Bigg Boss Kannada Season 9 : ಬಿಗ್‌ಬಾಸ್‌ ಸೀಸನ್‌ 9 : ಮೊದಲ ವಾರದಲ್ಲೇ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ, 12 ಮಂದಿ ನಾಮಿನೇಟ್‌

(Bigg Boss Kannada Season 9) ಕಿರುತರೆಯಲ್ಲಿ ಈಗಾಗಲೇ ಬಿಗ್‌ಬಾಸ್‌ ಕನ್ನಡ ಸೀಸನ್‌ 9ರ ಆವೃತ್ತಿ ಪ್ರಾರಂಭವಾಗಿದೆ. ನೂರು ದಿನದ ವಾಸಕ್ಕೆ ಒಂಬತ್ತು ಹೊಸಸ್ಪರ್ಧಿ ಹಾಗೂ ಒಂಬತ್ತು ಹಳೆಸ್ಪರ್ಧಿಗಳು ದೊಡ್ಮನೆ ಸೇರಿದ್ದಾರೆ. ಪ್ರತಿ ರಾತ್ರಿ 9.30ಕ್ಕೆ ಶುರುವಾಗುವ ಶೋವನ್ನು ಬಿಗ್‌ಬಾಸ್‌ ಅಭಿಮಾನಿಗಳು ವೀಕ್ಷಣೆ ಮಾಡಲು ಪ್ರಾರಂಭಿಸಿದ್ದಾರೆ.

(Bigg Boss Kannada Season 9)ಮೊದಲ ವಾರದಿಂದಲ್ಲಿ ಪ್ರಾರಂಭವಾಗುತ್ತಿದ್ದ ದೊಡ್ಮನೆ ಜಗಳ ಈ ಬಾರಿ ಮೊದಲ ದಿನದಿಂದಲೇ ಪ್ರಾರಂಭವಾಗಿದೆ. ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡುವುದು ಬಿಗ್‌ಬಾಸ್‌ ಮನೆಯಲ್ಲಿ ಸಾಮಾನ್ಯವಾಗಿರುತ್ತದೆ. ಅದೇ ರೀತಿ ಕಳೆದ ಸೀಸನ್‌ನಲ್ಲೇ ಪ್ರಶಾಂತ್‌ ಸಂಬರ್ಗಿಯವರು ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳನ್ನು ವೈಯಕ್ತಿಕವಾಗಿ ಆಗಿ ಟಾರ್ಗೆಟ್‌ ಮಾಡಿರುತ್ತಾರೆ. ಅದನ್ನುಈ ಸೀಸನ್‌ನಲ್ಲಿಯೂ ಮುಂದುವರಿಸಿದ ಹಾಗೆ ಕಾಣುತ್ತದೆ. ಪ್ರಶಾಂತ್‌ ಸಂಬರ್ಗಿಯವರು ಆರ್ಯವರ್ಧನ್‌ ಗುರೂಜಿಯವರ ಹೆಸರಿನ ಬಗ್ಗೆ ಮಾತನಾಡಿದ್ದು ಜಗಳಕ್ಕೆ ಕಾರಣವಾಗಿದೆ.

ಆರ್ಯವರ್ಧನ್‌ ಗುರೂಜಿಯವರು ಸಂಖ್ಯಾಶಾಸ್ತ್ರ ಹೇಳುವುದರ ಮೂಲಕ ಜನಮನ್ನಣೆ ಗಳಿಸಿ ಕೆಲವೊಂದು ಕಡೆಯಲ್ಲಿ ಟ್ರೋಲ್‌ಗೂ ಗುರಿಯಾಗಿದ್ದರು. ಆಮೇಲೆ ಬಿಗ್‌ಬಾಸ್‌ ಓಟಿಟಿ ಸೀಸನ್‌ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡರು. ಈಗ ಟಿವಿ ಸೀಸನ್‌ಗೂ ಬಂದಿರುವುದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಹೀಗಿರುವಾಗ ಪ್ರಶಾಂತ್‌ ಸಂಬರ್ಗಿಯವರು ಮೊದಲ ದಿನವೇ ಇವರ ಜೊತೆ ಜಗಳವನ್ನು ಪ್ರಾರಂಭಿಸಿದ್ದಾರೆ.

