ಬೆಂಗಳೂರು : ಶಿಕ್ಷಣಕ್ಕಾಗಿ ದೂರದ ದೇಶಕ್ಕೆ ಮಗನನ್ನು ಕಳಿಸಿ ಕಳೆದುಕೊಂಡಿರುವ ಹಾವೇರಿಯ ನವೀನ್ ನ್ಯಾನಗೌಡರ್ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ಉಕ್ರೇನ್ ಖಾರ್ಖಿವ್ (Russia Ukraine crisis ) ಪ್ರದೇಶದಲ್ಲಿ ಮೃತಪಟ್ಟ ನವೀನ್ ಮೃತದೇಹ (Naveen death) ಭಾರತಕ್ಕೆ ತರೋದು ಕಷ್ಟ ಎನ್ನಲಾಗುತ್ತಿದ್ದು, ಮಗನನ್ನು ಅಂತೂ ಬದುಕಿಸಿ ತರಲಿಲ್ಲ. ಶವವನ್ನಾದರೂ ತಂದು ಕೊಡಿ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಉಕ್ರೇನ್ ಖಾರ್ಖಿವ್ ಪ್ರದೇಶದಲ್ಲಿ ಎಂಬಿಬಿಎಸ್ ಓದುತ್ತಿದ್ದ ಹಾವೇರಿಯ ಚಳಗೇರಿ ಮೂಲದ ನವೀನ್ ನ್ಯಾನ್ ಗೌಡರ್ ಆಹಾರ ಪದಾರ್ಥ ತರುವುದಕ್ಕಾಗಿ ಶಾಪ್ ಗಳ ಬಳಿ ತೆರಳಿದ್ದ ವೇಳೆ ರಷ್ಯಾ ನಡೆಸಿದ ಶೆಲ್ ದಾಳಿಯಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ನವೀನ್ ಸಾವಿನ ಸಂಗತಿಯನ್ನು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಕಚೇರಿ ಖಚಿತಪಡಿಸಿದೆ. ನವೀನ್‌ನ್ಯಾನ್ ಗೌಡರ್ ಸಂಗತಿಯನ್ನು ಕುಟುಂಬ ವರ್ಗಕ್ಕೆ ತಿಳಿಸಿರುವ ವಿದೇಶಾಂಗ ಕಚೇರಿ ಸಂತಾಪ ವ್ಯಕ್ತಪಡಿಸಿದೆ.
ಈಮಧ್ಯೆ ಮಗನ ಸಾವಿನಿಂದ ಕಂಗಾಲಾಗಿರುವ ನವೀನ್ (Naveen death) ಕುಟುಂಬ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಮಾತ್ರವಲ್ಲ ಮಗನ ಸಾವಿಗೆ ಕರ್ನಾಟಕ ಹಾಗೂ ದೇಶದಲ್ಲಿರುವ ಮೀಸಲಾತಿ ಮತ್ತು ದುಬಾರಿ ಶಿಕ್ಷಣ. ವ್ಯವಸ್ಥೆಯೇ ಕಾರಣ ಎಂದು ಆರೋಪಿಸಿದೆ. ಬದುಕಿದ್ದಾಗ ಮಗನನ್ನು ಸುರಕ್ಷಿತವಾಗಿ ಕರೆಸುವಂತೆ ಎಂಪಿ ಎಮ್ ಎಲ್ ಎಗಳಿಗೆ ಮನವಿ ಮಾಡಿದರೇ ದೂರವಾಣಿ ಕರೆಯನ್ನು ಸ್ವೀಕರಿಸದೇ ನಿರ್ಲಕ್ಷ್ಯ ಮಾಡಿದರು. ಈಗ ಸತ್ತ ಮೇಲೆ ಎಲ್ಲರೂ ಬಂದು ಸಾಂತ್ವನ ಹೇಳುತ್ತಿದ್ದಾರೆ ಎಂದು ನವೀನ್ ತಂದೆ ಶೇಖರ್ ಗೌಡರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮಗನ್ನಂತೂ ಕಳೆದುಕೊಂಡಿದ್ದೇನೆ. ಅವನ ಶವವನ್ನಾದರೂ ತರಿಸಿಕೊಡಿ. ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಕುಟುಂಬಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಆದರೆ ಇದು ಅಷ್ಟು ಸುಲಭವಲ್ಲ ಎಂಬರ್ಥದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ಕುಟುಂಬಸ್ಥರ ಆಕ್ರೋಶ ಮತ್ತಷ್ಟು ಹೆಚ್ಚಿದೆ. ನವೀನ್ ಶವ ತರುವ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ,ವಾರ್ ಝೋನ್ ಆಗಿರೋದರಿಂದ ಏನನ್ನು ನಿಖರವಾಗಿ ಹೇಳೋದು ಕಷ್ಟ. ನವೀನ್ ಡ್ರೆಸ್ ಹೋಲುವಂತ ಬಟ್ಟೆ ತೊಟ್ಟ ವಿದ್ಯಾರ್ಥಿಯ ಪೋಟೋ ಬಂದಿದೆ.
ಇವತ್ತು ಮತ್ತೆ ಉಕ್ರೇನ್ ನಲ್ಲಿರುವ ಭಾರತೀಯ ಎಂಬೆಸಿ ಜೊತೆ ಮಾತನಾಡುತ್ತೇನೆ. ಆದರೆ ಯುದ್ಧ ಪೀಡಿತ ಪ್ರದೇಶವಾಗಿರೋದರಿಂದ ಏನನ್ನು ನಿಖರವಾಗಿ ಹೇಳೋದು ಕಷ್ಟ. ಆದಷ್ಟು ಪ್ರಯತ್ನ ಮಾಡುತ್ತೇವೆ. ಯಾವಾಗ ನವೀನ್ ಶವ ಬರುತ್ತದೆ. ಎಷ್ಟು ದಿನ ಆಗುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಸಿಎಂ ಮಾತಿನಿಂದ ನವೀನ್ ಮೃತದೇಹ ಭಾರತಕ್ಕೆ ಬರೋದೇ ಅನುಮಾನ ಎಂಬಂಥ ಸ್ಥಿತಿ ನಿರ್ಮಾಣವಾಗಿದ್ದು ಕುಟುಂಬಸ್ಥರ ದುಃಖಮುಗಿಲು ಮುಟ್ಟಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಭೀಕರ ಅಪಘಾತ : ಎಎಸ್ಐ ಹಾಗೂ ಮಗಳು ಸಾವು
ಇದನ್ನೂ ಓದಿ : Russia Ukraine crisis : ನವೀನ ಮೃತದೇಹ ತರಲು ಸರ್ವ ಪ್ರಯತ್ನ : ಕುಟುಂಬಸ್ಥರಿಗೆ ಪರಿಹಾರದ ಭರವಸೆ ಕೊಟ್ಟ ಸಿಎಂ ಬೊಮ್ಮಾಯಿ
(Russia Ukraine crisis Naveen death body doubt coming India)