ಬಿಜೆಪಿ ಅಸಮಾಧಾನಕ್ಕೆ ಸೈಲೆಂಟ್‌ ಆಗಿಯೇ ಮದ್ದೆರೆದ ರಾಜ್ಯಾಧ್ಯಕ್ಷ : ಬಿಎಸ್‌ ಯಡಿಯೂರಪ್ಪ ಹಾದಿಯಲ್ಲೇ ಪುತ್ರ ಬಿವೈ ವಿಜಯೇಂದ್ರ

BJP Karnataka State President BY Vijayendra : ಕರ್ನಾಟಕದಲ್ಲಿ ಆರಂಭದಲ್ಲೇ ನೂತನ ರಾಜ್ಯಾಧ್ಯಕ್ಷರಿಗೆ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರ ಆಯ್ಕೆಗೆ ಬಂಡಾಯದ ಬಾವುಟ ತೋರಿದ್ದ ಬಿಜೆಪಿಯ ಶಾಸಕರು ಈಗ ತಣ್ಣಗಾಗಿದ್ದಾರೆ. ಕೇವಲ ತಣ್ಣಗಾಗಿದ್ದು ಮಾತ್ರವಲ್ಲ ಮರಿ ರಾಜಾಹುಲಿಯ ಆಡಳಿತಕ್ಕೂ ಹೊಂದಿಕೊಳ್ಳುವ ಯತ್ನದಲ್ಲಿದ್ದಾರೆ.

BJP Karnataka State President BY Vijayendra : ಕರ್ನಾಟಕದಲ್ಲಿ ಆರಂಭದಲ್ಲೇ ನೂತನ ರಾಜ್ಯಾಧ್ಯಕ್ಷರಿಗೆ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರ ಆಯ್ಕೆಗೆ ಬಂಡಾಯದ ಬಾವುಟ ತೋರಿದ್ದ ಬಿಜೆಪಿಯ ಶಾಸಕರು ಈಗ ತಣ್ಣಗಾಗಿದ್ದಾರೆ. ಕೇವಲ ತಣ್ಣಗಾಗಿದ್ದು ಮಾತ್ರವಲ್ಲ ಮರಿ ರಾಜಾಹುಲಿಯ ಆಡಳಿತಕ್ಕೂ ಹೊಂದಿಕೊಳ್ಳುವ ಯತ್ನದಲ್ಲಿದ್ದಾರೆ. ಅದರಲ್ಲೂ ಸದಾ ಬಿಎಸ್‌ ಯಡಿಯೂರಪ್ಪ (BS Yediyurappa) ಅವರ ಕುಟುಂಬದ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ಸೈಲೆಂಟ್ ಆಗಿದ್ದು,  ಬಿವೈ ವಿಜಯೇಂದ್ರ ತಂದೆಯಂತೆ ಮತ್ತೊಮ್ಮೆ ಪಕ್ಷದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಹಲವು ಬಿಜೆಪಿಯ ನಾಯಕರು ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟಕ್ಕೇರುತ್ತಿದ್ದಂತೆ ಸಹಜವಾಗಿಯೇ ಕೆರಳಿ ಕೆಂಡವಾಗಿದ್ದರು. ಮತ್ತೊಮ್ಮೆ ಬಿಎಸ್‌ ಯಡಿಯೂರಪ್ಪ ಕುಟುಂಬಕ್ಕೆ ಮಣೆ ಹಾಕಿದ್ದು, ಪಕ್ಷ ಮತ್ತೆ ಬಿಎಸ್‌ ಯಡಿಯೂರಪ್ಪ ನಿಯಂತ್ರಣಕ್ಕೆ ಬಂದಿದ್ದು, ಬಿಜೆಪಿಯ ನಾಯಕರಿಗೆ ಹೋಲಿಸಿದರೇ ತೀರಾ ಎಳೆಯ ರಾಜಕಾರಣಿ ಎನ್ನಿಸುವ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿದ್ದು ಬಿಜೆಪಿ ನಾಯಕರು , ಹಿರಿ ತಲೆಗಳು ಮುನಿಸಿಕೊಳ್ಳಲು ಹಲವು ಕಾರಣಗಳಿದ್ದವು.

