NY Gopalakrishna Joined Congress: ಬಿಜೆಪಿಯ ಮಾಜಿ ಶಾಸಕ ಎನ್‌ವೈ ಗೋಪಾಲಕೃಷ್ಣ ಕಾಂಗ್ರೆಸ್‌ ಸೇರ್ಪಡೆ

ಬೆಂಗಳೂರು : (NY Gopalakrishna Joined Congress) ರಾಜ್ಯ ರಾಜಕಾರಣದಲ್ಲಿ ಚುನಾವಣಾ ಪೈಪೋಟಿ ಜೋರಾಗೆ ನಡೆಯುತ್ತಿದೆ. ಟಿಕೆಟ್‌ ಹಂಚಿಕೆಗೆ ಹೈಕಮಾಂಡ್‌ ಹೆಣಗಾಡುತ್ತಿದ್ದು, ಈ ನಡುವೆ ಶಾಸಕರು ಪಕ್ಷ ತೊರೆಯುವ ನಿರ್ಧಾರವನ್ನು ಕೈಗೊಳ್ಳುತ್ತಿದ್ದಾರೆ. ಇಂದು ಒಂದೇ ದಿನಕ್ಕೆ ಇಬ್ಬರು ಬಿಜೆಪಿ ತೊರೆಯುವ ನಿರ್ಧಾರ ಮಾಡಿದ್ದು, ಬಿಜೆಪಿಗೆ ಟಿಕೆಟ್‌ ಹಂಚಿಕೆ ತಲೆನೋವಿನ ನಡುವೆ ನಾಯಕರು ಪಕ್ಷ ತೊರೆಯುವ ಆತಂಕವು ಹೆಚ್ಚಾಗಿದೆ. ಇಂದು ಬಿಜೆಪಿ ಎಮ್‌ಎಲ್‌ಸಿ ಆಯನೂರು ಮಂಜುನಾಥ್‌ ಕೂಡ ಬಿಜೆಪಿಗೆ ರಾಜಿನಾಮೆ ನೀಡಿದ್ದು, ಇದೀಗ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದು, ಶಾಸಕರಾಗಿದ್ದಂತ ಎನ್ ವೈ ಗೋಪಾಲಕೃಷ್ಣ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆ ಅಂಗೀಕಾರ ಕೂಡ ಆಗಿದೆ. ಇಂದು ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕೂಡ್ಲಿಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಎಂಎಲ್ಸಿಗಳಾದ ಪ್ರಕಾಶ್ ರಾಥೋಡ್, ದಿನೇಶ್ ಗೂಳಿಗೌಡ, ಮಾಜಿ ಮೇಯರ್ ಜೆ ಹುಚ್ಚಪ್ಪ ಮತ್ತಿತರರು ಉಪಸ್ಥಿತರಿದ್ದರು.

ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕೆಲವು ಶಾಸಕರು ಬಿಜೆಪಿ ತೊರೆದಿದ್ದರು. ದಿನಾಂಕ ಘೋಷಣೆಯಾದ ಬಳಿಕವೂ ಹಲವು ನಾಯಕರು ಬಿಜೆಪಿ ತೊರೆಯುವ ನಿರ್ಧಾರಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಂದಾದ ಮೇಲೊಂದರಂತೆ ಸಭೆ ನಡೆಸ್ತಿರೋ ಬಿಜೆಪಿ ಬಂಡಾಯಕ್ಕೆ ಅವಕಾಶವಿಲ್ಲದ, ಬಹುಮತ ತಂದುಕೊಡುವಂತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸರ್ಕಸ್ ನಡೆಸಿದೆ. ಬಿಜೆಪಿ ಪಕ್ಷದಲ್ಲಿ ಎರಡು ಬಣಗಳ ನಡುವೆಯೇ ಒಮ್ಮತವಿಲ್ಲದ ಕಾರಣ ಒಬ್ಬೊಬ್ಬರಾಗಿಯೇ ಪಕ್ಷ ಬಿಡುವ ನಿರ್ಧಾರವನ್ನು ಮಾಡುತ್ತಿದ್ದಾರೆ. ಈಗಾಗಲೇ ಟಿಕೆಟ್‌ ಹಂಚಿಕೆಗೆ ಹೆಣಗಾಡುತ್ತಿರುವ ಬಿಜೆಪಿ ಗೆ ಚುನಾವಣೆ ಹೊತ್ತಲ್ಲಿ ಶಾಸಕರು ಪಕ್ಷ ಬಿಡುತ್ತಿರುವುದು ದೊಡ್ಡ ತಲೆನೋವಾಗಿದೆ.

ಇದನ್ನೂ ಓದಿ : Rahul Gandhi defamation case : ಶಿಕ್ಷೆಯ ವಿರುದ್ಧ ಸೆಷನ್ಸ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ಕಾಂಗ್ರೆಸ್ ನಾಯಕ

ಇದನ್ನೂ ಓದಿ : MLC Ayanur Manjunath: MLC ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್

NY Gopalakrishna Joins Congress: Former BJP MLA NY Gopalakrishna joins Congress

Comments are closed.