Siddaramaiah is angry against the BJP : ಬೊಮ್ಮಾಯಿ ಆರ್​ಎಸ್​ಎಸ್​ ಕೈಗೊಂಬೆ, ಅಸಮರ್ಥ ಸಿಎಂ : ಸಿದ್ದರಾಮಯ್ಯ ಕಿಡಿ

ಮೈಸೂರು : Siddaramaiah is angry against the BJP : ಮೈಸೂರಿನಲ್ಲಿ ಇಂದು ಮಾಧ್ಯಮ ಸಂವಾದ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗಾಗಿ ಎಸಿಬಿ ರದ್ದು ಮಾಡುತ್ತೇನೆ ಎಂದವರು ಇವರು. ರದ್ದು ಮಾಡಿದ್ದಾರಾ..? ಬಿಜೆಪಿ ನೀಡಿದ ಪ್ರಣಾಳಿಕೆಯಲ್ಲಿ 90 ಪ್ರತಿಶತ ಭರವಸೆಗಳನ್ನು ಈಡೇರಿಸಿಲ್ಲ. ಈ ಬಗ್ಗೆ ಬೇಕಿದ್ದರೆ ಬಿಜೆಪಿಯವರೊಂದಿಗೆ ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.


ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳುತ್ತಾರೆ .ಕಾನೂನು ಪ್ರಕಾರ ನೇಮಕಾತಿ ನಡೆದಿದೆ ಎಂದು ಹೇಳ್ತಾರೆ. ಆದರೆ ಅಭ್ಯರ್ಥಿಗಳ ಉತ್ತರ ಪತ್ರಿಕೆ ತಿದ್ದೋಕೆ ಎಡಿಜಿಪಿ ಅಮೃತ್​ ಪೌಲ್​ 300 ಜನರ ಬಳಿ 1 ಕೋಟಿ ತನಕ ವಸೂಲಿ ಮಾಡಿದ್ದಾರೆ. ಅಧಿಕಾರಿಗಳು ಅಕ್ರಮ ಮಾಡಿದ್ದಾರೆ ಅಂತಾ ಸಚಿವರು ಕೈ ತೊಳೆದುಕೊಳ್ತಿದ್ದಾರೆ. ಈ ಅಕ್ರಮದಲ್ಲಿ ಸಚಿವರು, ಸಿಎಂ ಎಲ್ಲರೂ ಭಾಗಿಯಾಗಿದ್ದಾರೆ. ಸೂಕ್ತ ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯಾಂಶ ಹೊರ ಬೀಳಲಿದೆ ಎಂದು ಹೇಳಿದ್ದಾರೆ.


ಹೋಟೆಲ್​ನ ಮೆನುವಿನಂತೆ ಒಂದೊಂದು ಹುದ್ದೆಗೆ ಒಂದೊಂದು ಬೆಲೆ ಫಿಕ್ಸ್​ ಮಾಡಿದ್ದಾರೆ. ಅತ್ಯಂತ ಭ್ರಷ್ಟಾಚಾರದ ಸರ್ಕಾರ ಅಂದರೆ ಅದು ಬಿಜೆಪಿ ಸರ್ಕಾರ. ಕಮಿಷನ್​​ ತೆಗೆದುಕೊಂಡ ಮೇಲೆ ಅಭಿವೃದ್ಧಿ ಕಾರ್ಯ ಮಾಡೋಕೆ ಆದರೂ ಹೇಗೆ ಸಾಧ್ಯ. ನಮ್ಮ ಸರ್ಕಾರದ ಅವಧಿಯಲ್ಲಿ 15 ಲಕ್ಷ ಮನೆ ಕಟ್ಟಿಸಿದ್ದೇವೆ. ಕುಮಾರಸ್ವಾಮಿ ಅಧಿಕಾರಾವಧಿ ಸೇರಿಸಿ ರಾಜ್ಯದಲ್ಲಿ 4.5 ವರ್ಷಗಳ ಅವಧಿ ಅಧಿಕಾರ ನಡೆದಿದೆ. ಆದರೆ ಇಲ್ಲಿಯವರೆಗೆ ಮನೆ ಮಂಜೂರಾಗಿದೆಯೇ ಹೊರತು ಸರ್ಕಾರ ಒಂದು ಮನೆಯನ್ನೂ ಕಟ್ಟಿಸಿಲ್ಲ. ಬಡವರಿಗೆ ಸೈಟ್​ ನೀಡಿಲ್ಲ. ಸದನದಲ್ಲಿ ಈ ಬಗ್ಗೆ ಸೋಮಣ್ಣನನ್ನು ಕೇಳಿದರೆ ಉತ್ತರ ನೀಡ್ತಿಲ್ಲ ಎಂದು ಗುಡುಗಿದ್ದಾರೆ.


ಸರ್ಕಾರ ನಡೆಯುತ್ತಿಲ್ಲ ತಳ್ಳುತ್ತಿದ್ದೀವಿ ಅಂತಾ ಹಿರಿಯ ಸಚಿವ ಮಾಧುಸ್ವಾಮಿ ಸತ್ಯವನ್ನೇ ಹೇಳಿದ್ದಾರೆ. ಇದನ್ನೆಲ್ಲ ನಾವು ಹೇಳಿದ್ರೆ ಧರ್ಮ – ಜಾತಿಯನ್ನು ಮಧ್ಯ ತರ್ತಾರೆ. ಸಿಎಂ ಬೊಮ್ಮಾಯಿ ಆರ್​ಎಸ್​ಎಸ್​ ಕೈಗೊಂಬೆ, ಅಸಮರ್ಥ ಮುಖ್ಯ ಮಂತ್ರಿ ಎಂದು ಕಿಡಿ ಕಾರಿದರು.


ಇನ್ನು ಇದೇ ವೇಳೆ ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್​ ರಾಜೀನಾಮೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಸಿದ್ದರಾಮಯ್ಯ, ಈ ಬಗ್ಗೆ ತಿಳಿದುಕೊಂಡು ಹೈಕಮಾಂಡ್​ ಜೊತೆ ಚರ್ಚಿಸಿ ಬಳಿ ಹೇಳಿಕೆ ನೀಡುತ್ತೇನೆ ಅಂದಿದ್ದಾರೆ.

ಇದನ್ನು ಓದಿ : Shaheen Shah Afridi : ಕಾಲಿಗೆ ಸ್ಟ್ರೆಚರ್ ಕಟ್ಟಿಕೊಂಡಿದ್ದ ಪಾಕ್ ವೇಗಿ ಅಫ್ರಿದಿಯನ್ನು ಭೇಟಿ ಮಾಡಿದ ಕೊಹ್ಲಿ, ರಾಹುಲ್

ಇದನ್ನೂ ಓದಿ : Savarkar book : ಗಣೇಶೋತ್ಸವಕ್ಕೆ ಸಾವರ್ಕರ್ ಮೆರುಗು: ಸಾವಿರ ಸಾವಿರ ಸಂಖ್ಯೆಯಲ್ಲಿ ಸೇಲ್ ಆಗ್ತಿದೆ ಸಾವರ್ಕರ್ ಬುಕ್

Opposition leader Siddaramaiah is angry against the BJP government

Comments are closed.