PSI Recruitment Scam : ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಕಿಂಗ್‌ಪಿನ್‌ ದಿವ್ಯ ಹಾಗರಗಿ ಅರೆಸ್ಟ್‌

ಬೆಂಗಳೂರು : ಪಿಎಸ್‌ಐ ನೇಮಕಾತಿ ಪ್ರಕರಣದ (PSI Recruitment Scam) ಕಿಂಗ್‌ ಪಿನ್‌ ದಿವ್ಯಾ ಹಾಗರಗಿಯನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಲಬುರಗಿಗೆ ಕರೆತರುತ್ತಿದ್ದಾರೆ. ದಿವ್ಯಾ ಜೊತೆಗೆ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಕೂಡ ಅರೆಸ್ಟ್‌ ಆಗಿದ್ದಾರೆ.

ಕಲಬುರಗಿ ಜಿಲ್ಲಾ ಬಿಜೆಪಿ ಮುಖಂಡರಾಗಿರುವ ದಿವ್ಯಾ ಹಾಗರಗಿ ಹೆಸರು ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಕೇಳಿಬಂದಿತ್ತು. ಅಕ್ರಮ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದಿವ್ಯ ಹಾಗರಗಿ ನಾಪತ್ತೆಯಾಗಿದ್ದಾರೆ. ಒಂದೆಡೆಯಲ್ಲಿ ಪ್ರತಿಪಕ್ಷಗಳು ರಾಜ್ಯ ಸರಕಾರದ ವಿರುದ್ದ ಮುಗಿಬಿದ್ದಿದ್ದವು. ಇನ್ನೊಂದೆಡೆಯಲ್ಲಿ ನ್ಯಾಯಾಲಯ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿತ್ತು. ವಾಸ್ತವವಾಗಿ ಅರೆಸ್ಟ್‌ ಆಗದೇ ಇದ್ರೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿತ್ತು. ಇದೀಗ ಅರೆಸ್ಟ್‌ ವಾರೆಂಟ್‌ ಜಾರಿಯಾಗುತ್ತಲೇ ದಿವ್ಯಾ ಅರೆಸ್ಟ್‌ ಆಗಿದ್ದಾಳೆ.

ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯ ವೇಳೆಯಲ್ಲಿ ಅಕ್ರಮ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 20 ಮಂದಿಯನ್ನು ಅರೆಸ್ಟ್‌ ಮಾಡಲಾಗಿದೆ. ದಿವ್ಯಾ ಹಾಗರಗಿ ಜೊತೆಗೆ ಅನಿತಾ ಹಾಗೂ ಸುನಿತಾ ಎಂಬ ಕೊಠಡಿ ಮೇಲ್ವೀಚಾರಕರನ್ನು ಕೂಡ ಅರೆಸ್ಟ್‌ ಮಾಡಲಾಗಿದೆ. ಸಿಐಡಿ ಎಸ್‌ಪಿ ರಾಘವೇಂದ್ರ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಇದನ್ನೂ ಓದಿ : ಪಾಟ್ನಾದಲ್ಲಿ ಹೊಸ ಓಮಿಕ್ರಾನ್‌ ಕೋವಿಡ್ ರೂಪಾಂತರ BA.2.12 ತಳಿ ಪತ್ತೆ

ಇದನ್ನೂ ಓದಿ : ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದ ಕಾಮುಕರು : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

PSI Recruitment Scam Accused Divya Hagaragi Arrest

Comments are closed.