BJP Karnataka State President BY Vijayendra On BS Yediyurappa Path, Rebel MLAS Silent
Image Credit to Original Source

ಅದರಲ್ಲೂ ಬಹಿರಂಗವಾಗಿಯೇ ಅಸಮಧಾನ ತೋಡಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್‌ ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಅಧಿಕಾರ ಪಡೆದಿದ್ದಾರೆ ಎಂದೆಲ್ಲ ಬಡಬಡಿಸಿದ್ದರು. ಅಷ್ಟೇ ಅಲ್ಲ ಹೈಕಮಾಂಡ್ ಭೇಟಿ ಮಾಡಿ ರಾಜ್ಯದಲ್ಲಿ ನಡೆಯುತ್ತಿರೋ ವಿದ್ಯಮಾನಗಳನ್ನು ಅವರ ಗಮನಕ್ಕೆ ತಂದು ವಿಜಯೇಂದ್ರ ದರ್ಬಾರಗೆ ಕಡಿವಾಣ ಹಾಕೋದಾಗಿಯೂ ಹೇಳಿಕೊಂಡಿದ್ದರು.

ಆದರೆ ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಹೈಕಮಾಂಡ್ ಭೇಟಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೈಕಮಾಂಡ್ ಜೊತೆ ಸ್ಪಷ್ಟವಾಗಿ ಮಾತುಕತೆ ನಡೆಸಿದ್ದು, ರಾಜ್ಯದಲ್ಲಿ ಪಕ್ಷದ ಸ್ಥಿತಿ, ಹಿರಿಯರ ನಡೆ ಹಾಗೂ ಅಸಮಧಾನದ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರಂತೆ.

ಇದನ್ನೂ ಓದಿ : ಪುಷ್ಪಾ, ರೂಪಾ, ವೀಣಾ, ಸೌಮ್ಯ, ರಮ್ಯ, ಕುಸುಮಾ : ಕಾಂಗ್ರೆಸ್ ಲೋಕಸಭಾ ಟಿಕೇಟ್ ಗೆ 15 ಮಹಿಳಾ ಮಣಿಗಳ ಲಾಬಿ

ಮುಂಬರುವ ಲೋಕಸಭಾ ಚುನಾವಣೆಯ ಸವಾಲುಗಳು, ಗ್ಯಾರಂಟಿಗಳಿಂದ ಪಕ್ಷಕ್ಕಾಗಿರುವ ನಷ್ಟ, ಓಟ ಬ್ಯಾಂಕ್ ಗಳು ಚೆದುರಿರೋದು, ಹಿರಿಯ ನಾಯಕರ ಲೂಸ್ ಟಾಕ್ ಗಳಿಂದ ಪಕ್ಷಕ್ಕಾಗುತ್ತಿರೋ ಮುಜುಗರ, ಬಿಜೆಪಿಯ ಹಿರಿಯ ನಾಯಕರೇ ಬಾಯಿಗೆ ಬಂದಂತೆ ಮಾತಾಡ್ತಿರೋದರಿಂದ ಕಾರ್ಯಕರ್ತರ ಉತ್ಸಾಹ ಕುಂದುತ್ತಿರೋದು ಹೀಗೆ ಎಲ್ಲ‌ ಮಾಹಿತಿಗಳನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.

BJP Karnataka State President BY Vijayendra On BS Yediyurappa Path, Rebel MLAS Silent
Image Credit to Original Source

ಇದರಿಂದ ಎಚ್ಚೆತ್ತ ಬಿಜೆಪಿ ಹೈಕಮಾಂಡ್ ವಿ.ಸೋಮಣ್ಣ, ಬಸನಗೌಡ ಪಾಟೀಲ್‌ ಯತ್ನಾಳ್, ಅರವಿಂದ್ ಬೆಲ್ಲದ‌ ಸೇರಿದಂತೆ ಹಲವು ಬಿಜೆಪಿಯ ಅಸಮಧಾನಿತ‌ ನಾಯಕರಿಗೆ ವಾರ್ನಿಂಗ್ ನೀಡಿದ್ದು ಪಕ್ಷದ ಅಸಮಧಾನಗಳನ್ನು ಸಾರ್ವಜನಿಕ ಚರ್ಚಾ ವಿಷಯವಾಗಿಸದಂತೆ‌ಸೂಚನೆ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ : ಸುನಿಲ್‌ ಕುಮಾರ್‌ ಆರ್ಭಟಕ್ಕೆ ನಲುಗಿದ ಸರಕಾರ : ವಿಪಕ್ಷ ನಾಯಕನಾಗಿ ಎಡವಿದ್ರಾ ಆರ್‌.ಅಶೋಕ್‌ ?

