ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮದು ಸಹಮತದ ಲೈಂಗಿಕ ಸಂಪರ್ಕ. ವಿಡಿಯೋದಲ್ಲಿರೋದು ನಾನೇ ಎಂದು ಹೇಳುವ ಮೂಲಕ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ರಾಸಲೀಲೆ ಸಿಡಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆರಂಭದಿಂದಲೂ ಸಿಡಿಯಲ್ಲಿರೋದು ನಾನೇ ಅಲ್ಲಾ ಅಂತಿದ್ದ ರಮೇಶ್ ಜಾರಕಿಹೊಳಿ ಇದೀಗ ವಿಡಿಯೋದಲ್ಲಿರೋದು ನಾನೇ. ನಮ್ಮದು ಸಹಮತದ ಲೈಂಗಿಕ ಸಂಪರ್ಕ ಎಂದು ತನಿಖಾಧಿಕಾರಿ ಎಂ.ಸಿ.ಕವಿತಾ ಅವರ ಮುಂದೆ ಹೇಳಿಕೆಯನ್ನು ನೀಡಿದ್ದಾರೆ.
ನಮ್ಮದು ಸಹಮತದ ಲೈಂಗಿಕ ಸಂಪರ್ಕವಾಗಿದ್ದರೂ ಕೂಡ ಅದನ್ನು ಅತ್ಯಾಚಾರವೆಂದು ಬಿಂಬಿಸಲು ಹೊರಟಿರುವವರ ವಿರುದ್ದ ಕಾನೂನು ಕ್ರಮಕೈಗೊಳ್ಳ ಬೇಕು. ಯುವತಿ ಪ್ರಾಜೆಕ್ಟ್ ವಿಚಾರವಾಗಿ ತನ್ನನ್ನು ಭೇಟಿ ಮಾಡಲು ಬಂದಿದ್ದಳು. ಆಕೆಯೊಂದಿಗೆ ನಾನು ಸಂಪರ್ಕದಲ್ಲಿ ಇದ್ದಿದ್ದೂ ನಿಜ. ಆದರೆ ನನಗೆ ಗೊತ್ತೇ ಇಲ್ಲದಂತೆ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಹನಿಟ್ರ್ಯಾಪ್ ಗೆ ನನ್ನನ್ನು ಬೀಳಿಸಿದ್ದಾರೆ. ರಾಜಕೀಯವಾಗಿ ನನ್ನನ್ನು ಮುಗಿಸುವ ಉದ್ದೇಶವಿದೆ ಎಂದು ಜಾರಕಿಹೊಳಿ ಹೇಳಿಕೆ ನೀಡಿದ್ದಾಗಿ ತಿಳಿದುಬಂದಿದೆ.
ಕೊರೊನಾ ಸೋಂಕಿನ ಅಬ್ಬರ ಹೆಚ್ಚುತ್ತಿದ್ದಂತೆಯೇ ತಣ್ಣಗಾಗಿದ್ದ ರಾಸಲೀಲೆ ಸಿಡಿ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ರಮೇಶ್ ಜಾರಕಿಹೊಳಿ ಅವರು ನೀಡಿರುವ ಹೇಳಿಕೆ ಪ್ರಕರಣದ ಧಿಕ್ಕನ್ನೇ ಬದಲಾಯಿಸಿದೆ.