ರಾಜೀನಾಮೆಗೂ ಮುನ್ನ ಈಶ್ವರಪ್ಪ ಮುಂದಿಟ್ಟಿದ್ರು ವಿಚಿತ್ರ ಬೇಡಿಕೆ: ಇಲ್ಲಿದೆ Resign Inside Story

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ರಾಜೀನಾಮೆಯೊಂದಿಗೆ ರಾಜ್ಯ ಸರ್ಕಾರದ ಎರಡನೇ ವಿಕೇಟ್ ಪತನವಾಗಿದೆ. ಸಚಿವ ಈಶ್ವರಪ್ಪ ವಿರುದ್ಧ ಶೇಕಡಾ ೪೦ ರಷ್ಟು ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಟೇಲ್ ಆತ್ಮಹತ್ಯೆಗೆ ಶರಣಾಗಿದ್ದು, ಇದೇ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ತಲೆದಂಡವಾಗಿದೆ. ನನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಮೃತ ಗುತ್ತಿಗೆದಾರ ಸಂತೋಷ್ ಪಟೇಲ್ ವಾಟ್ಸಪ್ ಸಂದೇಶ ರವಾನಿಸಿದ್ದರು. ಇದೇ ಕಾರಣಕ್ಕೆ ಘಟನೆಗೆ ಕಾರಣವಾದ ಈಶ್ವರಪ್ಪ ರಾಜೀನಾಮೆ‌ನೀಡಬೇಕೆಂಬ ಒತ್ತಡ ವ್ಯಕ್ತವಾಗಿತ್ತು. ಆದರೆ ಈಶ್ವರಪ್ಪ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಈಶ್ವರಪ್ಪ ರಾಜೀನಾಮೆಯ (KS Eshwarappa) ಇನ್‌ಸೈಡ್‌ ಸ್ಟೋರಿ (Inside Story) ಇಲ್ಲಿದೆ.

ಆದರೆ ಈಗ ಹೊರ ಬರ್ತಿರೋ ಮೂಲಗಳ ಮಾಹಿತಿ ಪ್ರಕಾರ ರಾಜೀನಾಮೆ ನೀಡುವಂತೆ ಸೂಚಿಸಿದ ಸಿಎಂಗೆ ಈಶ್ವರಪ್ಪ ಭಾವನಾತ್ಮಕ ಕಾರಣವೊಂದನ್ನು ಮುಂದಿಟ್ಟುಕೊಂಡು ರಾಜೀನಾಮೆಗೆ ಒಂದಿಷ್ಟು ಕಾಲಾವಕಾಶ ನೀಡುವಂತೆ ಕೋರಿದ್ದರಂತೆ. ರಾಜೀನಾಮೆ ನೀಡುತ್ತೇನೆ. ಆದರೆ ರಾಜೀನಾಮೆಗೆ ಸ್ವಲ್ಪ ದಿನಗಳ ಕಾಲ ಅವಕಾಶ ನೀಡಿ ಎಂದು ಈಶ್ವರಪ್ಪ ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದರಂತೆ. ಈಶ್ವರಪ್ಪ ಹೀಗೆ ಹೈಕಮಾಂಡ್ ಮತ್ತು ರಾಜ್ಯದ ನಾಯಕರ ಮುಂದೇ ಬೇಡಿಕೆ ಇಟ್ಟಿದ್ದಕ್ಕೂ ಒಂದು ಇಂಟ್ರಸ್ಟಿಂಗ್ ಕಾರಣ ಇದೇ. ಏಪ್ರಿಲ್ 20 ಹಾಗೂ 21 ರಂದು ಶಿವಮೊಗ್ಗದಲ್ಲಿ ಈಶ್ವರಪ್ಪ ಮೊಮ್ಮಗನ ಮದುವೆ ನಡೆಯಲಿದೆ‌

