Praveen Nettaru murder case : ಪ್ರವೀಣ್​ ಹತ್ಯೆ ಪ್ರಕರಣ ಎನ್​ಐಎಗೆ ವಹಿಸಿ ಸಿಎಂ ಬೊಮ್ಮಾಯಿ ಆದೇಶ

ಬೆಂಗಳೂರು : Praveen Nettaru murder case : ರಾಜ್ಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದ್ದ ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಎನ್​ಐಎಗೆ ಹಸ್ತಾಂತರಿಸಿದೆ. ಇಂದು ಪೊಲೀಸ್​ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ಕರೆದ ಸಿಎಂ ಬಸವರಾಜ ಬೊಮ್ಮಾಯಿ ಈ ಆದೇಶವನ್ನು ನೀಡಿದ್ದಾರೆ. ಪ್ರವೀಣ್​ ಹತ್ಯೆಯಲ್ಲಿ ಅಂತಾರಾಜ್ಯ ನಂಟಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ ಸಿಎಂ ಕೂಡ ಅನೇಕ ಬಾರಿ ನಾವು ಈ ಪ್ರಕರಣಗಳನ್ನು ಕೇವಲ ಕೊಲೆ ಪ್ರಕರಣಗಳೆಂದು ಪರಿಗಣಿಸಿಲ್ಲ ಎಂದು ಅನೇಕ ಬಾರಿ ಹೇಳಿದ್ದಾರೆ. ಇಂದು ಪ್ರಕರಣಗಳ ಸಂಬಂಧ ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಪ್ರವೀಣ್​ ನೆಟ್ಟಾರು ಹತ್ಯೆಗೂ ಕೇರಳಕ್ಕೂ ನಂಟಿರುವ ಗುಮಾನಿ ಇದೆ. ಇದೊಂದು ಅಂತಾರಾಜ್ಯ ಪ್ರಕರಣ ಎನಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಈ ಪ್ರಕರಣದ ವಿಚಾರಣೆಯನ್ನು ಒಪ್ಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಿಎಂ ಬಸವರಾಜ ಬೊಮ್ಮಾಯಿ ಗೃಹ ಇಲಾಖೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೇ ಕೇರಳದ ಗಡಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆಯೂ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ನಿನ್ನೆಯಷ್ಟೇ ಮೃತ ಪ್ರವೀಣ್​ ನೆಟ್ಟಾರು ಪತ್ನಿ ನೂತನಾ ನೆಟ್ಟಾರು ಕೂಡ ತಮ್ಮ ಪತಿಯ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕು. ಹಾಗೂ ಕೂಡಲೇ ಆರೋಪಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆಯನ್ನು ಕೊಡಿಸಬೇಕು. ಆರೋಪಿಗಳಿಗೆ ಪರೋಕ್ಷವಾಗಿ ಸಾಥ್​ ನೀಡಿದವರನ್ನೂ ಶಿಕ್ಷಿಸಬೇಕೆಂದು ಮನವಿ ಮಾಡಿದ್ದರು.


ಆರ್​ಎಸ್​ಎಸ್​ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದ ಪೊಲೀಸರಿಗೆ ಎತ್ತಂಗಡಿ

ಇನ್ನು ಬುಧವಾರದಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಆಕ್ರೋಶಗೊಂಡಿದ್ದ ಹಿಂದೂ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದರು. ಈ ಸಮಯದಲ್ಲಿ ಅನೇಕ ಹಿಂದೂ ಕಾರ್ಯಕರ್ತರಿಗೆ ಏಟಾಗಿತ್ತು. ಈ ಸಂಬಂಧ ಇಂದು ಪಶ್ಚಿಮ ವಲಯದ ಐಜಿಪಿ ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯ ಠಾಣೆಯ ಪಿಎಸ್​ಐಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿ : Pramod Muthalik barred : ಶಾಂತಿ ಕದಡುವ ಆತಂಕ : ಪ್ರಮೋದ್​ ಮುತಾಲಿಕ್​ಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ

ಇದನ್ನೂ ಓದಿ : Fazil was killed : ಹುಟ್ಟು ಹಬ್ಬಕ್ಕೆಂದು ಬಟ್ಟೆ ತರಲು ಹೋಗಿದ್ದೇ ತಪ್ಪಾಯ್ತಾ : ಬರ್ತ್​ಡೇ ಹಿಂದಿನ ದಿನವೇ ಹತ್ಯೆಯಾದ ಫಾಜಿಲ್​

Praveen Nettaru murder case handed over to NIA

Comments are closed.