ಬೆಂಗಳೂರು : ನಾನು ಇದುವರೆಗೂ ನಾನು ಮಹಾನಾಯಕನ ಹೆಸರನ್ನು ಹೇಳಿರಲಿಲ್ಲ. ಇದೀಗ ಮಹಾನಾಯಕ ಯಾರು ಎಂದು ಅವರೇ ಒಪ್ಪಿಕೊಂಡಿದ್ದಾರೆ. ಮಹಾನಾಯಕನನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು. ನಾನು ಗಂಡಸು ಎನ್ನುವ ಮೂಲಕ ರಮೇಶ್ ಜಾರಕಿ ಹೊಳಿ ಡಿಕೆಶಿ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಯುವತಿಯ ಪೋಷಕರು ಸುದ್ದಿಗೋಷ್ಠಿ ನಡೆಸಿ ಡಿಕೆಶಿ ವಿರುದ್ದ ಆರೋಪಗಳ ಸುರಿಮಳೆ ಮಾಡುತ್ತಿದ್ದಂತೆಯೇ, ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ಡಿಕೆಶಿ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನನ್ನ ಬಳಿಯಲ್ಲಿ 12 ಸಾಕ್ಷ್ಯಗಳಿವೆ. ಆ ಸಾಕ್ಷ್ಯಗಳನ್ನು ನಾನು ಎಸ್ ಐಟಿ ಅಧಿಕಾರಿಗಳಿಗೆ ನೀಡುತ್ತೇನೆ. ಇಂತಹ ಷಡ್ಯಂತ್ರ್ಯ ಮಾಡಿದವರು ರಾಜಕಾರಣಕ್ಕೆ ನಾಲಾಯಕ್. ಹೀಗಾಗಿ ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಕ್ರಿಮಿನಲ್ ಮೈಂಡ್, ಕನಕಪುರದಲ್ಲೇ ಡಿಕೆಶಿ ಸೋಲಿಸಲು ಹೋರಾಡುತ್ತೇನೆ. ಬೆಳಗಾವಿಗೆ ಬಂದ್ರೆ ಸ್ವಾಗತ ಮಾಡುತ್ತೇನೆ. ಇದೀಗ ಡಿ.ಕೆ.ಶಿವಕುಮಾರ್ ಹೆಸರು ಉಲ್ಲೇಖಿಸಿ ದೂರು ನೀಡುತ್ತೇನೆ. ನಾನು ನಿರಪರಾಧಿ ಎಂದು ಸಾಬೀತಾಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.