World Record : ಅಯೋಧ್ಯೆಯಲ್ಲಿ ಬೆಳಗಲಿದೆ 12 ಲಕ್ಷ ದೀಪ : ದಾಖಲೆ ಬರೆಯಲು ಸಿದ್ದವಾಗುತ್ತಿದೆ ಯೋಗಿ ಅಯೋಧ್ಯೆ ದೀಪೋತ್ಸವ

ಅಯೋಧ್ಯೆ : ಹಿಂದಿನ ವರ್ಷದ ದೀಪಾವಳಿಯ ವಿಶ್ವ ದಾಖಲೆಯನ್ನು ಇನ್ನೂ ಉತ್ತಮ ಗೊಳಿಸುವ ಉದ್ದೇಶದಿಂದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಅಯೋಧ್ಯೆಯಲ್ಲಿ 12 ಲಕ್ಷ ಮಣ್ಣಿನ ದೀಪಗಳನ್ನು (Light 12 Lakh Lamps in Ayodhya ) ಬೆಳಗಿಸಲಿದೆ. ಈ ಪೈಕಿ ಒಂಬತ್ತು ಲಕ್ಷ ದೀಪಗಳು ಸರಯು ನದಿಯ ದಡದಲ್ಲಿ ಬೆಳಗಲಿದೆ.

ಕಳೆದ ವರ್ಷ ಉತ್ಸವವನ್ನು ಆಚರಿಸಲು “ದೀಪೋತ್ಸವ”ದ ಸಮಯದಲ್ಲಿ 6 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು. ಇದು ವಿಶ್ವ ದಾಖಲೆಯನ್ನು ಸೃಷ್ಟಿಸಿತು. ರಾಮ್ ಲೀಲಾಸ್, ತ್ರೀಡಿ ಹೋಲೋಗ್ರಾಫಿಕ್ ಪ್ರದರ್ಶನ, ಲೇಸರ್ ಶೋ ಮತ್ತು ಪಟಾಕಿಗಳ ಪ್ರದರ್ಶನವು ಸೋಮವಾರದಿಂದ ಪ್ರಾರಂಭವಾಗುತ್ತದೆ ಎಂದು ಸರ್ಕಾರ ಹೇಳಿಕೆ ನೀಡಿದೆ.

ಇದನ್ನೂ ಓದಿ: 2 Models death : ಭೀಕರ ಅಪಘಾತಕ್ಕೆ ಮಿಸ್‌ ಕೇರಳ ಅನ್ಸಿ ಕಬೀರ್‌ ಮತ್ತು ರನ್ನರ್‌ ಅಪ್‌ ಅಂಜಾನಾ ಶಾಜನ್‌ ಬಲಿ

ಒಟ್ಟು 5 ದಿನಗಳ ಕಾಲ ಈ ಎಲ್ಲಾ ಪ್ರದರ್ಶನ ನಡೆಯಲಿದೆ. ಸರಯು ನದಿಯ ದಡದಲ್ಲಿ 9 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು ಹಾಗೂ ಉಳಿದ 3 ಲಕ್ಷ ದೀಪಗಳನ್ನು ನವೆಂಬರ್ 3 ರಂದು ಸಂಜೆ 6 ರಿಂದ 6.30 ರವರೆಗೆ ಅಯೋಧ್ಯೆಯ ಕೆಲವು ಭಾಗಗಳಲ್ಲಿ ಬೆಳಗಿಸಲಾಗುವುದು.

ನವೆಂಬರ್ 1 ರಿಂದ 5 ರವರೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಶ್ರೀರಾಮ ಲೀಲೆಯನ್ನು ಪ್ರದರ್ಶಿಸಲು ಶ್ರೀಲಂಕಾದ ಸಾಂಸ್ಕೃತಿಕ ತಂಡವನ್ನು ಆಹ್ವಾನಿಸಲಾಗಿದೆ. ಸೋಮವಾರ, ನೇಪಾಳದ ಜನಕ್ ಪುರದ ತಂಡವು ರಾಮ ಲೀಲಾವನ್ನು ಪ್ರದರ್ಶಿಸಲಿದೆ.

ಇದನ್ನೂ ಓದಿ: ಗಾಜಿಪುರ ಗಡಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಅಸ್ಸಾಂ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ತಂಡಗಳನ್ನು ಸಹ 5 ದಿನಗಳ ಆಚರಣೆಯ ಸಂದರ್ಭದಲ್ಲಿ ಪಾಲುಗೊಳ್ಳಲಿವೆ. ನವೆಂಬರ್ 3 ರಂದು “ದೀಪೋತ್ತ್ಸವ” ನಡೆಯಲಿದ್ದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿ ಬೆನ್ ಪಟೇಲ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸರ್ಕಾರ ಹೇಳಿಕೆ ನೀಡಿದೆ.

(12 lakh lamp to shine in Ayodhya: Yogi Ayodhya bonfire ready to write document)

Comments are closed.