Resign Inside Story : strange demand that KS Eshwarappa before his resignation

ಈ ಮದುವೆಗಾಗಿ ಈಶ್ವರಪ್ಪ ತುಂಬ ಪ್ರೀತಿಯಿಂದ ಸಿದ್ಧತೆ‌ಮಾಡಿಕೊಂಡಿದ್ದಾರಂತೆ.‌ ಮಾತ್ರವಲ್ಲ ಅದ್ದೂರಿಯಾಗಿ ಮದುವೆಯ ಆಹ್ವಾನ ಪತ್ರಿಕೆಯನ್ನು ಪ್ರಿಂಟ್ ಹಾಕಿಸಿದ್ದಾರೆ. ಈ ಆಹ್ವಾನ ಪತ್ರಿಕೆಯಲ್ಲಿ ಈಶ್ವರಪ್ಪ ಹೆಸರು ಸಚಿವ ಈಶ್ವರಪ್ಪ ಎಂದು ಉಲ್ಲೇಖಿಸಲಾಗಿದೆ. ಈಶ್ವರಪ್ಪ ಮೊಮ್ಮಗನ ಮದುವೆಗಾಗಿ ಈಗಾಗಲೇ ಸಾವಿರಾರು ಜನರಿಗೆ ಆಹ್ವಾನ‌ ಪತ್ರಿಕೆ ಯನ್ನು ಹಂಚಲಾಗಿದೆ.ಹೀಗಾಗಿ ಮೊಮ್ಮಗನ ಮದುವೆ ನಡೆಯುವವರೆಗಾದರೂ ಸಚಿವನಾಗಿ‌ ಮುಂದುವರೆಯುತ್ತೇನೆ ಎಂದು ಈಶ್ವರಪ್ಪ ಪರಿ ಪರಿಯಾಗಿ ಬೇಡಿಕೊಂಡಿದ್ದರಂತೆ.

Resign Inside Story : strange demand that KS Eshwarappa before his resignation

ಆದರೆ ಈ ಬೇಡಿಕೆಗೆ ಸೊಪ್ಪು ಹಾಕದ ಸಿಎಂ ಬೊಮ್ಮಾಯಿ, ಏಪ್ರಿಲ್ 16-17 ರಂದು ಹೊಸ ಪೇಟೆಯಲ್ಲಿ ಕಾರ್ಯಕಾರಿಣಿ ನಡೆಯಲಿದೆ. ಈ ವೇಳೆ ವರಿಷ್ಠರು ಕೇಳೋ ಪ್ರಶ್ನೆಗಳಿಗೆ ಉತ್ತರಿಸೋದು ಕಷ್ಟವಾಗುತ್ತದೆ. ಹೀಗಾಗಿ ತಕ್ಷಣವೇ ರಾಜೀನಾಮೆ ನೀಡಿ ಎಂದು ಈಶ್ವರಪ್ಪ ಅವರನ್ನು ಮನವೊಲಿಸಿದ್ದಾರಂತೆ‌. ಹೀಗಾಗಿ ಈಶ್ವರಪ್ಪ ಅನಿವಾರ್ಯವಾಗಿ ಪಕ್ಷದ ಇಮೇಜ್ ಉಳಿಸಲು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೇ ರಾಜೀನಾಮೆ ಪತ್ರದ ಜೊತೆಗೆ ಮೊಮ್ಮಗನ ಮದುವೆಯ ಆಹ್ವಾನವನ್ನು ಸಿಎಂಗೆ ನೀಡಿದ್ದಾರಂತೆ.

ಇದನ್ನೂ ಓದಿ : KS Eshwarappa : ಕಾರ್ಯಕರ್ತನಿಂದ ಉಪಮುಖ್ಯಮಂತ್ರಿ , ರಾಜೀನಾಮೆಯೊಂದಿಗೆ ಅಂತ್ಯವಾಗುತ್ತಾ ಈಶ್ವರಪ್ಪ ರಾಜಕೀಯ ಭವಿಷ್ಯ ?

ಇದನ್ನೂ ಓದಿ : KS Eshwarappa : ರಾಜೀನಾಮೆಗೂ ಮುನ್ನ ಭರ್ಜರಿ ವರ್ಗಾವಣೆ : ಈಶ್ವರಪ್ಪ ವಿರುದ್ಧ ಮತ್ತೊಂದು ಆರೋಪ

Resign Inside Story : strange demand that KS Eshwarappa before his resignation

Comments are closed.