ಕಲಬುರಗಿ : RSS is the biggest terrorist organization : ದೇಶದಲ್ಲಿ ಪಿಎಫ್ಐ ಹಾಗೂ ಎಸ್ಡಿಪಿಐ ಮುಖಂಡರ ನಿವಾಸದ ಮೇಲೆ ಎನ್ಐಎ ಸಾಲು ಸಾಲು ದಾಳಿಗಳನ್ನು ನಡೆಸುತ್ತಿರುವುದು ಪಿಎಫ್ಐ ಹಾಗೂ ಎಸ್ಡಿಪಿಐ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯದ ನಾನಾ ಕಡೆಗಳಲ್ಲಿ ಈ ಎರಡೂ ಸಂಘಟನೆಗಳ ಕಾರ್ಯಕರ್ತರು ದಿಢೀರ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಪಿಎಫ್ಐ ಹಾಗೂ ಎಸ್ಡಿಪಿಐ ಮುಖಂಡರ ಮೇಲೆ ನಡೆಯುತ್ತಿರುವ ದಾಳಿ ಪ್ರಕರಣದ ವಿಚಾರವಾಗಿ ಕಲಬುರಗಿಯಲ್ಲಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳವನ್ನು ಮುಂದಿಟ್ಟುಕೊಂಡು ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಇದೊಂದು ಕುಕೃತ್ಯ ಹಾಗೂ ಷಡ್ಯಂತ್ರವಾಗಿದೆ. ನಿಜವಾದ ದೇಶಭಕ್ತರು, ಸಂವಿಧಾನ ಪರವಾಗಿದ್ದರಿಂದ ಬಿಜೆಪಿ ಹಾಗೂ ಆರ್ಎಸ್ಎಸ್ ಹೆದರಿಕೊಂಡಿದೆ. ಬಿಜೆಪಿ ಕನಸಿನ, ಬ್ರಾಹ್ಮಣ ಭಾರತವನ್ನು ಕಟ್ಟಲು ಪಿಎಫ್ಐ ಹಾಗೂ ಎಸ್ಡಿಪಿಐ ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಗುಡುಗಿದ್ದಾರೆ.
ಇದು ಬುದ್ಧನ ಭಾರತ, ಅಂಬೇಡ್ಕರ್ ಭಾರತ, ಬಸವನ ಭಾರತ, ಶಾಹು ಮಹಾರಾಜ್ ಭಾರತ , ಇದನ್ನು ನಾವು ಉಳಿಸಿಕೊಳ್ಳುತ್ತೇವೆ. ಇದನ್ನು ನಾಶ ಮಾಡಲು ನಾವು ಅವಕಾಶ ಮಾಡಿಕೊಡುವುದಿಲ್ಲ. ಪಿಎಫ್ಐ ಹಾಗೂ ಎಸ್ಡಿಪಿಐ ಮೇಲೆ ಮೊದಲಿನಿಂದಲೂ ಈ ರೀತಿಯ ದಾಳಿಗಳು ನಡೆಯುತ್ತಲೇ ಇದೆ. ಆದರೆ ಕೋರ್ಟ್ನಲ್ಲಿ ಈ ಎಲ್ಲಾ ಪ್ರಕರಣಗಳು ಬಿದ್ದು ಹೋಗಿದೆ. ಕಾನೂನು ಹೋರಾಟವನ್ನು ನಡೆಸಿ ಆರೋಪ ಮುಕ್ತರಾಗುವ ಶಕ್ತಿ ನಮ್ಮಲ್ಲಿ ಇದೆ ಎಂದು ಹೇಳಿದ್ದಾರೆ.
ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ರೆ ಬಿಜೆಪಿ ಬಳಿ ಉತ್ತರವಿಲ್ಲ. ಹೀಗಾಗಿ ಈ ರೀತಿ ದಾಳಿ ಮಾಡ್ತಿದ್ದಾರೆ. ಈ ಭೂಮಿಗೆ ಇಂದ್ರಲೋಕ, ಚಂದ್ರಲೋಕ ಇಳಿಸ್ತೀನಿ ಎಂದು ಕೊಟ್ಟಿರುವ ಆಶ್ವಾಸನೆಗಳ ಬಗ್ಗೆ ಜನರು ಪ್ರಶ್ನೆ ಮಾಡಿದರೆ ಉತ್ತರ ಕೊಡುವ ಯೋಗ್ಯತೆಯಾಗಲಿ ಅರ್ಹತೆಯಾಗಲಿ ಈ ಬಿಜೆಪಿಯವರಿಗಿಲ್ಲ. ಎಲ್ಲಿಂದಲೋ ನಾಲ್ಕು ಚಿರತೆ ಹಿಡಿದುಕೊಂಡು ಬಂದು ಅದಕ್ಕೆ ಹೆಸರಿಡಿ ಅಂತಾರೆ. ದೇಶದಲ್ಲಿ ತಿನ್ನೋಕೆ ಅನ್ನವಿಲ್ಲದೇ ಜನ ಸಾಯ್ತಿದ್ದಾರೆ. ಇಂತಹ ನಾಚಿಕೆಗೆಟ್ಟ ಪ್ರಧಾನಿ ಮಂತ್ರಿಯನ್ನು ನಾವು ಹಿಂದೆಂದೂ ನೋಡೇ ಇಲ್ಲ. ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ಪಿಎಫ್ಐ ಮೇಲೆ ಆರೋಪಗಳನ್ನು ಎತ್ತಿ ಹಾಕಿ ತಾವು ದೇಶಭಕ್ತರು ಎಂದು ತೋರಿಸಿಕೊಳ್ಳುವ ಪ್ರಯತ್ನ ಬಿಜೆಪಿಯದ್ದು ಎಂದು ಗುಡುಗಿದ್ದಾರೆ.
ಈ ಬಿಜೆಪಿ ಸರ್ಪೋಟ್ ಮಾಡುತ್ತಿರುವ ಈ ದೇಶ ದೊಡ್ಡ ಭಯೋತ್ಪಾದನೆ ಸಂಘಟನೆ ಎಂದರೆ ಅದು ಆರ್ಎಸ್ಎಸ್. ಆರ್ಎಸ್ಎಸ್ ಹತ್ತಿರ ಅಕ್ರಮ ಶಸ್ತ್ರಾಸ್ತ್ರಗಳ ದಾಸ್ತಾನು ಇದೆ. ಆರ್ಎಸ್ಎಸ್ ಹತ್ತಿರ ಅಕ್ರಮ ಹಣದ ವಹಿವಾಟು ಇದೆ .ಆರ್ಎಸ್ಎಸ್ ನೋಂದಾಯಿತ ಸಂಘಟನೆ ಅಲ್ಲ. ಆರ್ಎಸ್ಎಸ್ನವರು ಈ ದೇಶದಲ್ಲಿ ಬಾಂಬ್ ಕೃತ್ಯಗಳು ನಡೆಸಿದ ಉದಾಹರಣೆಗಳಿವೆ. ನಮ್ಮನ್ನು ಹೆದರಿಸಲು ಈ ರೀತಿಯ ದಾಳಿಯನ್ನು ಮಾಡಲಾಗುತ್ತಿದೆ. ಆದರೆ ಇದೆಲ್ಲದರಿಂದ ನಾವು ಗೆದ್ದು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : Naleen Kumar Kateel:‘ಸೋನಿಯಾ ಗಾಂಧಿಗೆ ಹಣ ನೀಡಿ ಸಿಎಂ ಆಗಿದ್ದವರು ಸಿದ್ದರಾಮಯ್ಯ’ : ನಳೀನ್ಕುಮಾರ್ ಕಟೀಲ್ ಆರೋಪ
ಇದನ್ನೂ ಓದಿ : Siddaramaiah :‘ಕಟೀಲ್ ಒಬ್ಬ ವಿದೂಷಕ, ಮೆಚ್ಯೂರಿಟಿ ಇಲ್ಲದ ವ್ಯಕ್ತಿ’ : ನಳೀನ್ ಕುಮಾರ್ ಕಟೀಲ್ ಆರೋಪಕ್ಕೆ ಸಿದ್ದು ತಿರುಗೇಟು
‘RSS is the biggest terrorist organization in this country’: SDPI State General Secretary Bhaskar Prasad