ಈಗಾಗಲೇ ವಿಧಾನಸಭೆ ಚುನಾವಣೆ ಸೋತಿದ್ದಿರಿ. ಲೋಕಸಭಾ ಚುನಾವಣೆ ಕಣ್ಣ ಮುಂದಿದೆ. 28 ಕ್ಷೇತ್ರಗಳನ್ನು ಗೆಲ್ಲುವ ಸವಾಲಿದೆ. ಅದರ ಕಡೆ ಗಮನ ಕೊಡಿ. ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರ ಕೈಬಲಪಡಿಸಿ. ಚುನಾವಣೆ ಗೆದ್ದು ಬನ್ನಿ. ಆಗ ಸ್ಥಾನಮಾನದ ಬಗ್ಗೆ ಮಾತನಾಡೋಣ‌ ಈಗ ನಮ್ಮವರನ್ನೇ ನಾವು ಟೀಕಿಸುತ್ತ ಕೂರುವ ಸಮಯವಲ್ಲ ಎಂದು ಎಚ್ಚರಿಸಿದ್ದಾರಂತೆ.

ಹೀಗಾಗಿ ಯತ್ನಾಳ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಅಸಮಧಾನಗಳನ್ನು ಮರೆತು ವಿಜಯೇಂದ್ರ ನಾಯಕತ್ವದಲ್ಲೇ ಅನುಸರಿಸಿಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಅದರಲ್ಲೂ ಪ್ರಹ್ಲಾದ್‌ ಜೋಶಿ, ಆರ್.ಅಶೋಕ್ ಅವರಂತ ನಾಯಕರು ಹಿರಿಯ ಅಸಮಧಾನಿತರ ಮನವೊಲಿಸುವ ಪ್ರಯತ್ನವನ್ನು ಆರಂಭಿಸಿದ್ದಾರಂತೆ.

ಇದನ್ನೂ ಓದಿ : ಅಂದು ಸಾಮಾನ್ಯ ಪತ್ರಕರ್ತ. ಇಂದು ಫೈಯರ್‌ ಬ್ರ್ಯಾಂಡ್‌ ಶಾಸಕ : ಆರ್‌ಎಸ್‌ಎಸ್‌, ಬಿಜೆಪಿ ಮನಗೆದ್ದ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್‌

ಹೀಗಾಗಿ ವಿಜಯೇಂದ್ರ ಆಡಳಿತದಲ್ಲೂ ತಮ್ಮ ತಂದೆಯ ರಣನೀತಿಗಳನ್ನೇ ಮುಂದುವರೆಸಿಕೊಂಡು ಹೋದಂತಿದ್ದು, ತಮ್ಮ ಬಗೆಗಿನ ಟೀಕೆಗಳಿಗೆ ಸಾರ್ವಜನಿಕ ವೇದಿಕೆಯಲ್ಲಿ ಸ್ಪಷ್ಟನೆ , ಉತ್ತರ ನೀಡುವ ಬದಲು ಚೆಂಡ್ ನ್ನು ಹೈಕಮಾಂಡ್ ಅಂಗಳಕ್ಕೆ ಎಸೆದು ತಂದೆಯಂತೆಯೇ ರಾಜಕೀಯ ಮುತ್ಸದ್ಧಿ ನಡೆ ತೋರಿದ್ದಾರೆ. ಹೀಗಾಗಿ ವಿಜಯೇಂದ್ರ ಬಿಜೆಪಿಯ ಎದುರಾಳಿಗಳನ್ನೆಲ್ಲ ಮೂಲೆಗುಂಪು ಮಾಡಿ ಹೋರಾಟ ಮುಂದುವರೆಸಿದ್ದು, ಲೋಕಾಸಭಾ ಚುನಾವಣೆಯಲ್ಲಿ ಗೆದ್ದು ಟೀಕೆಗಳಿಗೆ ಸಾಧನೆ ಮೂಲಕ ಉತ್ತರ ನೀಡೋ ಸಿದ್ಧತೆಯಲ್ಲಿದ್ದಾರೆ.

BJP Karnataka State President BY Vijayendra On BS Yediyurappa Path, Rebel MLAS Silent

Comments are closed.