Ola Electric Scooter :ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ಕಾಟ : ಮಾರುಕಟ್ಟೆಯಿಂದ ಟೂ ವೀಲ್ಹರ್ ಹಿಂಪಡೆದ ಓಲಾ

ಸದ್ಯ ವಿಶ್ವದಲ್ಲಿ ಪೆಟ್ರೋಲ್, ಡಿಸೇಲ್ ಗಿಂತ ಹೆಚ್ಚು ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹಾಗೂ ಉತ್ಪಾದನೆಯತ್ತ ಒಲವು ಮೂಡುತ್ತಿದೆ. ಕೇವಲ ಉತ್ಪಾದನೆ ಮಾತ್ರವಲ್ಲ ಜನರು ಕೂಡ ಏರುತ್ತಿರುವ ಪೆಟ್ರೋಲ್ ಹಾಗೂ ಡಿಸೇಲ್ ದರದ ಕಾರಣಕ್ಕೆ ನಿಧಾನಕ್ಕೆ ಎಲೆಕ್ಟ್ರಾನಿಕ್ಸ್ ಟೂ ವೀಲ್ಹರ್ ಹಾಗೂ ಪೋರ್ ವೀಲ್ಹರ್ ಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಈಗ ಎಲೆಕ್ಟ್ರಿಕ್ ವಾಹನಗಳತ್ತ (Ola Electric Scooter ) ಮುಖಮಾಡಿದ ಜನರಿಗೆ ಶಾಕ್ ಎದುರಾಗಿದೆ.

ಈ ಮಧ್ಯೆ ವಿವಿಧ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕಲ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರಲ್ಲೂ ಓಲಾ ಎಲೆಕ್ಟ್ರಿಕ್​ ಕಂಪನಿ ಈಗಾಗಲೇ ಮಾರುಕಟ್ಟೆಗೆ ಸ್ಕೂಟರ್ ರಿಲೀಸ್ ಮಾಡಿದೆ. ಆದರೆ ಈಗ ದೇಶದಾದ್ಯಂತ ಓಲಾ ಕಂಪನಿಯ (Ola Electric Scooter ) ಹಲವು ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗಿದೆ. ಕೆಲವೆಡೆ ಚಾರ್ಜಿಂಗ್ ಗೆ ಹಾಕಿದ ಸ್ಕೂಟರ್ ಗಳು ಹೊತ್ತಿ ಉರಿಯುತ್ತಿದ್ದರೇ, ಇನ್ನು ಕೆಲವು ಸ್ಕೂಟರಗಳು ರಸ್ತೆ ಮೇಲೆಯೇ ಬೆಂಕಿಗೆ ಆಹುತಿಯಾಗಿದೆ.

ಹೀಗಾಗಿ ಓಲಾ ಕಂಪನಿ ತನ್ನ 1441 ಸ್ಕೂಟರ್‌ಗಳನ್ನು ಹಿಂದೆ ತೆಗೆದುಕೊಳ್ಳುವುದಾಗಿ ಹೇಳಿದೆ. ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತ ಇರುವುದರಿಂದಲೇ ಸ್ಕೂಟರ್‌ಗಳನ್ನು ಹಿಂಪಡೆಯುತ್ತಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ತಿಂಗಳು 26ರಂದು ನಡೆದ ಘಟನೆಗೆ ಕಾರಣವೇನು ಎಂಬ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುತ್ತಿರುವುದಾಗಿಯೂ ಓಲಾ ಹೇಳಿದೆ. ಪುಣೆಯ ದಾನೋರಿ ಏರಿಯಾದಲ್ಲಿ ಮಾರ್ಚ್​ 26ರಂದು ನಿಂತಿದ್ದ ಓಲಾ ಎಲೆಕ್ಟ್ರಿಕ್​ ಸ್ಕೂಟರ್​​ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡು, ಧಗಧಗನೇ ಹೊತ್ತಿ ಉರಿದಿತ್ತು. ಹೀಗಾಗಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿದೆ.

