ಭಾನುವಾರ, ಏಪ್ರಿಲ್ 27, 2025
HomekarnatakaPSI SCAM : ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣ : ಪ್ರಿಯಾಂಕ್ ಖರ್ಗೆ‌ಗೆ ಸಿಐಡಿ ನೊಟೀಸ್‌...

PSI SCAM : ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣ : ಪ್ರಿಯಾಂಕ್ ಖರ್ಗೆ‌ಗೆ ಸಿಐಡಿ ನೊಟೀಸ್‌ ಜಾರಿ

- Advertisement -

ಬೆಂಗಳೂರು : ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ (PSI SCAM) ಈಗಾಗಲೇ ಹಲವು ಕಾಂಗ್ರೆಸ್ ನಾಯಕರು ಹಾಗೂ ಪರೀಕ್ಷಾ ಕೊಠಡಿಯ ಸಿಬ್ಬಂದಿಯ ಬಂಧನವಾಗಿದೆ. ಈ ಮಧ್ಯೆ ಪ್ರಕರಣ ತನಿಖೆ ಚುರುಕುಗೊಂಡಿದ್ದು, ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyanka Kharghe)ಗೆ ಸಿಐಡಿ (CID ) ನೊಟೀಸ್ ಜಾರಿ ಮಾಡಿದೆ.

ಬೆಂಗಳೂರಿನಲ್ಲಿ ಪ್ರಿಯಾಂಕ್ ಖರ್ಗೆಗೆ ನೊಟೀಸ್ ಜಾರಿ ಮಾಡಿರೋ ಸಿಐಡಿ ತನಿಖಾಧಿಕಾರಿಗಳು ಮುಂದಿನ ಎರಡು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಕಲಬುರ್ಗಿ ಯಲ್ಲಿ ಬೆಳಕಿಗೆ ಬಂದಿದ್ದ ಪಿಎಸ್ಐ ಪರೀಕ್ಷಾ ಅಕ್ರಮದ ಬಳಿಕ ಹಲವು ಕಾಂಗ್ರೆಸ್ ನಾಯಕರ ಬಂಧನವಾಗಿತ್ತು. ಇನ್ನೂ ಈ ಪ್ರಕರಣದ ಬಗ್ಗೆ ಅಪಾರ ಆಸಕ್ತಿ ತೋರಿಸಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ, ನೇಮಕಾತಿ ಹಗರಣದ ಬಗ್ಗೆ ಎರಡು ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರಿಯಾಂಕ್ ಖರ್ಗೆ, ಮೊದಲ ಸುದ್ದಿಗೋಷ್ಟಿಯಲ್ಲಿ ತನಿಖೆ ಸರಿಯಾಗಿ ನಡೆದರೆ ಸರ್ಕಾರದ ಮತ್ತೆರಡು ವಿಕೆಟ್‌ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

ಅಷ್ಟೇ ಅಲ್ಲ, 70 ಸಾವಿರ ಜನ ಯುವಕರು ಹಾಗೂ ಯುವತಿಯರು PSI ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ನಂತರ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಸಿಸಿಟವಿ ಕ್ಯಾಮರ ಇರಲಿಲ್ಲ. ಫೋನ್​ ಕೂಡ ಒಳಗಡೆ ಬಿಡ್ತಾ ಇದ್ದರು. ಒಎಮ್​ಆರ್ ಶೀಟ್‌ಗಳು ಕಾಣೆಯಾಗುತ್ತಿದ್ದವು ಅಂತ ಆರೋಪಿಸಿದ್ದರು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಪೋನ್ ರೆಕಾರ್ಡ್ ವೊಂದನ್ನು ಬಿಡುಗಡೆ ಮಾಡಿದ್ದರು. ಇದಾದ ಬಳಿಕ ಇಂದು ಮಾತನಾಡಿದ್ದ ಸಚಿವ ಸುನೀಲ್ ಕುಮಾರ್ ಈ ಪ್ರಕರಣದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಬಳಿ ಹೆಚ್ಚಿನ ಮಾಹಿತಿ ಇರುವಂತಿದೆ. ಹೀಗಾಗಿ ಪ್ರಿಯಾಂಕ ಖರ್ಗೆಯವರನ್ನೇ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕು ಎಂದಿದ್ದರು.

PSI SCAM CID notices PSI test case, Priyanka Kharghe

ಇದರ ಬೆನ್ನಲ್ಲೇ ಸಿಐಡಿ ತನಿಖಾ ತಂಡ ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ ಖರ್ಗೆಗೆ ರವಿವಾರ ಸಂಜೆ ವೇಳೆಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೇ ಇದೊಂದು ಸೂಕ್ಷ್ಮ ಹಾಗೂ ಗಂಭೀರ ಪ್ರಕಣವಾಗಿದೆ. ಹೀಗಾಗಿ ನಿಮ್ಮಲ್ಲಿರುವ ಮಾಹಿತಿಯನ್ನು ಕೊಡಿ. ಸಾಕ್ಷಿ ಒದಗಿಸಲು ನಾಳೆ ವಿಚಾರಣೆಗೆ ಹಾಜರಾಗಿ. ಸಾಕ್ಷಿ, ದಾಖಲೆಗಳೊಂದಿಗೆ ಕಾರ್ಲಟನ್ ಭವನದ ಸಿಐಡಿ ಕಚೇರಿಗೆ ನಾಳೆ ಬೆಳಗ್ಗೆ 11.30 ಕ್ಕೆ ಹಾಜರಾಗಿ ಎಂದು ಸಿಐಡಿ ಡಿವೈಎಸ್ಪಿ ಹಾಗೂ ಸಹಾಯಕ ತನಿಖಾಧಿಕಾರಿ ನರಸಿಂಹಮೂರ್ತಿ ನೊಟೀಸ್ ನಲ್ಲಿ ಸೂಚಿಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ನಾಳೆ ಮುಂಜಾನೆ ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ ಸಿ ಅಂಕಪಟ್ಟಿಯಲ್ಲಿ ಶಾಲೆಗಳ ಹೆಸರು ನಮೂದಿಸಿ : ಹೈಕೋರ್ಟ್‌ ಆದೇಶ

ಇದನ್ನೂ ಓದಿ : ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಹತ್ವದ ಹೇಳಿಕೆ ನೀಡಿದ ಸಿಎಂ ಬೊಮ್ಮಾಯಿ

PSI SCAM CID notices PSI test case, Priyanka Kharghe

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular