Agnipath Yojana ಅಗ್ನಿಪಥ ಯೋಜನೆ ಯುವಕರಿಗೆ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಅವಕಾಶ

ಭಾರತದಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬನಿಗೂ ತಾನು ದೇಶಕ್ಕೆ ಅಳಿಲು ಸೇವೆಯನ್ನಾದರೂ ಸಲ್ಲಿಸಬೇಕು ಎಂಬ ಆಸೆ ಇದ್ದೆ ಇರುತ್ತದೆ. ಆ ಆಸೆ ಕೆಲವರಿಗೆ ದೇಶ ಕಾಯುವ ಸೈನಿಕನ ರೂಪದಲ್ಲಿ ಸಿಕ್ಕರೆ ಇನ್ನು ಕೆಲವರಿಗೆ ಸಮಾಜ ಸೇವೆಯಂತಹ ಬೇರೆ ಬೇರೆ ರೂಪದಲ್ಲಿ ಸಿಗುತ್ತದೆ. ಆದರೂ ಕೆಲವರಿಗೆ ತನ್ನ ದೇಶವನ್ನು ಕಾಯುವ ಸೈನಿಕ ತಾನಾಗಬೇಕು ಎಂಬ ಆಸೆ ಇದ್ದೆ ಇರುತ್ತದೆ. ಈ ರೀತಿ ಬಯಸುವವರಲ್ಲಿ ಕೆಲವರಿಗೆ ಆಸೆ ಈಡೇರಿದರೆ ಇನ್ನು ಕೆಲವರಿಗೆ ಆಸೆ ಈಡೇರುವುದಿಲ್ಲ. ಆದರೆ ಇದೀಗ ದೇಶದ ಸೇವೆಯನ್ನು ಮಾಡಲು, ಸೈನಿಕನಾಗಲು ಅಗ್ನಿಪಥ ಯೋಜನೆ (Agnipath Yojana ) ಒಂದು ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ.

ಹೌದು ಈ ಯೋಜನೆಯ ಅನುಸಾರ ನಾವು ಸೈನ್ಯವನ್ನು ಸೇರ ಬಹುದಾಗಿದೆ. ಕೇಂದ್ರ ಸರಕಾರವು (Central Government) ಅಗ್ನಿಪಥ್ ಎಂಬ ಯೋಜನೆ ರೂಪಿಸಿದ್ದು, ಇದರನ್ವಯ ಸೇನೆಗೆ ಸೇರಲು ಇಚ್ಛಿಸುವ ಯುವಕರಿಗೆ ಹೊಸ ರೀತಿಯ ಅವಕಾಶಗಳನ್ನು ನೀಡಲಾಗುತ್ತದೆ. ಈಗಾಗಲೇ ನೇಮಕಾತಿಯ (Recruitment) ಬಗ್ಗೆ ಮಾಹಿತಿ ಜಾರಿಗೊಳಿಸಿದ ಸರಕಾರ, ಯುವಕರ ಕನಸಿಗೆ ಹೊಸ ರೂಪ ನೀಡಲಿದೆ. ಆದರೆ ಸೆನಾ ಪಡೆಯನ್ನು ಸೇರಲು ಕೆಲವು ರೀತಿ, ನಿಯಮವನ್ನು ನೀಡಲಾಗಿದೆ.  ಅದು ಯಾವುದೆಂದು ಒಂದೊಂದಾಗಿ ನೋಡುವುದಾದರೆ.

ಅಗ್ನಿಪಥ ಯೋಜನೆಯಿಂದ (Agnipath Yojana) ರಾಷ್ಟ್ರಕ್ಕೆ ಏನು ಪ್ರಯೋಜನ ?

ವಿವಿಧತೆಯಲ್ಲಿ ಏಕತೆಯನ್ನು ಆಧರಿಸಿದ ರಾಷ್ಟ್ರ ನಮ್ಮದಾಗಿದೆ. ನಮ್ಮ ಐಕ್ಯತೆಯೊಂದಿಗೆ ಮಹಿಳೆಯರು ಸೇರಿದಂತೆ ಯುವಜನತೆಗೆ ಸಮಾನ ಅವಕಾಶಗಳನ್ನು ನೀಡಲಾಗುತ್ತಿದೆ. ಅಲ್ಲದೇ ಮಿಲಿಟರಿ ನೀತಿಯೊಂದಿಗೆ ಸಬಲೀಕರಣಗೊಂಡ ಮತ್ತು ಕೌಶಲ್ಯ ಹೊಂದಿದ ಯುವಜನತೆ ಮೂಲಕ ರಾಷ್ಟ್ರ ನಿರ್ಮಾಣ ಮಾಡಬಹುದಾಗಿದೆ.

ಸೇನಾ ಪಡೆಗಳಿಗೆ ಏನು ಪ್ರಯೋಜನ ?

ಯುವಜನತೆ ಮತ್ತು ಅನುಭವ ಹೊಂದಿದವರ ನಡುವೆ ಗರಿಷ್ಠ ಸಮತೋಲನ ತರುವುದರ ಮೂಲಕ ಯುದ್ಧ ಸಿದ್ಧತೆಯಲ್ಲಿ ಸುಧಾರಣೆ  ಮಾಡಬಹುದಾಗಿದೆ.

