ಸೋಮವಾರ, ಏಪ್ರಿಲ್ 28, 2025
HomekarnatakaOmicron Variant fear : ಕ್ರಿಸ್ಮಸ್, ನ್ಯೂಇಯರ್ ಗೆ ಓಮೈಕ್ರಾನ್ ಭೀತಿ : ಜಾರಿಯಾಗುತ್ತಾ ಟಫ್...

Omicron Variant fear : ಕ್ರಿಸ್ಮಸ್, ನ್ಯೂಇಯರ್ ಗೆ ಓಮೈಕ್ರಾನ್ ಭೀತಿ : ಜಾರಿಯಾಗುತ್ತಾ ಟಫ್ ರೂಲ್ಸ್?!

- Advertisement -

ಬೆಂಗಳೂರು : ರಾಜ್ಯದಲ್ಲಿ ಓಮೈಕ್ರಾನ್ ( Omicron Variant fear ) ಹಾಗೂ ಕರೋನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಬಿಗಿ ನಿಯಮಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ತಾಂತ್ರಿಕ ಸಮಿತಿ,ತಜ್ಞರ ಸಮಿತಿ ಸಲಹೆ ನೀಡುತ್ತಿದೆ. ಈ ಮಧ್ಯೆ ಸದ್ಯದಲ್ಲೇ ಇರುವ ಹೊಸ ವರ್ಷಾಚರಣೆ ಸೊಂಕಿನ ಅಪಾಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಹೊಸ ವರ್ಷಾಚರಣೆಯ ಅದ್ದೂರಿ ಸೆಲಿಬ್ರೇಶನ್ ಗೆ ಕಡಿವಾಣ ಹಾಕಬೇಕೆಂಬ ( Christmas New Year) ಒತ್ತಾಯ ಕೇಳಿಬಂದಿದೆ. ರಾಜ್ಯ ಸರ್ಕಾರ ಓಮೈಕ್ರಾನ್ ಹಾಗೂ ಕರೋ‌ನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ( tough rules implementation )ಕುರಿತು ಚರ್ಚೆ ನಡೆಸಲು ತಾಂತ್ರಿಕ ಸಮಿತಿ ಜೊತೆ ಸಭೆ ನಡೆಸಿದೆ. ಈ ಸಭೆಯಲ್ಲಿ ಸೇರಿದ್ದ ತಜ್ಞರು ಪ್ರಮುಖವಾಗಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಸಲಹೆ ನೀಡಿದ್ದಾರೆ.

ಡಿಸೆಂಬರ್ 22 ರಿಂದ ಜನವರಿ 2 ರವರೆಗೆ ಅನ್ವಯವಾಗುವಂತೆ ಹೊಸ ವರ್ಷದ ಆಚರಣೆ ಹಾಗೂ ಕ್ರಿಸ್ ಮಸ್ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಹಾಗೂ ಪ್ರಾರ್ಥನಾ ಮಂದಿರಗಳಿಗೂ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಸಲಹೆ ನೀಡಿದೆ. ಓಮೈಕ್ರಾನ್ ಹರಡುವುದನ್ನು ತಪ್ಪಿಸಲು ಹಾಗೂ ಕೊರೋ‌ನಾ ಸೋಂಕಿನ ಪ್ರಮಾಣ ಏರಿಕೆ ತಪ್ಪಿಸಲು ಜನ ಸೇರುವುದು, ಅನಗತ್ಯ ಜನಸಂದಣಿ ತಪ್ಪಿಸಲು ತಾಂತ್ರಿಕ ಸಮಿತಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಏನಿರಲಿದೆ ಪಾಲಿಕೆ ಮಾರ್ಗಸೂಚಿ ಯಲ್ಲಿ ಅನ್ನೋದನ್ನು ಗಮನಿಸೋದಾದರೇ,

  • ಡಿಸೆಂಬರ್ 22 ರಿಂದ ಜನವರಿ 02 ರವರೆಗೆ ಜಾರಿಯಾಗಲಿರೋ ಟಫ್ ರೂಲ್ಸ್ ಜಾರಿ.
  • ಹೊಸ ವರ್ಷದ ಆಚರಣೆ ಒಳಾಂಗಣ ಹಾಗೂ ಹೊರಾಂಗಣ ಸೆಲೆಬ್ರೇಷನ್ ಗೆ ಮಾರ್ಗಸೂಚಿ.
  • ದೇವಸ್ಥಾನ, ಚರ್ಚ್, ಮಸೀದಿಗೂ‌ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಸಲಹೆ.
  • ಹೆಚ್ಚು ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ ಎರಡು ವಾರ ಮಾರ್ಗಸೂಚಿ ಹೊರಡಿಸಲು ಸಲಹೆ.
  • ದೇವಸ್ಥಾನಕ್ಕೆ ಆಗಮಿಸುವವರಿಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ.
  • ಪಬ್ ಕ್ಲಬ್ ಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ.
  • ಪಬ್ ಗೆ ಬರುವ ಗ್ರಾಹಕರು ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು.
  • ಹೊರಾಂಗಣ ಪ್ರದೇಶದಲ್ಲಿ 3.5 ಚದರ ಮೀಟರ್ ನಲ್ಲಿ 200-300 ಜನರಿಗೆ ಸೀಮಿತಗೊಳಿಸುವುದು.
  • ದೇಗುಲ, ಚರ್ಚ್, ಮಸೀದಿಗಳಲ್ಲಿ ಅಂತರ ಕಾಪಾಡಿಕೊಳ್ಳಲು ಮಾರ್ಷಲ್ ಗಳ ನಿಯೋಜನೆ.

ಈ ರೀತಿ ನಿಯಮಗಳನ್ನು ಅನುಸರಿಸಲು ಮಾರ್ಗಸೂಚಿ ಬಿಡುಗಡೆ ಮಾಡುವಂತೆ ತಾಂತ್ರಿಕ ಸಮಿತಿ ಸಲಹೆ ನೀಡಿದೆ. ಸರ್ಕಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಹೊಸವರ್ಷಾಚರಣೆ ಹಾಗೂ ಕ್ರಿಸ್ಮಸ್ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಬೀಳುವ ನೀರಿಕ್ಷೆ ಇದೆ.

ಇದನ್ನೂ ಓದಿ : Omicron Treatment : ಹಳೆ ತಪ್ಪಿನಿಂದ ಪಾಠ ಕಲಿತ ಬಿಬಿಎಂಪಿ : ನಗರದಲ್ಲಿ ಓಮೈಕ್ರಾನ್ ಚಿಕಿತ್ಸೆಗೆ ಆಸ್ಪತ್ರೆಗಳು ಸಿದ್ಧ

ಇದನ್ನೂ ಓದಿ : Prohibition of Conversion Act : ಮತಾಂತರ ನಿಷೇಧ ಕಾಯಿದೆ ಜಾರಿ : ಬಿಜೆಪಿ ನಿಲುವಿಗೆ ಎಚ್.ಡಿ.ಕೆ ಅಚ್ಚರಿಯ ಹೇಳಿಕೆ

( Omicron Variant fear Karnataka Government tough rules implementation for Christmas, New Year)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular