PM Modi : ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್‌ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ ಪಿಎಂ ನರೇಂದ್ರ ಮೋದಿ

ಹಾವೇರಿ : ರಷ್ಯಾ ಹಾಗೂ ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ದದಲ್ಲಿ ಹಾವೇರಿ ಮೂಲದ ನವೀನ್‌ ಶೇಖರಪ್ಪ ಬಲಿಯಾಗಿದ್ದಾರೆ. ಇದೀಗ ನವೀನ್‌ ತಂದೆ ಶೇಖರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆಯಲ್ಲಿ ಮೋದಿ ಅವರ ಮುಂದೆ ನವೀನ್‌ ತಂದೆ ಕಣ್ಣಿರಿಟ್ಟಿದ್ದಾರೆ.

ಸ್ನೇಹಿತರ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ನವೀನ್‌ ( Naveen )

ಕಳೆದ ಕೆಲವು ದಿನಗಳಿಂದಲೂ ನವೀನ್‌ ಹಾಗೂ ಸ್ನೇಹಿತರು ಬಂಕರ್‌ನಲ್ಲಿಯೇ ಉಳಿದುಕೊಂಡಿದ್ದರು. ಆದರೆ ಇಂದು ಬೆಳಗ್ಗೆ 6 ಗಂಟೆಗೆ ಕರ್ಪ್ಯೂ ಸಿಡಿಲ ಮಾಡಿದ್ದರು. ಈ ವೇಳೆಯಲ್ಲಿ ಬಂಕರ್‌ನಲ್ಲಿ ಕೆಲವು ಕನ್ನಡಿಗರನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಉಳಿದ ಜ್ಯೂನಿಯರ್‌ ವಿದ್ಯಾರ್ಥಿಗಳನ್ನು ಕರೆತರುವುದಾಗಿ ಹೇಳಿ ನವೀನ್‌ ಉಳಿದ ವಿದ್ಯಾರ್ಥಿಗಳ ಜೊತೆ ಉಳಿದುಕೊಂಡಿದ್ದಾನೆ.

ಬೆಳಗ್ಗೆ 6.45 ರ ಸುಮಾರಿಗೆ ತನ್ನ ಸ್ನೇಹಿತನಾಗಿರುವ ಯಶವಂತ್‌ ಜೊತೆ ತಿಂಡಿ ಸೇರಿದಂತೆ ಆಹಾರ ಸಾಮಗ್ರಿಗಳನ್ನು ತರುವ ಸಲುವಾಗಿ ಸೂಪರ್‌ ಮಾರ್ಕೆಟ್‌ಗೆ ತೆರಳಿದ್ದಾರೆ ಆದರೆ ವಿಪರೀತ ಚಳಿಯನ್ನು ತಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನವೀನ್‌ ಸ್ನೇಹಿತನನ್ನು ಬಂಕರ್‌ಗೆ ತೆರಳಿ ವಿಶ್ರಾಂತಿ ಪಡೆಯುವಂತೆ ಹೇಳಿ ಕಳುಹಿಸಿಕೊಟ್ಟಿದ್ದ. ಸೂಪರ್‌ ಮಾರ್ಕೆಟ್‌ ಮುಂಭಾಗದಲ್ಲಿನ ಕ್ಯೂನಲ್ಲಿ ನಿಂತು ಆಹಾರ ಸಾಮಗ್ರಿಗಾಗಿ ಕಾಯುತ್ತಿದ್ದರು.

ಯಶವಂತ್‌ ಬಂಕರ್‌ಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದ ವೇಳೆಯಲ್ಲಿ ದೊಡ್ಡ ಮಟ್ಟದ ಸ್ಪೋಟವೊಂದು ಕೇಳಿಬಂದಿತ್ತು. ಕೂಡಲೇ ಯಶವಂತ್‌ ನವೀನ್‌ ಮೊಬೈಲ್‌ಗೆ ಕರೆ ಮಾಡಿದ್ದರು. ಆದರೆ ನವೀನ್‌ ಮೊಬೈಲ್‌ ಸ್ವೀಕರಿಸಿದ್ದ ರಷ್ಯಾದ ಪ್ರಜೆ, ನವೀನ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸ್ನೇಹಿತರ ಪ್ರಾಣ ಉಳಿಸಲು ಹೊರಟಿದ್ದ ನವೀನ್‌ ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇದರಿಂದಾಗಿ ನವೀನ್‌ ಕುಟುಂಬಸ್ಥರು ಚಿಂತಾಕ್ರಾಂತರಾಗಿದ್ದಾರೆ.

ನವೀನ್‌ ಶೇಖರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಿಎಂ ಬಸವರಾಜ್‌ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಆದಷ್ಟು ಶೀಘ್ರದಲ್ಲಿಯೇ ಮೃತ ದೇಹವನ್ನು ಹುಟ್ಟೂರಿಗೆ ತರುವ ವ್ಯವಸ್ಥೆಯನ್ನು ಮಾಡುವ ಭರವಸೆಯನ್ನು ನೀಡಿದ್ದಾರೆ.

ಇದನ್ನೂ ಓದಿ : ಉಕ್ರೇನ್‌ನಲ್ಲಿ ಕರ್ನಾಟಕ ಮೂಲದ ನವೀನ್‌ ಸಾವು, ಪೋಷಕರಲ್ಲಿ ಹೆಚ್ಚಿದ ಆತಂಕ

ಇದನ್ನೂ ಓದಿ : Naveen Death Ukraine : ನವೀನ್ ಮೃತದೇಹ ಹುಟ್ಟೂರಿಗೆ ತರಲು ತುರ್ತುಕ್ರಮ : ಸಿಎಂ ಬೊಮ್ಮಾಯಿ

( PM Modi Speaks to Family of Indian Student Naveen Killed in Kharkiv)

Comments are closed.