ಸಾರ್ವಜನಿಕರಿಗೆ ಏನು ಪ್ರಯೋಜನ ?

ಸೇನಾಪಡೆಗಳನ್ನು ಸೇರಬೇಕು ವೀರರಾಗಬೇಕು, ಎಂಬ ಹಂಬಲ ಇರುವ ಯುವಕರಿಗೆ ಅವಕಾಶ ನೀಡಲಾಗಿದೆ. ಇದರಿಂದ ಸಾರ್ವಜನಿಕರು ಮಿಲಿಟರಿ ಶಿಸ್ತು , ದೈಹಿಕ ಕ್ಷಮತೆ ಮತ್ತು ಉತ್ತಮ ನಾಗರಿಕ ಪ್ರಜೆಗಳಾಗಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೇ ಇತರೆ ನಾಗರೀಕ ಸೇವಾ ಯೋಧರಿಗೆ ಹೋಲಿಸಿದರೆ ಉತ್ತಮ ಅರ್ಥಿಕ ಪ್ಯಾಕೇಜ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಅಗ್ನಿಪಥ ಆತ್ಮನಿರ್ಭರ ಯೋಜನೆಯ ಅಡಿಯಲ್ಲಿ ವಾಯು ಸಿಬ್ಬಂದಿ (ಏರ್ ಮನ್) ಮತ್ತು ನಾವಿಕರ ನೋಂದಣಿಯನ್ನು ದೇಶಾದ್ಯಂತ ಜೇಷ್ಠತೆ ಆಧರಿಸಿ ಮಾಡಬಹುದಾಗಿದೆ. ನಂತರ ಆಯ್ಕೆಯಾದ ವ್ಯಕ್ತಿಗಳು ತಮ್ಮ ತರಬೇತಿ ಸಮಯ ಸೇರಿ 4 ವರ್ಷಗಳ ಅವಧಿಯನ್ನು ಹೊಂದಿರುತ್ತಾರೆ. ಅಲ್ಲದೇ ಪ್ರತಿ ತಿಂಗಳು ಆಕರ್ಷಕ ಭತ್ಯೆ ಮತ್ತು “ಸೇವಾ ನಿಧಿ” ಪ್ಯಾಕೇಜ್ ಕೊಡಲಾಗುತ್ತದೆ. ಶಸ್ತ್ರಾಸ್ತ್ರ ಪಡೆಗಳಲ್ಲಿ ನಿಗದಿತ ಶ್ರೇಣಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. 4 ವರ್ಷಗಳ ನಂತರ ಕೇಂದ್ರೀಕೃತ, ಪಾರದರ್ಶಕ ಮತ್ತು ಕಠಿಣ ವ್ಯವಸ್ಥೆ ಮೂಲಕ ನಿಗದಿತ ಶ್ರೇಣಿಯಲ್ಲಿ ಆಯ್ಕೆಯಾಗಲು ಶೇ .25 ರಷ್ಟು ಅಗ್ನಿವೀರರಿಗೆ ಅವಕಾಶ ನೀಡಲಾಗುತ್ತದೆ.

ಇನ್ನು ಯುವಕರು ಸೇನಾ ಪಡೆಯನ್ನು ಸೇರಲು ಕೆಲವು ಅರ್ಹತೆಯನ್ನು ಪಡೆದಿರಬೇಕಾಗುತ್ತದೆ. ಅವರು ಹದಿನೇಳುವರೆ ವರ್ಷಗಳಿಂದ 21 ವರ್ಷದೊಳಗಿನವರಾಗಿರಬೇಕಾಗುತ್ತದೆ. ನಾಲ್ಕು ವರ್ಷಗಳ ಸೇವಾ ಅವಧಿಗೆ ನಿರ್ದಿಷ್ಟ ಸೇವೆಗೆ ಸೇವಾ ಕಾಯ್ದೆ ಅಡಿ ಅಭ್ಯರ್ಥಿಗಳ ನೋಂದಣಿ  ಮಾಡಲಾಗುತ್ತದೆ. ನೇಮಕ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲದ ಕಾರಣ ಸೇವಾವಧಿಯಲ್ಲಿ ತೋರಿದ ಸಾಧನೆ ಪ್ರದರ್ಶನ ಮತ್ತು ಜೇಷ್ಠತೆಯ ಮೌಲ್ಯಮಾಪನ ಆಧರಿಸಿ ಕೇಂದ್ರೀಕೃತ ಪಾರದರ್ಶಕ ತಪಾಸಣೆ 6 ನಿಗದಿತ ಶ್ರೇಣಿಗಳಿಗೆ ಅಭ್ಯರ್ಥಿಗಳು ಶೇ .100 ರಷ್ಟು ಸ್ವಯಂ ಪ್ರೇರಿತರಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಇರುವ ಹಣಕಾಸು ಪ್ಯಾಕೇಜ್ ಗಳ ಬಗ್ಗೆ ನೋಡುತ್ತಾ ಹೋಗುವುದಾದರೆ.

