ಸೋಮವಾರ, ಏಪ್ರಿಲ್ 28, 2025
HomekarnatakaRajyotsava award: ಇನ್ನು ಮುಂದೆ 60 ವಯಸ್ಸಿನ ಮಿತಿ ಇಲ್ಲ; ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ;...

Rajyotsava award: ಇನ್ನು ಮುಂದೆ 60 ವಯಸ್ಸಿನ ಮಿತಿ ಇಲ್ಲ; ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಸಿಎಂ ಘೋಷಣೆ

- Advertisement -

ಬೆಂಗಳೂರು: Rajyotsava award: ಮುಂದಿನ ವರ್ಷದಿಂದ ವಯಸ್ಸಿನ ಮಿತಿ ಇಲ್ಲದೇ ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 67 ಮಂದಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಪ್ರಶಸ್ತಿಯು 5 ಲಕ್ಷ ರೂ.ನಗದನ್ನು ಒಳಗೊಂಡಿದೆ.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯೋತ್ಸವ ಪ್ರಶಸ್ತಿ ಪಡೆಯುವವರು 60 ವರ್ಷ ಮೀರಿರಬೇಕು ಎಂಬ ಪ್ರಸ್ತುತ ನಿಯಮವನ್ನು ಬದಲಾಯಿಸಬೇಕು ಎಂದು ಅಭಿಪ್ರಾಯಪಟ್ಟರು. ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷ ನಿಗದಿ ಮಾಡಿರುವುದು ಸರಿಯಲ್ಲ. ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದವರೂ ಪ್ರಶಸ್ತಿಗಾಗಿ 60 ವರ್ಷದ ತನಕ ಕಾಯುವ ಪರಿಸ್ಥಿತಿ ಬಂದಿದೆ. ಸಣ್ಣ ವಯಸ್ಸಿನ ಸಾಧಕರನ್ನು ಗೌರವಿಸಿದರೆ ಇತರರಿಗೂ ಪ್ರೇರಣೆ ನೀಡಿದಂತಾಗುತ್ತದೆ. ಹೀಗಾಗಿ ಈ ವಯೋಮಿತಿಗಳಲ್ಲಿ ಬದಲಾವಣೆ ತರಬೇಕಿದೆ ಎಂದು ಹೇಳಿದರು.

ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದಕ್ಕೆ ಇಡೀ ರಾಜ್ಯವೇ ಸಂಭ್ರಮಿಸುತ್ತಿದೆ. ಒಬ್ಬ ಸಣ್ಣ ವಯಸ್ಸಿನ ಸಾಧಕನಿಗೆ ಈ ಪ್ರಶಸ್ತಿ ಸಂದಿರುವುದು ಎಲ್ಲರಿಗೂ ಖುಷಿ ತಂದಿದೆ, ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲಿ 60 ವರ್ಷ ಮೀರಿದವರಿಗೆ ಮಾತ್ರ ಪ್ರಶಸ್ತಿ ಎಂಬ ನಿಯಮವು ಸರ್ಕಾರದ ತಪ್ಪು ನಡೆ. ಸಣ್ಣ ವಯಸ್ಸಿನಲ್ಲಿಯೇ ಪ್ರಶಸ್ತಿ ನೀಡಿದರೆ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಹೀಗಾಗಿ ಮುಂದಿನ ವರ್ಷದಿಂದ ವಯಸ್ಸಿನ ಮಿತಿ ಇಲ್ಲದೇ ಅರ್ಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಘೋಷಿಸಿದರು.

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರ ಸಾಧನೆ, ಅವರ ಅನುಭವ, ಸಂದೇಶಗಳನ್ನು ಸಂಗ್ರಹಿಸಿ ಒಂದು ಪುಸ್ತಕ ಮಾಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲ್ ಕುಮಾರ್ ರಿಗೆ ಸಿಎಂ ಸಲಹೆ ನೀಡಿದರು. ಪುಸ್ತಕದಲ್ಲಿ ಪ್ರಶಸ್ತಿ ಪಡೆದವರ ಸಾಧನೆ, ಪರಿಶ್ರಮ ಅರಿತುಕೊಂಡು ದಾಖಲಿಸಬೇಕು. ಅದನ್ನೆಲ್ಲಾ ಸಂಗ್ರಹಿಸಿ ಕೃತಿ ರಚಿಸಿ ವಿದ್ಯಾರ್ಥಿಗಳಿಗೆ ಹಂಚಬೇಕು ಎಂದು ಸಿಎಂ ಹೇಳಿದರು.

ಬಳಿಕ ಮಾತನಾಡಿದ ಕನ್ನಡ ಮತ್ತು ಸಾಂಸ್ಕøತಿಕ ಇಲಾಖೆ ಸಚಿವ ಸುನೀಲ್ ಕುಮಾರ್, ಕಳೆದ ಬಾರಿ 1 ಲಕ್ಷ ರೂ. ಇದ್ದ ರಾಜ್ಯೋತ್ಸವ ಪ್ರಶಸ್ತಿಯ ನಗದನ್ನು ಈ ಬಾರಿ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಕಳೆದ ಬಾರಿ ನಾವೇ ಎಲೆ ಮರೆ ಕಾಯಿಯಂತಿದ್ದ ಸಾಧಕರನ್ನು ಗುರುತಿಸಿದ್ದೆವು. ಆದರೆ ಈ ಬಾರಿ ಅರ್ಜಿ ಹಾಕಿದವರಿಗಿಂತ ಪ್ರಶಸ್ತಿಯೇ ಅವರನ್ನು ಹುಡುಕಿಕೊಂಡು ಹೋಗಿದೆ. ಸೇವಾ ಸಿಂಧು ಅಪ್ಲಿಕೇಶನ್ ನಲ್ಲಿ 9 ಸಾವಿರ ಅರ್ಜಿಗಳು ಬಂದಿದ್ದವು. ಅರ್ಜಿಗಳನ್ನು ಹೆಚ್ಚು ಪರಿಗಣಿಸದೇ ಸಾಧಕರನ್ನು ನಾವೇ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದೇವೆ. ಗ್ರಾಮೀಣ ಪ್ರದೇಶದ ಸಾಧಕರನ್ನು ಗುರುತಿಸುವಂತೆ ಸಿಎಂ ಹೇಳಿದ್ರು. ಅವರಿಗೆ ಕರೆ ಮಾಡಿ ಭಾವಚಿತ್ರ ಕೇಳಿದ್ರೆ, ನಮ್ಮ ಫೋಟೋ ಇಲ್ಲ, ಆಧಾರ್ ಕಾರ್ಡ್ ಇದೆ ಎಂದು ಹೇಳುವಷ್ಟು ಮುಗ್ಧರು ಈ ಬಾರಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕಾಂತಾರ ಚಿತ್ರದಿಂದ ದೈವ ನರ್ತಕರಿಗೂ ಪ್ರಶಸ್ತಿ ಸಂದಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: Kannada Rajyotsava 2022: ‘ಕರ್ನಾಟಕ ರತ್ನ’ ಪ್ರಶಸ್ತಿಯ ವಿಶೇಷತೆಗಳು: ಈವರೆಗೆ ಗೌರವ ಸ್ವೀಕರಿಸಿರುವ ‘ರತ್ನ’ಗಳು ಇವರೇ ನೋಡಿ..

ಇದನ್ನೂ ಓದಿ: Appu Karnataka Ratna: ಕನ್ನಡದ ‘ಯುವರತ್ನ’ನಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ; ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ

Rajyotsava award: kannada rajyothsava award conferred to 67 achievers cm says no need of age limit

RELATED ARTICLES

Most Popular