ಮಂಗಳವಾರ, ಏಪ್ರಿಲ್ 29, 2025
HomeCinemaPuneeth Rajkumar : 2 ಕಣ್ಣುಗಳ ಮೂಲಕ ನಾಲ್ಕು ಮಂದಿಗೆ ದೃಷ್ಟಿ ನೀಡಿದ ಪುನೀತ್‌ ರಾಜ್‌...

Puneeth Rajkumar : 2 ಕಣ್ಣುಗಳ ಮೂಲಕ ನಾಲ್ಕು ಮಂದಿಗೆ ದೃಷ್ಟಿ ನೀಡಿದ ಪುನೀತ್‌ ರಾಜ್‌ ಕುಮಾರ್‌

- Advertisement -

ಬೆಂಗಳೂರು : ದೊಡ್ಮನೆ ಮಗ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ. ತಂದೆ ಡಾ.ರಾಜ್‌ ಕುಮಾರ್‌ ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಸಾಗಿದ ಅಪ್ಪು ಅವರು ತಮ್ಮ ನೇತ್ರದಾನ ಮಾಡಿದ್ದರು. ಇದೀಗ ಅಪ್ಪು ಅವರ ಎರಡು ಕಣ್ಣುಗಳು ನಾಲ್ವರಿಗೆ ದೃಷ್ಟಿಯನ್ನು ನೀಡಿದೆ.

ಸ್ಯಾಂಡಲ್ ವುಡ್‌ ಸ್ಟಾರ್‌ ನಟ ಪುನೀತ್‌ ರಾಜ್‌ ಕುಮಾರ್‌ ಹಾಗೂ ತಾಯಿ ಪಾರ್ವತಮ್ಮ ಅವರು ನಾರಾಯಣ ನೇತ್ರಾಲಯದಲ್ಲಿ ನೇತ್ರದಾನ ಮಾಡಿದ್ದರು. ಬಾರದ ಲೋಕಕ್ಕೆ ಅಪ್ಪು ಪಯಣಿಸುತ್ತಿದ್ದಂತೆಯೇ ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿರುವ ಡಾ. ಭುಜಂಗ ಶೆಟ್ಟಿ ಅವರ ನೇತೃತ್ವದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ಎರಡು ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ ಎಂದು ಡಾ.ಭುಜಂಗ ಶೆಟ್ಟಿ ಅವರು ಮಾಹಿತಿಯನ್ನು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರದಾನ ಮಾಡಿದ ಸಂದರ್ಭದಲ್ಲಿ 2 ಕಣ್ಣುಗಳನ್ನು ಇಬ್ಬರಿಗೆ ಅಳವಡಿಸಲಾಗುತ್ತದೆ. ಆದರೆ ಪುನೀತ್‌ ರಾಜ್‌ ಕುಮಾರ್‌ ಅವರ ಎರಡು ಕಣ್ಣುಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಾಲ್ವರಿಗೆ ಬೆಳಕು ನೀಡಲಾಗಿದೆ. ಕಾರ್ನಿಯಾಗಳನ್ನು ಎರಡು ಭಾಗ ಮಾಡಲಾಗಿದ್ದು, ಮುಂಭಾಗದ ಕಣ್ಣು ಹಾಗೂ ಹಿಂಭಾಗದ ಆಳದ ಪದರಗಳನ್ನು ಎರಡು ಭಾಗ ಮಾಡಲಾಘಿತ್ತು. ಕಾರ್ನಿಯಾ ಸಮಸ್ಯೆ ಇದ್ದವರಿಗೆ ಮುಂಭಾಗ ಹಾಗೂ ಹಿಂಭಾಗದ ಆಳವನ್ನು ಇತರರಿಗೆ ಅಳವಡಿಸಲಾಗಿದೆ. ಹೀಗಾಗಿ ನಾಲ್ವರಿಗೆ ಪುನೀತ್‌ ರಾಜ್‌ ಕುಮಾರ್‌ ಅವರು ದೃಷ್ಟಿ ನೀಡಿದ್ದಾರೆ ಎಂದಿದ್ದಾರೆ.

ಮೂವರು ಪುರುಷರು ಹಾಗೂ ಓರ್ವ ಯುವತಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಒಂದೇ ದಿನ ದೃಷ್ಟಿಯನ್ನು ನೀಡಲಾಗಿದೆ. ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿರುವ ರಾಜ್‌ ಕುಮಾರ್‌ ಅವರ ಕುಟುಂಬಸ್ಥರಿಗೆ ಡಾ.ಭುಜಂಗ ಶೆಟ್ಟಿ ಅವರು ಧನ್ಯವಾದವನ್ನು ಸಮರ್ಪಿಸಿದ್ದಾರೆ.

ಇದನ್ನೂ ಓದಿ : ನಟ ರಜನೀಕಾಂತ್ ಗೆ ಕ್ಯಾರೋಟಿಡ್ ಎಂಡಾರೆಕ್ಟಮಿ ಚಿಕಿತ್ಸೆ

ಇದನ್ನೂ ಓದಿ : ಅಪ್ಪುಗೆ ಅವಮಾನ : ತಮಿಳು ನಟರ ವಿರುದ್ಧ ಧ್ವನಿಎತ್ತಿದ ನಟಭಯಂಕರ

( Puneeth RajKumar Eye Parts Inserted 4 People Brief Narayana Nethralaya Eye Hospital Doctor Bhujang Shetty )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular