Pramod Muthalik:‘ಪಿಎಫ್​ಐ ಬ್ಯಾನ್​ ಮಾಡಿ ಸರ್ಕಾರದಿಂದ ದೇಶದ ಗಂಡಾಂತರ ನಾಶ’ : ಪ್ರಮೋದ್​ ಮುತಾಲಿಕ್​

ಧಾರವಾಡ/ಕಲಬುರಗಿ : Pramod Muthalik : ದೇಶದಲ್ಲಿ ಪಿಎಫ್​​ಐ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್​ ಮಾಡಿರುವ ಸರ್ಕಾರದ ನಿರ್ಧಾರವನ್ನು ಶ್ರೀರಾಮ ಸೇನೆ ಸ್ವಾಗತಿಸಿದೆ. ಈ ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪಿಎಫ್​ಐ ಬ್ಯಾನ್​ ಮಾಡಿದೆ. ದೇಶದ ಸುರಕ್ಷತಾ ದೃಷ್ಟಿಯಿಂದ ಪಿಎಫ್​​ಐನ್ನು ಬ್ಯಾನ್​ ಮಾಡಿರುವುದು ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ.


ಪಿಎಫ್​ಐನ್ನು ಬ್ಯಾನ್​ ಮಾಡುವ ಅವಶ್ಯಕತೆಯಿತ್ತು. ಕೇಂದ್ರ ಸರ್ಕಾರಕ್ಕೆ ನಾನು ಈ ವಿಚಾರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ಸಂಬಂಧ ನಾವು ಕಳೆದ ಹದಿನೈದು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಈ ಸಂಘಟನೆ ಎಂದೋ ಬ್ಯಾನ್​ ಆಗಬೇಕಿತ್ತು. ತಡವಾಗಿಯಾದರೂ ಬ್ಯಾನ್​ ಮಾಡಿರುವುದು ಅಭಿನಂದನೀಯ ವಿಚಾರ . ದೇಶದ ಗಂಡಾಂತರ ಹಾಗೂ ಅಪಾಯ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡಿದೆ ಎಂದು ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.


ಸರ್ಕಾರದ ಈ ನಿರ್ಧಾರದ ಬಳಿಕವಾದರೂ ಮುಸ್ಲಿಂ ಸಮಾಜ ಇದರಿಂದ ಪಾಠ ಕಲಿತುಕೊಳ್ಳಲಿ. ತಮ್ಮ ಸಮಾಜದ ಯುವಕರ ಬಗ್ಗೆ ಮುಸ್ಲಿಂ ಹಿರಿಯರು ಇನ್ನಾದರೂ ಎಚ್ಚರಿಕೆ ವಹಿಸಬೇಕು. ತಮ್ಮ ಯುವಕರು ಯಾವ ದಾರಿಯಲ್ಲಿ ಹೋಗ್ತಿದ್ದಾರೆ ಎಂಬುದನ್ನು ನೋಡಬೇಕು. ದೇಶದ್ರೋಹಿ ಚಟುವಟಿಕೆ ಮಾಡಿದಾಗ ಪೊಲೀಸರು ಗಮನಕ್ಕೆ ತರಬೇಕು. ಈ ದೇಶದಲ್ಲಿ ಹುಟ್ಟಿ, ಇಲ್ಲಿನ ಅನ್ನ ತಿಂದ ಮೇಲೆ ದೇಶಕ್ಕೆ ಬದ್ಧರಾಗಬೇಕು. ಇಸ್ಲಾಂ ಯುವಕರ ವಿಕೃತ ಕನಸನ್ನು ತಡೆಯುವ ಕಾರ್ಯವನ್ನು ಮುಸ್ಲಿಂ ಸಮಾಜದ ಮುಖಂಡರೇ ಮಾಡಬೇಕು.ಪ್ರತಿಯೊಂದು ಮದರಸಾಗಳಲ್ಲಿಯೂ ಮುಸ್ಲಿಮರ ಮಾನಸಿಕ ಸ್ಥಿತಿಯನ್ನು ಬದಲಾವಣೆ ಮಾಡುವಂತಹ ಕೆಲಸ ನಡೆಯಲಿ ಎಂದು ಹೇಳಿದ್ದಾರೆ.


ಇತ್ತ ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಕೇಂದ್ರ ಸರ್ಕಾರ ದೇಶದ್ರೋಹಿ. ಪಿಎಫ್​ಐ ಸಂಘಟನೆಯನ್ನು ಬ್ಯಾನ್​ ಮಾಡಿದ್ದು ಸ್ವಾಗತರ್ಹ. ಸಮಾಜ ಸೇವೆಯ ಮುಖವಾಡವನ್ನಿಟ್ಟುಕೊಂಡು ಪಾಕಿಸ್ತಾನದ ಜೊತೆಯಲ್ಲಿ ಪಿಎಫ್​ಐ ಸಂಬಂಧವನ್ನು ಬೆಳೆಸಿತ್ತು. ಈ ಮೂಲಕ ದೇಶದಲ್ಲಿ ಅಹಿತಕರ ಘಟನೆಗಳನ್ನು ನಡೆಸಲು ಸಂಚು ರೂಪಿಸಿತ್ತು. ಪಿಎಫ್​ಐ ಮುಖಂಡರನ್ನು ಬಂಧಿಸುವುದು ಈ ದೇಶಕ್ಕೆ ಅತೀ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : Hardik Pandya Natasha Stankovic : ಪತ್ನಿಯ ಫ್ಯಾಮಿಲಿಯನ್ನು ಮೊದಲ ಬಾರಿ ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ.. ಅಳಿಯನನ್ನು ನೋಡಿ ಅತ್ತೆ-ಮಾವ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : Sanju Samson Cutout : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೂ ಮುನ್ನ ಮೈದಾನದ ಹೊರಗೆ ಸಂಜು ಸ್ಯಾಮ್ಸನ್ ಕಟೌಟ್

Pramod Muthalik’s reaction on PFI ban

Comments are closed.