ಸೋಮವಾರ, ಏಪ್ರಿಲ್ 28, 2025
HomekarnatakaRussia Ukraine crisis : ನವೀನ ಮೃತದೇಹ ತರಲು ಸರ್ವ ಪ್ರಯತ್ನ : ಕುಟುಂಬಸ್ಥರಿಗೆ ಪರಿಹಾರದ...

Russia Ukraine crisis : ನವೀನ ಮೃತದೇಹ ತರಲು ಸರ್ವ ಪ್ರಯತ್ನ : ಕುಟುಂಬಸ್ಥರಿಗೆ ಪರಿಹಾರದ ಭರವಸೆ ಕೊಟ್ಟ ಸಿಎಂ ಬೊಮ್ಮಾಯಿ

- Advertisement -

ಬೆಂಗಳೂರು : ರಷ್ಯಾ ಹಾಗೂ ಉಕ್ರೇನ್‌ ( Russia Ukraine crisis ) ನಡುವೆ ನಡೆಯುತ್ತಿರುವ ಯುದ್ದದಲ್ಲಿ ಮೃತ ಪಟ್ಟ ಹಾವೇರಿಯ ನವೀನ್‌‌ ( Naveen Death Ukraine) ಮೃತ ದೇಹವನ್ನು ಕರೆತರುವ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿಯೂ ಪ್ರಯತ್ನ ನಡೆದಿದೆ. ಈ ಕುರಿತು ರಾಯಭಾರ ಕಚೇರಿ ಅಧಿಕಾರಿಗಳ ಜೊತೆಗೆ ಮಾತನಾಡುವೆ. ಅಲ್ಲದೇ ಮೃತ ನವೀನ್‌ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡುವುದಾಗಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೀನ್‌ ಅವರು ಮೃತಪಟ್ಟಿರುವ ಕುರಿತು ಈಗಾಗಲೇ ದೃಢಪಟ್ಟಿದೆ. ಅವರ ಕುಟುಂಬಸ್ಥರು ಈಗಾಗಲೇ ಮಗನನ್ನು ಕಳೆದುಕೊಂಡಿರುವ ದುಃಖದಲ್ಲಿದ್ದಾರೆ. ಹೀಗಾಗಿ ನವೀನ್‌ ಮೃತ ದೇಹವನ್ನು ಆದಷ್ಟು ಶೀಘ್ರದಲ್ಲಿ ಕರೆತರುವ ಪ್ರಯತ್ನ ನಡೆದಿದೆ. ಆದರೆ ನಿರಂತರವಾಗಿ ಯುದ್ದ (Russia Ukraine crisis) ನಡೆಯುತ್ತಿರುವುದು ಸಮಸ್ಯೆಯಾಗುತ್ತಿದೆ. ಈ ಕುರಿತು ರಾಯಭಾರ ಕಚೇರಿ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇವೆ ಎಂದಿದ್ದಾರೆ.

ಹಾವೇರಿಯ ನವೀನ್‌ ಕುಟುಂಬಸ್ಥರು ನೋವಿನಲ್ಲಿದ್ದು, ಅವರ ಕುಟುಂಬಕ್ಕೆ ಪರಹಾರವನ್ನು ಕೊಟ್ಟೆ ಕೊಡುತ್ತೇವೆ. ಇನ್ನು ಉಕ್ರೇನ್‌ನಲ್ಲಿ ಉಳಿದಿರುವ ಉಳಿದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತರುತ್ತೇವೆ. ಈ ಕುರಿತು ನಿರಂತರವಾಗಿ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಇಂದು ಹಾವೇರಿಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಮೃತ ನವೀನ್‌ ಅವರ ಮೃತ ದೇಹವನ್ನು ತರುವ ಸಲುವಾಗಿ ಕಟುಂಬಸ್ಥರ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಅಲ್ಲದೇ ನವೀನ್‌ ಸಾವಿನ ಸುದ್ದಿ ತಿಳಿಯುತ್ತಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಬಾವುಕರಾಗಿದ್ದಾರೆ.

ಇತ್ತ ನವೀನ ಹುಟ್ಟೂರಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತ ದೇಹವನ್ನು ನೋಡಲು ಕೊನೆಯ ಬಾರಿಗೆ ಅವಕಾಶವನ್ನು ಕಲ್ಪಿಸಿ ಎಂದು ನವೀನ್‌ ಸಹೋದರ ಹರ್ಷ ಮನವಿ ಮಾಡಿದ್ದಾರೆ. ಅಲ್ಲದೇ ಹಾವೇರಿಯಲ್ಲಿರುವ ನವೀನ್‌ ಮನೆಗೆ ಸಾಕಷ್ಟು ಮಂದಿ ಆಗಮಿಸಿ ಸಾಂತ್ವಾನ ಹೇಳುವ ಕಾರ್ಯವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ : ದುಬಾರಿ ಡೊನೇಷನ್ ಹಾಗೂ ಮೀಸಲಾತಿ ವ್ಯವಸ್ಥೆ ಇನ್ನಾದರೂ ಬದಲಾಗಲಿ : ನವೀನ್ ತಂದೆ ಆಕ್ರೋಶ

ಇದನ್ನೂ ಓದಿ : ವ್ಯಾಕ್ಯೂಮ್ ಬಾಂಬ್ ಎಂದರೇನು? ರಷ್ಯಾ ಉಕ್ರೇನ್ ಮೇಲೆ ಈ ಬಾಂಬ್ ಪ್ರಯೋಗಿಸಿದೆಯೇ?

( Russia Ukraine crisis : Naveen dead body back to the family, promising relief says CM Basavaraj Bommai )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular