HDK NEET Tweet War : ನವೀನ್ ಸಾವು ಪ್ರಕರಣ : ನೀಟ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ

ಬೆಂಗಳೂರು : ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ನ್ಯಾಮ್ ಗೌಡರ್ ಬಲಿಯಾಗುತ್ತಿದ್ದಂತೆ ರಾಜ್ಯದಲ್ಲಿ ವ್ಯಾಪಾರಿಕರಣ ಗೊಂಡಿರುವ ಶಿಕ್ಷಣ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಬೀಳಲಾರಂಭಿಸಿದೆ. ನವೀನ್ ತಂದೆ ಮಗನ ಸಾವಿಗೆ ಈ ದೇಶದ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದಿರುವಂತೆಯೇ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ (HDK NEET Tweet War ) ಕೂಡಾ ಶಿಕ್ಷಣ ವ್ಯವಸ್ಥೆ ಹಾಗೂ ನೀಟ್ ಪರೀಕ್ಷೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಮೂಲಕ ಶಿಕ್ಷಣದ ವ್ಯಾಪಾರಿಕರಣದ ಬಗ್ಗೆ ಮಾತನಾಡಿರುವ ಎಚ್ಡಿಕೆ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ ವಿದ್ಯಾರ್ಥಿಗಳು ಹಾಗೂ ಪೋಷಕರ ಪಾಲಿಗೆ ಮರಣ ಶಾಸನವಾಗುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ವೈದ್ಯಶಿಕ್ಷಣದ ಕನಸು ಕಾಣುವ ಬಡ ಮತ್ತು ಮಧ್ಯಮ ವರ್ಗದ ಬದುಕನ್ನು ಛಿದ್ರಗೊಳಿಸುತ್ತಿರುವ ನೀಟ್ ಪರೀಕ್ಷೆ ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಮರಣ ಶಾಸನವಾಗುತ್ತಿದೆ. ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಟ್ಟು, ಉಳಿದವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ ಎಂದು ಎಚ್ಡಿಕೆ (HDK) ಆರೋಪಿಸಿದ್ದಾರೆ.

ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನೀಟ್ ತೇರ್ಗಡೇ ಕಷ್ಟಸಾಧ್ಯ, ಈ ದೌರ್ಬಲ್ಯವನ್ನರೀತೇ ಟ್ಯೂಶನ್ ಅಂಗಡಿಗಳು ಮಾರುಕಟ್ಟೆ ವಿಸ್ತರಿಸಿ ನವೀನಂಥಹ ವಿದ್ಯಾರ್ಥಿಗಳ ಶವದ ಮೇಲೆ ರಣಕೇಕೆ ಹಾಕುತ್ತಿವೆ. ನೀಟ್ ಹೆಸರಿನಲ್ಲಿ ನೀಟಾಗಿ ಉಳ್ಳವರಿಗೆ ವೈದ್ಯ ಶಿಕ್ಷಣವನ್ನು ದಾಸೋಹ ಮಾಡುವ ದಂಧೆ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಟ್ಯೂಶನ್ ಅಂಗಡಿಗಳ ಹಿಂದೆ ಯಾರಿದ್ದಾರೆ? ಯಾರಿಗೂ ಕಾಣದಂತೆ ಕೇಂದ್ರ ಸರ್ಕಾರವೇ ಅವಿತು ಕುಳಿತಿದ್ಯಾ? ನೀಟ್ ಸೃಷ್ಟಿಸಿದ ಅರಾಜಕತೆಗೆ ಇನ್ನಷ್ಟು ಬಲಿಬೇಕು ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.

ಅಲ್ಲದೇ ಕೇಂದ್ರ ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಮಂತ್ರಿಗಳೇ, ವೆಚ್ಚದ ಹೋಲಿಕೆ ಮಾಡಲು ನಾನು ಬಯಸುವುದಿಲ್ಲ. ಯಾವುದೇ ವಿವಾದ ಅಥವಾ ಚರ್ಚೆಗೆ ನಾನು ಕಾರಣವಾಗುವುದಿಲ್ಲ ಎಂದು ಹೇಳುವುದರ ಹಿಂದಿನ ಮರ್ಮವೇನು ? ಅವರ ಹೇಳಿಕೆ ಹಲವು ಗುಮಾನಿ ಸೃಷ್ಟಿಸಿದೆ ಎಂದು ಎಚ್ಡಿಕೆ ಟಾಂಗ್ ನೀಡಿದ್ದಾರೆ.

ಅಲ್ಲದೇ ವಿದ್ಯಾರ್ಥಿ ನವೀನ್ ಗೌಡರ್ ಮನೆಗೆ ಭೇಟಿ ನೀಡಿದ ವೇಳೆ, ಸಚಿವ ಜೋಶಿ ಹೇಳಿದ ಮಾತನ್ನು ಖಂಡಿಸಿರುವ ಎಚ್ಡಿಕೆ, ನವೀನ್ ಸಾವು ನೀಟ್ ನ ಸಾಚಾತನವನ್ನೇ ಪ್ರಶ್ನಿಸುತ್ತಿರು ವಂತಿದೆ. ಬಡ ಮಕ್ಕಳ ರಕ್ತ ಹೀರುವ ಶ್ರೀಮಂತರಿಗಷ್ಟೇ ಮೀಸಲಾಗಿರುವ ವೈದ್ಯ ಶಿಕ್ಷಣದ ವ್ಯಾಪಾರೀಕರಣ ದೇಶಕ್ಕೆ ಅಪಮಾನಕರ ಎಂದು ಎಚ್ಡಿಕೆ ಆರೋಪಿಸಿದ್ದಾರೆ.

ಇದನ್ನೂ ಓದಿ : ದುಬಾರಿ ಡೊನೇಷನ್ ಹಾಗೂ ಮೀಸಲಾತಿ ವ್ಯವಸ್ಥೆ ಇನ್ನಾದರೂ ಬದಲಾಗಲಿ : ನವೀನ್ ತಂದೆ ಆಕ್ರೋಶ

ಇದನ್ನೂ ಓದಿ : ನವೀನ ಮೃತದೇಹ ತರಲು ಸರ್ವ ಪ್ರಯತ್ನ : ಕುಟುಂಬಸ್ಥರಿಗೆ ಪರಿಹಾರದ ಭರವಸೆ ಕೊಟ್ಟ ಸಿಎಂ ಬೊಮ್ಮಾಯಿ

(HDK NEET Tweet War after death Naveen in Ukraine)

Comments are closed.