ಅಷ್ಟೇ ಅಲ್ಲದೇ ಪ್ರಶಾಂತ್‌ ಸಂಬರ್ಗಿಯವರು ರೂಪೇಶ್‌ ರಾಜಣ್ಣನವರ ಜೊತೆ ಜಗಳಕ್ಕೆ ಇಳಿದಿದ್ದಾರೆ. ಇಬ್ಬರ ಜಗಳವನ್ನು ನಿಲ್ಲಿಸಲು ದೊಡ್ಮನೆ ಮಂದಿ ಹರಸಾಹಸ ಪಟ್ಟರು ಒಬ್ಬರು ಜಗಳವನ್ನು ನಿಲ್ಲಿಸಲಿಲ್ಲ. ಇಬ್ಬರು ಜಗಳದ ಮಧ್ಯೆ ಟೇಬಲ್‌ ಕುಟ್ಟಿ ಮಾತನಾಡುತ್ತಿದ್ದರು. ಅದನ್ನು ಅರುಣ್‌ ಸಾಗರ್‌ರವರು ಹಾಸ್ಯ ಚಟಾಕಿ ಮೂಲಕ ಮನೆಯವರನ್ನು ನಗಿಸಿದ್ದರು. ಇಬ್ಬರೂ ಟೇಬಲ್‌ ಕುಟ್ಟಿ ಮಾತನಾಡಿದರಿಂದ ನಾನು ಚಿತ್ರಾನ್ನ ತಿನ್ನುವ ಮೊದಲೇ ಬಾಯಿಗೆ ಹೋಗುತ್ತಿದೆ. ದಯವಿಟ್ಟು ಟೇಬಲ್‌ ಕುಟ್ಟಿ ಮಾತನಾಡಬೇಡಿ ಎಂದು ಅರುಣ್‌ ಸಾಗರ್‌ ಅವರಿಗೆ ಹೇಳಿದ್ದರು.

ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ಮೊದಲ ವಾರವೇ 12 ಜನರು ನಾಮಿನೇಟ್‌ ಆಗುವ ಮೂಲಕ ಎಲಿಮಿನೇಷ್‌ ಕಾವು ಏರಿದೆ. ನೂರು ದಿನ ಹೋರಾಟದಲ್ಲಿ ಇರಬೇಕೆಂದು ಬಂದವರಲ್ಲಿ ಮೊದಲ ವಾರವೇ ಹೋಗುವವರು ಯಾರು? ಎನ್ನುವುದನ್ನು ನೋಡಬೇಕಿದೆ. 18 ಜನರಲ್ಲಿ ಮೊದಲ ವಾರ ಇಬ್ಬರು ಎಲಿಮಿನೇಟ್‌ ಆಗುವ ಸಾಧ್ಯತೆ ಇದೆ. ಹಾಗಾಗಿ ಹಳೆಸ್ಪರ್ಧಿಗಳ ಜೊತೆ ಹೊಸ ಸ್ಪರ್ಧಿಗಳ ಹೋರಾಟ ಜೋರಾಗಿಯೇ ನಡೆಯುತ್ತಿದೆ.

ಇದನ್ನೂ ಓದಿ : ತಾಯ್ತನದ ಸವಾಲುಗಳನ್ನು ಹಂಚಿಕೊಂಡ ನಟಿ ಮಾಧುರಿ ದೀಕ್ಷಿತ್​

ಇದನ್ನೂ ಓದಿ : ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್- ಮರೆಯಲಾರದ ಅನುಭವ ಎಂದ ನಿರ್ದೇಶಕ

ಇದನ್ನೂ ಓದಿ : ಕಿರುತೆರೆಯಲ್ಲಿ ಬಿಗ್‌ಬಾಸ್‌ ಅಬ್ಬರ : ಹೊಸಬರು, ಹಳಬರ ಕಾದಾಟ

ಈ ಬಾರಿ ಬಿಗ್‌ಬಾಸ್‌ನಲ್ಲಿ ಪ್ರವೀಣರ ಜೊತೆ ನವೀನರು ಎನ್ನುವಂತೆ ಹಳೆ ಸ್ಪರ್ಧಿಗಳ ಜೊತೆ ಹೊಸ ಸ್ಪರ್ಧಿಗಳನ್ನು ಜೋಡಿ ಮಾಡಿದ್ದಾರೆ. ಹಾಗೆ ಮೊದಲ ದಿನದ ಟಾಸ್ಕ್‌ ನಡೆದಿದ್ದು ಅದರಲ್ಲಿ ಪ್ರಶಾಂತ್‌ ಸಂಬರ್ಗಿ ಮತ್ತು ವಿನೋದ ಗೊಬ್ಬರಗಾಲ ಜೋಡಿಯಾಗಿ ಟಾಸ್ಕ್‌ ವಿನ್‌ ಆಗಿದ್ದಾರೆ. ಟಾಸ್ಕ್‌ ಗೆದ್ದಿರುವುದಕ್ಕಾಗಿ ಪ್ರಶಾಂತ್‌ ಸಂಬರ್ಗಿ ಬಿಗ್‌ಬಾಸ್‌ ಬಳಿ ಐಸ್‌ಕ್ರೀಮ್‌ ಅಥವಾ ಏನಾದರೂ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Bigg Boss Season 9: Contestants compete in first week, 12 nominated

Comments are closed.