ಮರಣ ಪರಿಹಾರ

ಯಾವುದೇ ವಂತಿಗೆ ನೀಡದಿದ್ದರೂ ಸಹ 48 ಲಕ್ಷ ರೂಗಳವರೆಗೆ ಜೀವ ವಿಮಾ ರಕ್ಷಣೆ ನೀಡಲಾಗುತ್ತದೆ. ಅಲ್ಲದೇ ಸೇವಾವಧಿಯಲ್ಲಿ ಮೃತಪಟ್ಟರೆ ಹೆಚ್ಚುವರಿಯಾಗಿ 44 ಲಕ್ಷ ರೂ. ಪರಿಹಾರಕ್ಕೆ ಅವಕಾಶವಿದೆ. ಮತ್ತು “ಸೇವಾ ನಿಧಿ” ಭಾಗ ಸೇರಿದಂತೆ ನಾಲ್ಕು ವರ್ಷಗಳವರೆಗೆ ಸೇವೆ ಮಾಡದಿದ್ದರೂ ಪಲಹಾರ ನೀಡಲಾಗುತ್ತದೆ.

ಗಾಯಗೊಂಡವರಿಗೆ ಪರಿಹಾರ

ವೈದ್ಯಾಧಿಕಾರಿಗಳು ನಿಗದಿಪಡಿಸಿದ ಶೇಕಡ ಎಷ್ಟು ಪ್ರಮಾಣ ವಿಕಲಾಂಗತೆ ಹೊಂದಿದ್ದಾರೆ ಎಂಬುದನ್ನು ಆಧರಿಸಿ ಪರಿಹಾರ ನೀಡಲಾಗುತ್ತದೆ. ದಿವ್ಯಾಂಗರಿಗೆ ಶೇ .100 / ಶೇ .75 / ಶೇ .50 ರಷ್ಟು ವಿಕಲಾಂಗತೆಗೆ ಕ್ರಮವಾಗಿ 44/25/15 ಲಕ್ಷ ರೂ. ಒಂದು ಬಾರಿಯ ಪರಿಹಾರ ನೀಡಲಾಗುತ್ತದೆ.

ಕಾಂಪೋಸಿಟ್ ತಿಂಗಳ ಪ್ಯಾಕೇಜ್

1 ನೇ ವರ್ಷ ಪ್ಯಾಕೇಜ್ 30.000 ರೂ ಇದ್ದು ನಂತರ 4 ನೇ ವರ್ಷದವರೆಗೆ ಬಂದಾಗ 40.000 ರೂ.ಗಳಿಗೆ ಏರಿಕೆ  ಮಾಡಲಾಗುತ್ತದೆ.

ಭತ್ಯೆ

ಅಪಾಯ ಮತ್ತು ಸಂಕಷ್ಟ ಭತ್ಯೆ, ಪಡಿತರ, ಸಮವಸ್ತ್ರ, ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ.

ಸೇವಾ ನಿಧಿ

ಶೇ .30 ರಷ್ಟು ತಿಂಗಳ ಭತ್ಯೆಗಳನ್ನು ಸಾರ್ವಜನಿಕರಿಂದ ವಂತಿಗೆ ರೂಪದಲ್ಲಿ ಸಂಗ್ರಹ ಮಾಡಲಾಗುತ್ತದೆ.  10.04 ಲಕ್ಷಕ್ಕೂ ಅಧಿಕ ಆವರ್ತ ನಿಧಿ ಮತ್ತು ಬಡ್ಡಿ ಸೇರಿಸಿ, ನಾಲ್ಕು ವರ್ಷಗಳ ನಂತರ ಆದಾಯ ತೆರಿಗೆಯಿಂದ ವಿನಾಯ್ತಿ ಕೊಡಲಾಗುತ್ತದೆ.

ಸೇವಾವಧಿ ಪೂರ್ಣಗೊಂಡ ನಂತರ

4 ವರ್ಷಗಳ ಅವಧಿ ಪೂರ್ಣಗೊಳಿಸಿದ ನಂತರ ಎಲ್ಲ ಅಭ್ಯರ್ಥಿಗಳು “ಸೇವಾ ನಿಧಿ” ಪಡೆಯಲು ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಮತ್ತು ತನ್ನ ಕೌಶಲ್ಯದಿಂದ ಪಡೆದ ಪ್ರಮಾಣಪತ್ರ ಮತ್ತು ಉನ್ನತ ಶಿಕ್ಷಣಕ್ಕೆ ಅಂಕಗಳ ನೆರವು ನೀಡುತ್ತದೆ.

ಇದನ್ನೂ ಓದಿ: Rob Greenfield : ಆಧುನಿಕ ಗಾಂಧಿ ರೋಬ್ ಗ್ರೀನ್‌ಫೀಲ್ಡ್

ಇದನ್ನೂ ಓದಿ:KL Rahul Fitness : ಕೆ.ಎಲ್ ರಾಹುಲ್ ಗಾಯದ ಕುರಿತು ಬಿಗ್ ಅಪ್‌ಡೇಟ್ : Exclusive

Agnipath Recruitment Scheme: New Scheme for Indian Armed Forces

Comments are closed.