ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದಿಂದ ಚಿತ್ರರಂಗ ಅಕ್ಷರಶಃ ಕಣ್ಣೀರಾಗಿದೆ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ಸಮಾಜಸೇವೆ ಹಾಗೂ ಚಿತ್ರರಂಗದ ಸೇವೆ ಪರಿಗಣಿಸಿ ಪದ್ಮಶ್ರೀ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದ್ದು, ಇದಕ್ಕೆ ಮಾಜಿಸಿಎಂ ಸಿದ್ಧು ಕೂಡ ಬಲ ತುಂಬಿದ್ದಾರೆ.

ತುಮಕೂರಿನ ರಾಜಕೀಯ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮಾತನಾಡಿದ ಮಾಜಿಸಿಎಂ ಸಿದ್ಧ ರಾಮಯ್ಯ ಪುನೀತ್ ರಾಜ್ ಕುಮಾರ್ ಅವರನ್ನು ಹೊಗಳಿದ್ದು ಪುನೀತ್ ಸರಳ ಸಜ್ಜನಿಕೆಯ ವ್ಯಕ್ತಿ ಎಂದಿದ್ದಾರೆ. ಅಷ್ಟೇ ಅಲ್ಲ ಚಿಕ್ಕವಯಸ್ಸಿನಲ್ಲೇ ಅಪಾರ ಪ್ರೀತಿ ಗಳಿಸಿದ್ದರು ಎಂದಿದ್ದಾರೆ.

20 ಲಕ್ಷ ಜನರು ಪುನೀತ್ ಅಂತಿಮ ದರ್ಶನ ಪಡೆದುಕೊಂಡಿದ್ದು, ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಪುನೀತ್ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ. ಅಲ್ಲದೇ ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ಸಲ್ಲಬೇಕೆಂದಿರುವ ಸಿದ್ಧರಾಮಯ್ಯ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪ್ರಶಸ್ತಿಗೆ ನೀಡುವಂತೆ ಆಗ್ರಹಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : 2 ಕಣ್ಣುಗಳ ಮೂಲಕ ನಾಲ್ಕು ಮಂದಿಗೆ ದೃಷ್ಟಿ ನೀಡಿದ ಪುನೀತ್ ರಾಜ್ ಕುಮಾರ್

ಇದನ್ನೂ ಓದಿ : ಜೇಮ್ಸ್ ಮೂಲಕ ಮತ್ತೆ ತೆರೆಗೆ ಬರ್ತಾರೆ ಪುನೀತ್: ಪವರ್ ಗೆ ಧ್ವನಿಯಾಗ್ತಾರೆ ಶಿವಣ್ಣ
ಸೋಷಿಯಲ್ ಮೀಡಿಯಾದಲ್ಲೂ ಪುನೀತ್ ಗೆ ಪದ್ಮಶ್ರೀ ನೀಡಬೇಕೆಂಬ ಒತ್ತಡ,ಆಗ್ರಹ ಕೇಳಿಬಂದಿದ್ದು ಅಭಿಮಾನಿಗಳೂ ತಮ್ಮ ನೆಚ್ಚಿನ ಹೀರೋಗೆ ಮರಣೋತ್ತರ ಪದ್ಮಶ್ರೀ ಸಲ್ಲಬೇಕೆಂದು ಒತ್ತಾಯಿಸಿದ್ದಾರೆ.
( Siddaramaiah wants to Demand Padma Shri award for actor Puneet Raj Kumar)