರು ಸಜ್ಜಾಗಿದೆ. ಅಕ್ರಮವಾಗಿ ಗೋಮಾಂಸ ಮಾರಾಟ (illegal beef sellers) ಮಾಡುವವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಚಿಕ್ಕಮಗಳೂರು ನಗರ ಸಭೆ ಅಧಿಕಾರಿಗಳು ಅಕ್ರಮ ಗೋಮಾಂಸ ಮಾರಾಟದ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಗೋಮಾಂಸ ಮಾರಾಟ ಮಾಡುವ ಮನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸ್ಫೋಟಕ, ಮಾದಕ ವಸ್ತು ಸೇರಿದಂತೆ ಗೋ ಹತ್ಯೆ ಮಾಡಿದ್ರೆ ಕಟ್ಟಡವನ್ನೇ ನೆಲಸಮ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
ನಗರಸಭೆ ಅಧಿಕಾರಿಗಳು ಈಗಾಗಲೇ 10ಕ್ಕೂ ಅಧಿಕ ಮನೆ, ಅಂಗಡಿಗಳಿಗೆ ನೋಟಿಸ್ ಅಂಟಿಸಿದ್ದಾರೆ. ಕಳೆದ ವಾರವಷ್ಟೇ ಗೋಮಾಂಸ ಅಡ್ಡೆಗಳ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ನಡೆಸಿ, ಜೆಸಿಬಿ ಮೂಲಕ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿತ್ತು. ಇದೀಗ ಮತ್ತೆ ಅಕ್ರಮ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಳು ನೋಟಿಸ್ ಅಂಟಿಸಿದ್ದಾರೆ. ನಗರಸಭೆ ನೋಟಿಸ್ ಅಂಟಿಸಿರುವುದು ಅಕ್ರಮ ಗೋ ಮಾಂಸ ಮಾಡುವವರಿಗೆ ನಡುಕ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಹಾದಿಯಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸ್ವಕ್ಷೇತ್ರದ ಅಧಿಕಾರಿ ಸಾಗಿದ್ದಾರೆ.
ಇದನ್ನೂ ಓದಿ : Shopian Encounter Update : ಬ್ಯಾಂಕ್ ಮ್ಯಾನೇಜರ್ ಹತ್ಯೆ, ಉಗ್ರನನ್ನು ಹೊಡೆದುರುಳಿಸಿದ ಕಾಶ್ಮೀರ ಪೊಲೀಸರು
ಇದನ್ನೂ ಓದಿ : couple murdered : ಮರ್ಯಾದಾ ಹತ್ಯೆಗೆ ಬಲಿಯಾದ ನವ ಜೋಡಿ : ಅಣ್ಣನಿಂದಲೇ ತಂಗಿ – ಭಾವನ ಬರ್ಬರ ಕೊಲೆ
Notice issued to illegal beef sellers in Chikkamagalore