ಈ ಪ್ರಕರಣದ ಬಗ್ಗೆ ಪ್ರಕಟಣೆ ರಿಲೀಸ್ ಮಾಡಿರೋ ಓಲಾ, ಒಂದು ನಿರ್ದಿಷ್ಟ ಬ್ಯಾಚ್​​ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಸುಮಾರು 1441 ಸ್ಕೂಟರ್‌ಗಳನ್ನು ಹಿಂಪಡೆಯುತ್ತಿ ದ್ದೇವೆ. ಅವುಗಳಲ್ಲಿ ಏನು ಸಮಸ್ಯೆಯಿದೆ ? ಯಾವ ಕಾರಣಕ್ಕಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂಬುದನ್ನು ಸಮಗ್ರವಾಗಿ ಪರಿಶೀಲನೆ ಮಾಡಲಾಗುವುದು ಎಂದು ಓಲಾ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗೆ ಹಿಂಪಡೆದ ಸ್ಕೂಟರ್‌ಗಳನ್ನು ನಮ್ಮ ಇಂಜಿನಿಯರ್‌ಗಳು ಪರಿಶೀಲನೆ ಮಾಡಲಿದ್ದಾರೆ. ಬ್ಯಾಟರಿ ವ್ಯವಸ್ಥೆಯಿಂದ ಹಿಡಿದು, ಪ್ರತಿಯೊಂದನ್ನೂ ಪರೀಕ್ಷಿಸಲಾಗುವುದು ಎಂದಿದೆ.

ಕೇವಲ ಓಲಾ ಮಾತ್ರವಲ್ಲ ಒಕಿನಾವಾ ಅಟೋಟೆಕ್​ ತನ್ನ 3000 ಎಲೆಕ್ಟ್ರಿಕ್​ ಸ್ಕೂಟರ್‌ಗಳನ್ನು ವಾಪಸ್ ಪಡೆದಿದೆ. ಹಾಗೇ, ಪ್ಯೂರ್​ ಇವಿ ಕೂಡ 2000 ದ್ವಿಚಕ್ರ ವಾಹನಗಳನ್ನು ಹಿಂಪಡೆದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡ ಒಂದು ತಜ್ಞರ ಸಮಿತಿ ರಚಿಸಿ, ತಪಾಸಣೆ ನಡೆಸಲು ಸೂಚಿಸಿದೆ. ಅಷ್ಟೇ ಅಲ್ಲ, ಕಂಪನಿಗಳು ನಿರ್ಲಕ್ಷ್ಯ ತೋರಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಹೀಗಾಗಿ ಪೆಟ್ರೋಲ್, ಡಿಸೇಲ್ ದರ ಏರಿಕೆ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗಿದ್ದ ಜನರು ಸ್ಕೂಟರ್ ಗೆ ಬೆಂಕಿ ಬೀಳೋ ಪ್ರಕರಣಗಳಿಂದ ವಾಹನ‌ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಇದನ್ನೂ ಓದಿ : ಬಿಡುಗಡೆಯಾದ ಒಂದೇ ತಿಂಗಳಲ್ಲಿ ಬೆಲೆ ಹೆಚ್ಚಿಸಿದ ಕಿಯಾ ಕ್ಯಾರೆನ್ಸ್ : ಕಡಿಮೆ ಬೆಲೆಯಲ್ಲಿ ಸಿಗುತ್ತೆ ಎಕ್ಸುರಿ ಕಾರು

ಇದನ್ನೂ ಓದಿ : ಆಲ್‌–ನ್ಯೂ XL6 2022 ಬಿಡುಗಡೆ ಮಾಡಿದ ಮಾರುತಿ ಸುಜುಕಿ: ಅದರ ಬೆಲೆ ಮತ್ತು ವೈಶಿಷ್ಟ್ಯಗಳು ಹೀಗಿದೆ

Ola Electric scooter to fire, Ola retrieved two wheeler from the market

Comments are closed.