ತುಳು ಕರ್ನಾಟಕದ ಎರಡನೇ ಅಧಿಕೃತ ಭಾಷೆ ಮಾನ್ಯತೆ: ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಿದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಭಾಷಾ ಹಾಗೂ ಪ್ರಾದೇಶಿಕ ವಿವಾದಗಳು ಬೂದಿ ಮುಚ್ಚಿದ ಕೆಂಡದಂತೆ ಸದ್ದು ಮಾಡುತ್ತಿರುವಾಗಲೇ ಕರ್ನಾಟಕ ಸರ್ಕಾರ ಮತ್ತೊಂದು ಮಹತ್ವದ ಭಾಷಾ ನಿರ್ಣಯಕ್ಕೆ ಮುಂದಾಗಿದೆ. ತುಳು ಭಾಷೆಗೆ ಅಧಿಕೃತವಾಗಿ ಎರಡನೇ ಆಡಳಿತ ಭಾಷೆ ಮಾನ್ಯತೆ (Tulu official language ) ನೀಡಲು ಸಿದ್ಧವಾಗಿದ್ದು, ಸರ್ಕಾರದ ಈ ನಿರ್ಧಾರ ಹೊಸ ಚರ್ಚೆಗೆ ಕಾರಣವಾಗೋ ಸಾಧ್ಯತೆ ಇದೆ.

ತುಳು ಭಾಷೆಯನ್ನು ಕರ್ನಾಟಕದಲ್ಲಿ ಅಧಿಕೃತವಾಗಿ ಎರಡನೇ ಆಡಳಿತ ಭಾಷೆಯಾಗಿ ಬಳಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಮಿತಿಯೊಂದನ್ನು ರಚಿಸಿದೆ. ಈ ಬಗ್ಗೆ ಅಧ್ಯಯನ ನಡೆಸಲು ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ಹಾಗೂ ತುಳು ನಾಡಿನ ಸಂಸ್ಕೃತಿ ಉಳಿಸಿ ಬೆಳೆಸಲು ಗಣನೀಯ ಸೇವೆ ಸಲ್ಲಿಸಿದ ಆಳ್ವಾಸ್ ಫೌಂಡೇಶನ್ ನ ಮೋಹನ ಆಳ್ವಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.

ಮೋಹನ್ ಆಳ್ವಾ ಜೊತೆ ಭಾಷಾ ತಜ್ಞರು ಸೇರಿದಂತೆ ಹಲವು ವಿಷಯ ಪರಿಣಿತರು ಈ ಸಮಿತಿಯಲ್ಲಿ ಇರಲಿದ್ದು, ತುಳು ವನ್ನು ಕನ್ನಡದ ನಂತರದ ಆಡಳಿತ ಭಾಷೆಯಾಗಿ ಬಳಸುವಲ್ಲಿ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಒಂದು ವಾರದಲ್ಲಿ ವರದಿ ಸಲ್ಲಿಸಲು ಇಲಾಖೆಯಿಂದ ಮೋಹನ್ ಆಳ್ವ ನೇತೃತ್ವದ ಸಮಿತಿಗೆ ಸೂಚಿಸಿದೆ. ಈ ಬಗ್ಗೆ ರಾಜ್ಯದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದು ಮಾಹಿತಿ ಹಂಚಿಕೊಂಡಿದ್ದಾರೆ.

Recognition of Tulu as the second official language of Karnataka Govt formed a committee headed by Mohan Alva

ಶಿಕ್ಷಣ ತಜ್ಞ ಡಾ.ಮೋಹನ್ ಆಳ್ವ ಅಧ್ಯಕ್ಷತೆಯ ಸಮಿತಿಯಲ್ಲಿ ಡಾ.ಕೇಶವ್ ಬಂಗೇರಾ, ಡಾ. ಮಾಧವ ಕೊಣಾಜೆ, ಗಣೇಶ್ ಅಮೀನ್ ಸಂಕಮಾರ್ , ಪೃಥ್ವಿರಾಜ್ ಕವತ್ತಾರು ಮಣಿಪಾಲ್, ವಸಂತ ಶೆಟ್ಟಿ ಉಡುಪಿ, ಚಂದ್ರಹಾಸ ಕಣಂತೂರು,ಸಂಧ್ಯಾ ಆಳ್ವಾ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರು ಈ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

Recognition of Tulu as the second official language of Karnataka Govt formed a committee headed by Mohan Alva

ಈಗಾಗಲೇ ಹಲವಾರು ಭಾರಿ ತುಳು ಭಾಷೆಗೆ ಅಧಿಕೃತ ಭಾಷೆ ಸ್ಥಾನಮಾನ ನೀಡುವಂತೆ ಒತ್ತಾಯ ವ್ಯಕ್ತವಾಗಿತ್ತು. ಈಗ ಎರಡನೇ ಅಧಿಕೃತ ರಾಜ್ಯ ಭಾಷೆ ಮಾಡಲು ಸರ್ಕಾರ ಸಿದ್ಧವಾಗಿದೆ. ಈ ಬಗ್ಗೆ ಒಂದು ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದ್ದು, ಈ ವಿಚಾರವನ್ನು ಸ್ವತಃ ಸಚಿವರೇ ಹಂಚಿಕೊಳ್ಳೋ ಮೂಲಕ ತುಳು ಭಾಷಿಕರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.

ಇದನ್ನೂ ಓದಿ : ರಾಮಚರಿತಮಾನಸದ ಪುಟಗಳನ್ನು ಸುಟ್ಟ 10 ಮಂದಿಯ ವಿರುದ್ಧ ಕೇಸ್

ಇದನ್ನೂ ಓದಿ : oroscope Today : ದಿನಭವಿಷ್ಯ ( ಜನವರಿ 31 ಮಂಗಳವಾರ )

Recognition of Tulu as the second official language of Karnataka Govt formed a committee headed by Mohan Alva

Comments are closed.