ಬೆಂಗಳೂರು : ಮೂರು ಸಂಧಾನ ಸಭೆ ಬಳಿಕವೂ ನಿಲ್ಲದ ರಷ್ಯಾ ಹಾಗೂ ಉಕ್ರೇನ್ ( Russia Ukraine crisis) ನಡುವಿನ ಯುದ್ಧದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಯೊರ್ವ ಸಾವನ್ನಪ್ಪಿದ್ದಾನೆ ಎಂಬ ಸಂಗತಿ ಖಚಿತಗೊಂಡಿದ್ದು ಇನ್ನು ಉಕ್ರೇನ್ ನಲ್ಲೇ ಉಳಿದಿರುವ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆಮಾಡಿದೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಮೂಲದ ನವೀನ್ ( Naveen) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂಬ ಸಂಗತಿಯನ್ನು ಭಾರತೀಯ ವಿದೇಶಾಂಗ ಕಚೇರಿ ಖಚಿತ ಪಡಿಸಿದೆ.
ಖಾರ್ಕೀವ್ ಪ್ರದೇಶದಲ್ಲಿದ್ದ ಹಾವೇರಿಯ ರಾಣಿಬೆನ್ನೂರು ಮೂಲದ ನವೀನ್ ಬೆಳಗ್ಗೆ ಎಟಿಎಂನಿಂದ ಹಣ ಪಡೆಯಲು ಹಾಸ್ಟೆಲ್ ನಿಂದ ಆಚೆಗೆ ಬಂದಿದ್ದು ಈ ವೇಳೆ ನಡೆದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಮೃತ ನವೀನ್ (Naveen) ಪೋಷಕರು ಚೈನೈನಲ್ಲಿದ್ದು ಅವರಿಗೆ ವಿದೇಶಾಂಗ ಕಾರ್ಯಾಲಯ ಈ ಕುರಿತು ಮಾಹಿತಿ ನೀಡಿದೆ. ಮಾತ್ರವಲ್ಲ ವಿದೇಶಾಂಗ ಸಚಿವಾಲಯವೂ ಈ ವಿದ್ಯಾರ್ಥಿಯ ಮೃತದೇಹವನ್ನು ಕರ್ನಾಟಕಕ್ಕೆ ತರಿಸಲು ಎಲ್ಲ ಸಿದ್ಧತೆ ನಡೆಸಿದೆ.
ಕಳೆದ ಒಂದು ವಾರದಿಂದ ಉಕ್ರೇನ್ ಮತ್ತು ರಷ್ಯಾದ ನಡುವೆ ( Russia Ukraine crisis) ಯುದ್ಧ ಆರಂಭಗೊಂಡಿದೆ. ಇದರಿಂದ ಕರ್ನಾಟಕ ಸೇರಿದಂತೆ ಭಾರತದಿಂದ ವೈದ್ಯಕೀಯ ಪದವಿ ಸೇರಿದಂತೆ ವಿವಿಧ ಶಿಕ್ಷಣಕ್ಕಾಗಿ ತೆರಳಿದ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇದರಲ್ಲಿ ಖಾರ್ಖಿವ್ ಸೇರಿದಂತೆ ಹಲವು ಪ್ರದೇಶದಲ್ಲಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆಸುವ ಕಾರ್ಯ ಚುರುಕುಗೊಂಡಿದ್ದು, ಈಗಾಗಲೇ ನೂರಾರು ವಿದ್ಯಾರ್ಥಿಗಳು ತಾಯ್ನೆಲಕ್ಕೆ ಮರಳಿದ್ದಾರೆ.
Russia Ukraine crisis ನವೀನ್ ಸಾವಿನ ಬೆನ್ನಲ್ಲೇ ಪೋಷಕರಲ್ಲಿ ಹೆಚ್ಚಿದ ಆತಂಕ
ಈ ಮಧ್ಯೆ ಹಲವು ವಿದ್ಯಾರ್ಥಿಗಳು ವಿದೇಶಾಂಗ ಸಚಿವಾಲಯದ ಸೂಚನೆ ಇಲ್ಲದೇ ರೈಲುಗಳಲ್ಲಿ ಉಕ್ರೇನ್ ಗಡಿಭಾಗಕ್ಕೆ ತೆರಳುತ್ತಿದ್ದು ಹಾಗೇ ತೆರಳದಂತೆ ವಿದೇಶಾಂಗ ಸಚಿವಾಲಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದೆ. ಈ ಮಧ್ಯೆ ಈಗ ಕರ್ನಾಟಕ ಮೂಲದ ಓರ್ವ ವಿದ್ಯಾರ್ಥಿ (Naveen) ಖಾರ್ಖಿವ್ ಪ್ರದೇಶದಲ್ಲಿ ಸಾವಿಗೀಡಾಗಿರುವುದು ಅಲ್ಲೇ ಉಳಿದಿರುವ ಇತರ ವಿದ್ಯಾರ್ಥಿಗಳ ಪೋಷಕರ ಆತಂಕಕ್ಕೆ ಕಾರಣವಾಗಿದ್ದು ತಮ್ಮ ಮಕ್ಕಳನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಇನ್ನೊಂದೆಡೆ ಉಕ್ರೇನ್ ನಾದ್ಯಂತ ( Russia Ukraine crisis ) ಪರಿಸ್ಥಿತಿ ಪ್ರತಿಕ್ಷಣ ಹದಗೆಡುತ್ತಿದ್ದು ಅಲ್ಲಿಂದ ಬಂಕರ್ ಹಾಗೂ ಮೆಟ್ರೋ ಸ್ಟೇಶನ್ ಗಳಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳು ಪೋಷಕರಿಗೆ ಕರೆ ಮಾಡಿ ತಮ್ಮನ್ನು ಇಲ್ಲಿಂದ ರಕ್ಷಿಸುವಂತೆ ಮನವಿಮಾಡುತ್ತಿದ್ದಾರೆ. ಮಕ್ಕಳು ಅನ್ನ ನೀರಿಲ್ಲದೇ ಜೀವ ಉಳಿಸಿಕೊಳ್ಳಲು ಪಡುತ್ತಿರುವ ಶ್ರಮಕಂಡು ಪೋಷಕರು ಕಣ್ಣೀರಾಗುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಉಕ್ರೇನ್ ನಲ್ಲಿ ಒಟ್ಟು 8 ಸಾವಿರ ಭಾರತೀಯರು ಸಿಲುಕಿದ್ದು ವಾಪಸ್ ಕರೆತರೋ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಇನ್ನು ಕರ್ನಾಟಕವೊಂದಕ್ಕೆ ಸೇರಿದ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರಂತೆ.
With profound sorrow we confirm that an Indian student lost his life in shelling in Kharkiv this morning. The Ministry is in touch with his family.
— Arindam Bagchi (@MEAIndia) March 1, 2022
We convey our deepest condolences to the family.
ಇದನ್ನೂ ಓದಿ : ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಪುತ್ರ ಜೈನ್ ನಿಧನ
Russia Ukraine crisis : Indian student Naveen from Haveri Karnataka shot dead in Ukraine