ಕರ್ನಾಟಕಕ್ಕೆ‌ ರಾಹುಲ್ ಗಾಂಧಿ ಭೇಟಿ : ಜೈ ಭಾರತ್ ಸಮಾವೇಷದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಯುವರಾಜ

ಕೋಲಾರ : (Rahul Gandhi in Karnataka) ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಚುನಾವಣಾ ಪ್ರಚಾರದ ಸಲುವಾಗಿ ಇಂದು ಕೋಲಾರದಲ್ಲಿ ನಡೆಯಲಿರುವ ಕಾಂಗ್ರೆಸ್‌ನ ಸತ್ಯಮೇವ ಜಯತೆ, ಜೈ ಭಾರತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದು, ಪಕ್ಷದ ಕುರಿತಾಗಿ ಭಾಷಣ ಕೈಗೊಂಡಿದ್ದಾರೆ.

ಕೋಲಾರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್‌ ಪಕ್ಷ ಜೈ ಭಾರತ್ ಸಮಾವೇಶವನ್ನು ಕೈಗೊಂಡಿದೆ. ಇದರಲ್ಲಿ ಕೆಂದ್ರ ನಾಯಕ ರಾಹುಲ್ ಗಾಂಧಿ,‌ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ರಾಷ್ಟ್ರ ಹಾಗೂ ರಾಜ್ಯದ ಎಲ್ಲಾ ನಾಯಕರು ಭಾಗಿಯಾಗಿದ್ದಾರೆ.

ಇಂದು ಬೆಳಗ್ಗೆ 11.50ಕ್ಕೆ ಬೆಂಗಳೂರು ಏರ್​ಪೋರ್ಟ್​​ಗೆ ರಾಹುಲ್ ಗಾಂಧಿ ಆಗಮಿಸಿದ್ದು ಮಧ್ಯಾಹ್ನ 12.25ಕ್ಕೆ ಕೋಲಾರಕ್ಕೆ ತಲುಪಿದ್ದಾರೆ. ಇದೀಗ ಕೋಲಾರದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಭಾಗಿಯಾಗಿದ್ದು, ಮಧ್ಯಾಹ್ನ 2.40ಕ್ಕೆ ಕೋಲಾರದಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ. ಸಂಜೆ 5 ಗಂಟೆವರೆಗೆ ಶಾಂಗ್ರಿಲಾ ಹೋಟೆಲ್​ನಲ್ಲಿ ವಿಶ್ರಾಂತಿ ಪಡೆದು ಸಂಜೆ 5.30ಕ್ಕೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರ ಜೊತೆ ಸಂವಾದ ನಡೆಸಲಿದ್ದಾರೆ. ಸಂಜೆ 6.45ಕ್ಕೆ ಇಂದಿರಾ ಗಾಂಧಿ ಭವನ ಉದ್ಘಾಟಿಸಲಿದ್ದಾರೆ. ನಾಳೆ ಬೀದರ್​ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು ಭಾಲ್ಕಿ, ಹುಮ್ನಾಬಾದ್​ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : ಜಗದೀಶ್‌ ಶೆಟ್ಟರ್‌ ರಾಜೀನಾಮೆ, ಬಿಜೆಪಿ ವರಿಷ್ಠರ ಸಭೆ ಅಂತ್ಯ

ರಾಹುಲ್ ಗಾಂಧಿಯವರ ಅನರ್ಹತೆ ಕುರಿತು ಮೇಲ್ಮನವಿ ಸಲ್ಲಿಸಿದ್ದ ಹಿನ್ನೆಲೆ ಕೆಲವೊಂದು ಕಾನೂನಿನ ತೊಡಕುಗಳು ಇದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮೂರು ಬಾರಿ ಮುಂದೂಡಲಾಗಿತ್ತು. ಇನ್ನೂ ರಾಹುಲ್ ಗಾಂಧಿಯವರು ಕಳೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ ಮಾಡಿದ್ದ ಬಾಷಣದ ಹಿನ್ನೆಲೆಯಲ್ಲಿ ಅವರನ್ನ ಅನರ್ಹ ಮಾಡಲಾಗಿತ್ತು. ಅದೇ ಕಾರಣಕ್ಕೆ ಕೋಲಾರದಿಂದಲೇ ಅವರನ್ನು ಕುತಂತ್ರ ಮಾಡಿ ಅನರ್ಹ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ದ ದೇಶದಾಧ್ಯಂತ ಪ್ರತಿಭಟನೆ ಮಾಡಬೇಕು ಅನ್ನೋದು ಕಾಂಗ್ರೇಸ್ ಉದ್ದೇಶವಾಗಿದೆ.

ಇದನ್ನೂ ಓದಿ : Rahul Gandhi to Kolar : ನಾಳೆ ಕೋಲಾರಕ್ಕೆ ರಾಹುಲ್‌ ಗಾಂಧಿ ಆಗಮನ: ʻಜೈ ಭಾರತ್ʼ ರ್ಯಾಲಿಯಲ್ಲಿ ಭಾಗಿ

Rahul Gandhi in Karnataka: Rahul Gandhi visit to Karnataka: Congress leader participated in Jai Bharat convention

Comments are closed.