ಭಾನುವಾರ, ಏಪ್ರಿಲ್ 27, 2025
Homekarnatakaರಾಜಕೀಯ ಚಾಣಾಕ್ಯರು : ಇವರೇ ನೋಡಿ ದೇಶ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹೆಗಾರರು ಹಾಗೂ...

ರಾಜಕೀಯ ಚಾಣಾಕ್ಯರು : ಇವರೇ ನೋಡಿ ದೇಶ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹೆಗಾರರು ಹಾಗೂ ತಂತ್ರಗಾರರು

ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist ) ಪ್ರಮುಖ ಪಾತ್ರ ವಹಿಸುತ್ತಾರೆ. ದೇಶದ ಪ್ರಮುಖ ಯುವ ರಾಜಕೀಯ ಸಲಹೆಗಾರರು ಹಾಗೂ ತಂತ್ರಗಾರರ ಪಟ್ಟಿ ಈ ರೀತಿ ಇದೆ.

- Advertisement -

ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist ) ಪ್ರಮುಖ ಪಾತ್ರ ವಹಿಸುತ್ತಾರೆ. ದೇಶದ ಪ್ರಮುಖ ಯುವ ರಾಜಕೀಯ ಸಲಹೆಗಾರರು ಹಾಗೂ ತಂತ್ರಗಾರರ ಪಟ್ಟಿ ಈ ರೀತಿ ಇದೆ.

ಪ್ರಶಾಂತ್ ಕಿಶೋರ್
ಬಿಹಾರದ ಕೋನರ್ ಗ್ರಾಮದಲ್ಲಿ ಜನಿಸಿರುವ ಪ್ರಶಾಂತ್ ಕಿಶೋರ್ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. 2014ರ ಚುನಾವಣೆಯಲ್ಲಿ ನರೇಂದ್ರ ಮೋದಿಯ ಜಯದ ಮೂಲಕ ಇವರು ದೇಶಾದ್ಯಂತ ಪ್ರಸಿದ್ಧಿಗೆ ಬಂದರು.

ಸುನಿಲ್ ಕೋಣಗೋಲ್
ಕರ್ನಾಟಕದ ಬಳ್ಳಾರಿ ಜಿಲ್ಲೆಯವರಾದ ಸುನಿಲ್ ಕೂಣಗೋಳ್ ಚುನಾವಣೆಗಳನ್ನು ಗೆಲ್ಲುವ ನಿಸ್ಸೀಮರೆಂದು ಖ್ಯಾತಿಗಳಿಸಿದವರು. ಈ ಮೊದಲು ವಿದೇಶದ ಬಹುದೊಡ್ಡ ಕಂಪನಿ ಮೇಕಿ ನೀ ಜೊತೆಗೆ ಕೆಲಸ ಮಾಡಿದ್ದಾರೆ.

ನಿರಂಜನ ರಮೇಶ್ ಬಾಬು
ತಮಿಳುನಾಡು ಮೂಲದ ನಿರಂಜನ ರಮೇಶ್ ಬಾಬು ಡಿಜಿಟಲ್ ಮೀಡಿಯಾಗಳಲ್ಲಿ ಹೆಚ್ಚಿನ ತನ್ನ ಕೌಶಲ್ಯಗಳನ್ನು ಹೊಂದಿರುವ ರಾಜಕೀಯ ಸಲಹೆಗಾರರು ಆಗಿದ್ದಾರೆ . 2016 ರಲ್ಲಿ ತಮಿಳುನಾಡಿನ ಚುನಾವಣೆಯ ಸಂದರ್ಭದಲ್ಲಿ ಇವರು ಮುನ್ನೆಲೆಗೆ ಬಂದಿದ್ದಾರೆ.

