Mobile Blast : ಆಟವಾಡುತ್ತಿದ್ದಾಗ ಮೊಬೈಲ್‌ ಬ್ಯಾಟರಿ ಬ್ಲಾಸ್ಟ್‌ : 10 ವರ್ಷದ ಬಾಲಕ ಗಂಭೀರ

ಹಾವೇರಿ : 10 ವರ್ಷದ ಬಾಲಕನೋರ್ವ ಆಟವಾಡುತ್ತಿದ್ದ ವೇಳೆಯಲ್ಲಿ ಮೊಬೈಲ್‌ ಬ್ಯಾಟರಿ ಸ್ಪೋಟಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

ಕಾರ್ತಿಕ್‌ ( 10 ವರ್ಷ) ಎಂಬಾತನೇ ಗಾಯಗೊಂಡ ಬಾಲಕ. ಮನೆಯ ಪಕ್ಕದಲ್ಲಿ ಕಾರ್ತಿಕ್‌ ಆಟವಾಡುತ್ತಿದ್ದ. ಈ ವೇಳೆಯಲ್ಲಿ ಮೊಬೈಲ್‌ ಬ್ಯಾಟರಿಯೊಂದು ಸಿಕ್ಕಿದೆ. ಬಾಲಕ ಬ್ಯಾಟರಿಯನ್ನು ಕೈ ಹಿಡಿದು ಆಟವಾಡಲು ಶುರುಮಾಡಿದ್ದಾನೆ. ಈ ವೇಳೆಯಲ್ಲಿ ಬ್ಯಾಟರಿ ಸ್ಪೋಟಗೊಂಡಿದೆ.

ಇದನ್ನೂ ಓದಿ : ಕೊರೊನಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ ..?

ಘಟನೆಯಲ್ಲಿ ಕಾರ್ತಿಕ ಮುಖ ಹಾಗೂ ಕೈಗೆ ಗಾಯವಾಗಿದೆ. ಕೂಡಲೇ ಬಾಲಕನನ್ನು ಸವಣೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇನ್ನು ಹಳೆಯ ಬ್ಯಾಟರಿ ಆಗಿದ್ದರಿಂದ ಸ್ಪೋಟಗೊಂಡಿದೆ ಎನ್ನಲಾಗುತ್ತಿದೆ.

Comments are closed.