ತುಮಕೂರು : Savarkar adhyayana peetha : ರಾಜ್ಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಾವರ್ಕರ್ ಫೋಟೋ ವಿಚಾರವಾಗಿ ಉಂಟಾದ ಘರ್ಷಣೆಗಳು ಇನ್ನೂ ನೆನಪಿನಲ್ಲಿದೆ. ಶಿವಮೊಗ್ಗದಲ್ಲಂತೂ ಸಾವರ್ಕರ್ ಫೋಟೋ ವಿಚಾರದ ಗಲಾಟೆಯು ಚಾಕು ಇರಿತದವರೆಗೂ ಹೋಗಿ ತಲುಪಿದೆ. ಇದಾದ ಬಳಿಕ ಇನ್ನೂ ಒಂದು ಹೆಜ್ಜೆ ಮುಂದುವರಿದ ಬಿಜೆಪಿಗರು ಈ ಬಾರಿ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಗಣಪತಿ ಮೂರ್ತಿಯ ಜೊತೆಯಲ್ಲಿ ಸಾವರ್ಕರ್ ಫೋಟೋವನ್ನು ಇಡಲೂ ಸಹ ಪ್ಲಾನ್ ಮಾಡ್ತಿದ್ದಾರೆ. ಈ ಎಲ್ಲದರ ನಡುವೆ ಇದೀಗ ತುಮಕೂರಿನಲ್ಲಿ ಸದ್ದಿಲ್ಲದೇ ಸಾವರ್ಕರ್ ದಂಗಲ್ ಆರಂಭಗೊಂಡಿದೆ.
ಆಜಾದಿ ಕಾ ಅಮೃತ ಮಹೋತ್ಸವದ ದಿನದಂದು ಸಾವರ್ಕರ್ ಫೋಟೋ ಹರಿಯುವ ಮೂಲಕ ಶುರುವಾದ ವಿವಾದವು ಇದೀಗ ತುಮಕೂರು ವಿಶ್ವವಿದ್ಯಾಲಯದಲ್ಲಿಯೂ ಸಹ ಸಾವರ್ಕರ್ ಪೀಠದ ಕಿಚ್ಚು ಹೆಚ್ಚಾಗುವಂತೆ ಮಾಡಿದೆ. ತುಮಕೂರು ವಿಶ್ವ ವಿದ್ಯಾಲಯವು ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಮುಂದಾಗಿದೆ. ಈ ವಿಚಾರವಾಗಿ ಇದೀಗ ಪರ ವಿರೋಧದ ಚರ್ಚೆಯು ಜೋರಾಗಿ ನಡೆಯುತ್ತಿದೆ.
ವಿವಿ ಸಿಂಡಿಕೇಟ್ ಸಭೆಯಲ್ಲಿ ಸಾವರ್ಕರ್ ಅಧ್ಯಯನ ಪೀಠವನ್ನು ಆರಂಭಿಸಲು ಗ್ನೀನ್ ಸಿಗ್ನಲ್ ನೀಡಲಾಗಿದೆ. ವಿವಿ ಸಿಂಡಿಕೇಟ್ ಸದಸ್ಯ ಟಿ.ಡಿ ವಿನಯ್ ಸಾವರ್ಕರ್ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ ಪ್ರಸ್ತಾಪ ಮಾಡಿದ್ದರು. ಅಲ್ಲದೇ ಈ ಪೀಠವನ್ನು ಸ್ಥಾಪನೆ ಮಾಡಲು ವೈಯಕ್ತಿಕವಾಗಿ 1 ಲಕ್ಷ ರೂಪಾಯಿಗಳನ್ನು ಠೇವಣಿ ರೂಪದಲ್ಲಿ ನೀಡಿದ್ದಾರೆ. ಪೀಠ ಸ್ಥಾಪನೆ ಮಾಡಲು ಸಿಂಡಿಕೇಟ್ ಸದಸ್ಯರು ಒಪ್ಪಿಗೆ ಕೂಡ ನೀಡಿದ್ದರು. ಇದಾದ ಬಳಿಕ ಸರ್ಕಾರದಿಂದ ಅನುಮತಿಯನ್ನು ಕೋರಿ ತುಮಕೂರು ವಿವಿ ಪತ್ರವನ್ನು ಕಳುಹಿಸಿದೆ.
ಆದರೆ ಈ ನಡುವೆ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಯಾವುದೇ ಕಾರಣಕ್ಕೂ ಸಾವರ್ಕರ್ ಪೀಠ ಸ್ಥಾಪನೆಯಾಗಬಾರದು ಎಂದು ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸಾವರ್ಕರ್ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಬೇಡಿ ಎಂದು ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ತುಮಕೂರು ವಿಶ್ವ ವಿದ್ಯಾಲಯದ ಕುಲಪತಿಗಳ ಕಚೇರಿ ಎದುರು ಪ್ರತಿಭಟನೆ ನಡೆದಿದೆ.
ತುನಕೂರು ಜಿಲ್ಲಾ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟ, ಎನ್ಎಸ್ಯುಐ, ಶರಣರ ಸೇನೆ, ದಲಿತ ವಿದ್ಯಾರ್ಥಿ ಪರಿಷತ್, ಭಾರತೀಯ ವಿದ್ಯಾರ್ಥಿ ದಳ, ಎಸ್ಎಫ್ಸಿ ಸೇರಿದಂತೆ 12ಕ್ಕೂ ಅಧಿಕ ಸಂಘಟನೆಗಳು ಒಂದಾಗಿ ಈ ಸಾವರ್ಕರ್ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿವೆ .ದೇಶದ್ರೋಹಿ ಸಾವರ್ಕರ್ ಎಂದು ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಸಾವರ್ಕರ್ ಅಧ್ಯಯನ ಪೀಠ ನಿರ್ಮಾಣ ಯೋಜನೆಯನ್ನು ಕೈ ಬಿಡದೇ ಹೋದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಇದನ್ನು ಓದಿ : zee kannada jote joteyali : ಜೊತೆ ಜೊತೆಯಲಿ ಆರ್ಯವರ್ಧನ್ ಆಗಿ ಬರಲಿದ್ದಾರೆ ನಟ ಹರೀಶ್ ರಾಜ್
ಇದನ್ನೂ ಓದಿ : Mithali Raj Join BJP : ಬಿಜೆಪಿ ಸೇರ್ತಾರಾ ಸ್ಟಾರ್ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ?
Opposition to establishment of Savarkar adhyayana peetha in Tumkur