Ramya : ‘ನಾಳೆ ಅಧಿಕೃತವಾಗಿ ಗುಡ್​ ನ್ಯೂಸ್​ ನೀಡುವೆ’ : ಫ್ಯಾನ್ಸ್​ ತಲೆಯಲ್ಲಿ ಹುಳಬಿಟ್ಟ ನಟಿ ರಮ್ಯಾ

90 ರ ದಶಕದಲ್ಲಿ ಜನಿಸಿದವರ ಪಾಲಿಗೆ ಸ್ಯಾಂಡಲ್​ವುಡ್​ ಕ್ವೀನ್​​ ರಮ್ಯಾ ಅಂದರೆ ಒಂದು ರೀತಿ ಡ್ರೀಮ್​ ಗರ್ಲ್​ ಇದ್ದಂತೆ. ಸದ್ಯ ನಟಿ ರಮ್ಯಾ ಚಿತ್ರರಂಗದಿಂದ ದೂರ ಉಳಿದಿದ್ದರೂ ಸಹ ಅನೇಕರಿಗೆ ಅವರಿನ್ನೂ ಫೇವರಿಟ್​ ಹಿರೋಯಿನ್​ ಅಂದರೆ ತಪ್ಪಾಗೋದಿಲ್ಲ. ಒಂದು ಕಾಲದಲ್ಲಿ ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡುತ್ತಾ ಸ್ಯಾಂಡಲ್​ವುಡ್​ನ್ನೇ ಆಳಿದ್ದ ನಟಿ ರಮ್ಯಾ ಕ್ರಮೇಣ ರಾಜಕೀಯದ ಕಡೆಗೆ ಮುಖ ಮಾಡಿದ್ದರು. ಇದಾದ ಬಳಿಕ ಅವರು ರಾಜಕೀಯದಲ್ಲಿಯೂ ಅಷ್ಟೊಂದು ಆ್ಯಕ್ಟಿವ್​ ಆಗಿ ಇರಲಿಲ್ಲ.


ಸಿನಿಮಾ ಹಾಗೂ ರಾಜಕಾರಣ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದ ನಟಿ ರಮ್ಯಾ ಕೆಲ ಕಾಲ ಎಲ್ಲಿದ್ದರು ಎಂಬುವುದೇ ಅನೇಕರಿಗೆ ತಿಳಿದಿರಲಿಲ್ಲ. ಆದರೆ ಈಗ ಹಾಗಿಲ್ಲ. ನಟಿ ರಮ್ಯಾ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಮಾತ್ರವಲ್ಲದೇ ಆಗಾಗ ಸಿನಿಮಾ ರಂಗಕ್ಕೆ ಸೇರಿದ ಕೆಲವು ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ತಿದ್ದಾರೆ.


ರಮ್ಯಾ ಎಲ್ಲಾದರೂ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು. ಅವರಿಗೆ ಎದುರಾಗುವ ಎರಡು ಪ್ರಶ್ನೆಗಳಂದರೆ ನಿಮ್ಮ ಮದುವೆ ಯಾವಾಗ..? ಹಾಗೂ ನಿಮ್ಮ ಮುಂದಿನ ಸಿನಿಮಾವನ್ನು ನಾವು ನೋಡೋದು ಯಾವಾಗ..? ಎಂಬುದಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ರಾಜ್​ ಬಿ ಶೆಟ್ಟಿ ಜೊತೆ ನಟಿ ರಮ್ಯಾ ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ವದಂತಿಯನ್ನು ರಾಜ್​ ಬಿ ಶೆಟ್ಟಿ ತಳ್ಳಿ ಹಾಕಿದ್ದರು.


ಆದರೆ ಇದೀಗ ಈ ಎಲ್ಲಾ ಮಾತಿಗೆ ಪೂರಕ ಎಂಬಂತಹ ಸ್ಟೋರಿಯೊಂದನ್ನು ನಟಿ ರಮ್ಯಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾಳೆ ಅಧಿಕೃತವಾಗಿ ಬೆಳಗ್ಗೆ 11:15ಕ್ಕೆ ನಿಮಗೆಲ್ಲ ಸಿಹಿ ಸುದ್ದಿ ನೀಡುತ್ತೇನೆ ಎಂದು ರಮ್ಯಾ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇಂತಹದ್ದೊಂದು ವಿಚಾರವನ್ನು ರಮ್ಯಾ ಹಂಚಿಕೊಂಡಿದ್ದೇ ತಡ ಅಭಿಮಾನಿಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಗಣೇಶ ಚತುರ್ಥಿಯ ಶುಭದಿನದಂದು ರಮ್ಯಾ ಯಾವ ಶುಭಸುದ್ದಿಯನ್ನು ನೀಡಬಹುದು..? ಮದುವೆಯಾಗುತ್ತಿರೋದಾಗಿ ಘೋಷಣೆ ಮಾಡುತ್ತಾರಾ? ಅಥವಾ ಹೊಸ ಸಿನಿಮಾವನ್ನು ಘೋಷಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡ್ತಾರಾ? ಹೀಗೆ ನೂರೆಂಟು ಆಲೋಚನೆಗಳನ್ನು ಇದೀಗ ಫ್ಯಾನ್ಸ್​ ತಲೆಯಲ್ಲಿ ಓಡಾಡುತ್ತಿದೆ. ಆದರೆ ರಮ್ಯಾ ಹೇಳಿರುವ ಆ ಗುಡ್​ ನ್ಯೂಸ್​ ಯಾವುದು ಎಂದು ತಿಳಿದುಕೊಳ್ಳಲು ನಾಳೆ ಬೆಳಗ್ಗೆ 11:15ರವರೆಗೆ ಕಾಯಲೇಬೇಕಿದೆ.

ಇದನ್ನು ಓದಿ : Mithali Raj Join BJP : ಬಿಜೆಪಿ ಸೇರ್ತಾರಾ ಸ್ಟಾರ್ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ?

ಇದನ್ನೂ ಓದಿ : Shubman Gill dating : ಈ ಬಾಲಿವುಡ್ ನಟಿ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಟೀಮ್ ಇಂಡಿಯಾ ಸ್ಟಾರ್ ಶುಭಮನ್ ಗಿಲ್?

Ramya Aka Divya Spandana Says I Will Share Good News Officially

Comments are closed.