ಇದನ್ನೂ ಓದಿ : ಬಿಜೆಪಿ ಅಸಮಾಧಾನಕ್ಕೆ ಸೈಲೆಂಟ್‌ ಆಗಿಯೇ ಮದ್ದೆರೆದ ರಾಜ್ಯಾಧ್ಯಕ್ಷ : ಬಿಎಸ್‌ ಯಡಿಯೂರಪ್ಪ ಹಾದಿಯಲ್ಲೇ ಪುತ್ರ ಬಿವೈ ವಿಜಯೇಂದ್ರ

ನರೇಶ್ ಅರೂರ
ಡಿಸೈನ್ ಬಾಕ್ಸ್ ಎಂಬ ಸಂಸ್ಥೆಯ ಮೂಲಕ ಚುನಾವಣಾ ತಂತ್ರಗಾರಿಕೆಯನ್ನು ಮಾಡಿ ಬಹುತೇಕ ಚುನಾವಣೆಗಳನ್ನು ಗೆದ್ದುಕೊಂಡಿರುವ ಯಶಸ್ವಿ ಚುನಾವಣೆ ತಂತ್ರಜ್ಞ ನರೇಶ್ ಅರೋರ ಮೂಲತಃ ಪಂಜಾಬಿನವರು.

ಅಂಕಿತ್ ಲಾಲ್
ಅಂಕಿತ ಲಾಲ್ 2012ರಿಂದ 2020 ರವರೆಗೆ ಹಲವಾರು ಚುನಾವಣೆಗಳಲ್ಲಿ ತಮ್ಮ ಶಕ್ತಿ ಸಾಮರ್ಥ್ಯವನ್ನು ತೋರಿಸುದವರು. 2020 ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಮಿತ್ ಮಾನವೀಯ
ಬಿಜೆಪಿಯ ಐಟಿ ಸೆಲ್ಲಿನ ಮುಖ್ಯಸ್ಥರಾಗಿರುವ ಅಮಿತ್ ಮಾಳವಿಯ ದೇಶದ ಪ್ರತಿಭಾವಂತ ಚುನಾವಣಾ ತಂತ್ರಗಾರ ರಲ್ಲಿ ಒಬ್ಬರು. ಮೂಲತಃ ಉತ್ತರ ಪ್ರದೇಶದವರಾದ ಇವರು 2009 ರಿಂದ ಚುನಾವಣಾ ತಂತ್ರಗಾರಿಕೆ ರಾಜಕಾರಣದಲ್ಲಿದ್ದಾರೆ.

ನವನೀತ್ ಡಿ ಹಿಂಗಾಣಿ
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರಾದ ನವನೀತ ಡಿ ಹಿಂಗಾಣಿ ಮೂಲತಃ ಕಾರ್ಪೊರೇಟ್ ಕಾನೂನು ನ್ಯಾಯವಾದಿ. ಆಯ್ದ ವ್ಯಕ್ತಿಗಳಿಗೆ ರಾಜಕೀಯ ಹಾಗೂ ಚುನಾವಣಾ ಸಲಹೆಗಳನ್ನು ನೀಡಿ ಅನೇಕ ಚುನಾವಣೆಗಳಲ್ಲಿ ಯಶಸ್ಸು ಕಂಡಿರುವ ಪ್ರತಿಭಾವ0ತ ಚುನಾವಣಾ ತಂತ್ರಗಾರ.

ಸೌರಭ ವ್ಯಾಸ್
ತನ್ನದೇ ಆದ ಎಲೆಕ್ಷನ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿರುವ ಸೌರಭ , ಸರ್ವೇ ರಿಸರ್ಚ್ ಹಾಗೂ ಒಪಿನಿಯನ್ ಪೋಲ್ ಮೇಲೆ ಹೆಚ್ಚು ಕೆಲಸ ಮಾಡುತ್ತಾರೆ.

ಇದನ್ನೂ ಓದಿ : ಅಂದು ಸಾಮಾನ್ಯ ಪತ್ರಕರ್ತ. ಇಂದು ಫೈಯರ್‌ ಬ್ರ್ಯಾಂಡ್‌ ಶಾಸಕ : ಆರ್‌ಎಸ್‌ಎಸ್‌, ಬಿಜೆಪಿ ಮನಗೆದ್ದ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್‌

Political Chanakyas These are the most talented young political advisors and strategists in india

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular