Jio ₹1 Prepaid Plan : ಕೇವಲ 1 ರೂಪಾಯಿಯ ಪ್ರೀಪೇಯ್ಡ್​ ಪ್ಲಾನ್​ ಪರಿಚಯಿಸಿದ ರಿಲಯನ್ಸ್​ ಜಿಯೋ

ಏರ್​ಟೆಲ್​ ಹಾಗೂ ವೊಡಾಫೋನ್​ ಐಡಿಯಾದಂತಹ ಟೆಲಿಕಾಂ ಕಂಪನಿಗಳು ಗ್ರಾಹಕರ ಜೇಬಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿರುವುದರ ನಡುವೆಯೇ ರಿಯಲನ್ಸ್​ ಜಿಯೋ( Jio ₹1 Prepaid Plan) ಇದೀಗ ಕೇವಲ 1 ರೂಪಾಯಿ ಮೌಲ್ಯದ ವಿಶೇಷ ಪ್ಲಾನ್​ ಒಂದನ್ನು ಪರಿಚಯಿಸಿದೆ.

ಇದು ಬಹುಶಃ ಭಾರತೀಯ ಟೆಲಿಕಾಂ ಕಂಪನಿಗಳು ಈವರೆಗೆ ನೀಡಿದ ಅತ್ಯಂತ ಅಗ್ಗದ ಪ್ರೀಪೇಯ್ಡ್​ ಯೋಜನೆ ಎಂದು ಹೇಳಿದರೂ ಸಹ ತಪ್ಪಾಗಲಾರದು.ಇದೊಂದು ಡೇಟಾ ಯೋಜನೆಯಾಗಿದ್ದು ಇಲ್ಲಿ ಗ್ರಾಹಕರಿಗೆ 100 ಎಂಬಿ ಡೇಟಾ ಸಿಗಲಿದೆ. ಈ ರಿಚಾರ್ಜ್​ 30 ದಿನಗಳ ಮಾನ್ಯತೆಯನ್ನು ಹೊಂದಿದೆ. 100 ಎಂಬಿ ಡೇಟಾವನ್ನು ಖಾಲಿ ಮಾಡಿದ ಬಳಿಕ 4ಜಿ ಇಂಟರ್ನೆಟ್​ ವೇಗವು 64 ಕೆಬಿಪಿಎಸ್​ಗೆ ಇಳಿಯಲಿದೆ.

ಈ 1 ರೂಪಾಯಿ ರೀಚಾರ್ಜ್​ ಪ್ಲಾನ್​ನ್ನು ನೀವು ಕ್ಯೂ ಅಪ್​ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ. ಅಂದರೆ ಒಂದು ಪ್ಲಾನ್ ಖಾಲಿಯಾದ ತಕ್ಷಣವೇ ನೀವು ಇನ್ನೊಂದು ಬಾರಿ ರಿಚಾರ್ಜ್ ಮಾಡಿಕೊಳ್ಳಬಹುದು. ಇದು ಹೆಚ್ಚಾಗಿ ಆನ್​ಲೈನ್​ನಲ್ಲಿ ಇರಲು ಬಯಸದವರಿಗೆ , ಅಥವಾ ಹೆಚ್ಚಿನ ಡೇಟಾವನ್ನು ವ್ಯರ್ಥ ಮಾಡುವವರಿಗೆ ಅನುಕೂಲರಾಗಿಯಾಗಿದೆ.

ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಈ ಯೋಜನೆಯು ಪ್ರಸ್ತುತ ಅಸ್ತಿತ್ವದಲ್ಲಿ ಇರುವ ರಿಲಯನ್ಸ್​ ಜಿಯೋದ 1 ಜಿಬಿ ಡೇಟಾ ಪ್ಲಾನ್​ಗಿಂತಲೂ ಹೆಚ್ಚು ಅಗ್ಗ ಎನಿಸಿದೆ. 1 ಜಿಬಿ ಡೇಟಾ ಪ್ಲಾನ್​ ಬೆಲೆಯು 15 ರೂಪಾಯಿ ಆಗಿದೆ. ಆದರೆ ಇಲ್ಲಿ ನೀವು 1 ಜಿಬಿ ಡೇಟಾ ಖರೀದಿ ಮಾಡಲು 10 ರೂಪಾಯಿ ವ್ಯಯಿಸಿದರೆ ಸಾಕಾಗುತ್ತದೆ. 1 ರೂಪಾಯಿ ರಿಚಾರ್ಜ್​ನ್ನು ನೀವು 10 ಬಾರಿ ಮಾಡಿದರೂ ಸಹ 1 ಜಿಬಿ ಡೇಟಾ ನಿಮಗೆ ಕೇವಲ 10 ರೂಪಾಯಿಗೆ ಸಿಕ್ಕಂತಾಗುತ್ತದೆ.

ಆದರೆ ನೀವು ಗಮನಿಸಲೇಬೇಕಾದ ಮತ್ತೊಂದು ವಿಚಾರ ಅಂದರೆ ಈ ಯೋಜನೆ ಎಲ್ಲಾ ಗ್ರಾಹಕರಿಗೂ ಲಭ್ಯವಿರೋದಿಲ್ಲ. ಮೈ ಜಿಯೋ ಅಪ್ಲಿಕೇಶನ್​​ನ ವ್ಯಾಲ್ಯೂ ವಿಭಾಗದಲ್ಲಿ ಆಯ್ದ ಗ್ರಾಹಕರಿಗೆ ಮಾತ್ರ ಈ ಯೋಜನೆಯನ್ನು ಬಳಕೆ ಮಾಡಲು ರಿಲಯನ್ಸ್​ ಜಿಯೋ ಕಂಪನಿಯು ಅವಕಾಶ ನೀಡಿದೆ.

ಇದನ್ನು ಓದಿ :Ramesh Jarakiholi Statement : ವಿಧಾನಪರಿಷತ್​ ಚುನಾವಣಾ ಫಲಿತಾಂಶದ ವಿಚಾರವಾಗಿ ಸ್ಫೋಟಕ ಹೇಳಿಕೆ ನೀಡಿದ ರಮೇಶ್​ ಜಾರಕಿಹೊಳಿ

ಇದನ್ನೂ ಓದಿ: JioMart taps WhatsApp :ಗುಡ್​​ನ್ಯೂಸ್​: ವಾಟ್ಸಾಪ್​​ನಲ್ಲಿ ಖರೀದಿ ಮಾಡಿ ದಿನಸಿ ಸಾಮಗ್ರಿ..!

ಇದನ್ನೂ ಓದಿ : ಇನ್ಫಿನಿಕ್ಸ್ ನೋಟ್ ಸಿರೀಸ್ ಫೋನ್ ಲಾಂಚ್: ಪಾಕೆಟ್ ಹಾಗೂ ಗೇಮಿಂಗ್ ಫ್ರೆಂಡ್ಲಿ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಇದನ್ನೂ ಓದಿ : Asus Chromebook CX1101 : ವರ್ಕ್ ಫ್ರಂ ಹೋಂ ಮಾಡುವವರಿಗೆ ಕೇವಲ 19,999 ರೂ. ಬೆಲೆಯ ಉತ್ತಮ ಲ್ಯಾಪ್‌ಟಾಪ್ ಇಲ್ಲಿದೆ

Reliance Jio ₹1 Prepaid Plan With 30-Day Validity: How To Activate, What Does It Have

Comments are closed.