ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಡ್ಯಾನ್ಸಿಂಗ್ ಕಿಂಗ್ ಪುನೀತ್ ನಿಧನದಿಂದ ಅಭಿಮಾನಿಗಳು ಕಂಗಲಾಗಿದ್ದಾರೆ. ಮಾತ್ರವಲ್ಲ ಪುನೀತ್ ಸಾವಿಗೆ ಕೊನೆ ಕ್ಷಣದಲ್ಲಿ ಚಿಕಿತ್ಸೆ ನೀಡಿದ ವೈದ್ಯ ರಮಣರಾವ್ ನಿರ್ಲಕ್ಷ್ಯ ಕಾರಣ ಎಂಬ ಆರೋಪವನ್ನು ಮಾಡಿದ್ದಾರೆ.
ಪುನೀತ್ ಗೆ ಚಿಕಿತ್ಸೆ ನೀಡುವಲ್ಲಿ ರಮಣಶ್ರೀ ಕ್ಲಿನಿಕ್ ವೈದ್ಯ ಡಾ.ರಮಣರಾವ್ ರಿಂದ ಚಿಕಿತ್ಸಾ ಲೋಪವಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾತ್ರವಲ್ಲ ಈ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಪೊಲೀಸ್ ದೂರು ಕೂಡ ದಾಖಲಾಗಿದೆ.

ಸಾಮಾಜಿಕ ಜಾಲ ತಾಣದಲ್ಲಿ ವೈದ್ಯರ ನಿರ್ಲಕ್ಷ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಪುನೀತ್ ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಲು ಎಂಬ ಒತ್ತಾಯವೂ ಕೇಳಿಬಂದಿದೆ.

ಈ ಹಿನ್ನಲೆಯಲ್ಲಿ ಡಾ.ರಮಣರಾವ್ ಬೆಂಬಲಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ನಿಂತಿದ್ದು ಫನಾ ಅಧ್ಯಕ್ಷ ಡಾ.ಪ್ರಸನ್ನ ಡಾ.ರಮಣರಾವ್ ಗೆ ಭದ್ರತೆ ನೀಡುವಂತೆ ಸಿಎಂ ಬೊಮ್ಮಾಯಿ ಯವರಿಗೆ ಪತ್ರ ಬರೆದಿದ್ದಾರೆ.

ಸಿಎಂಗೆ ವಿವರವಾದ ಪತ್ರ ಬರೆದಿರುವ ಫನಾ ಅಧ್ಯಕ್ಷ ಡಾ.ಪ್ರಸನ್ನ, ಪುನೀತ್ ಚಿಕಿತ್ಸೆ ಬಗ್ಗೆ ನಡೆದಿರುವ ಚರ್ಚೆ ವೈದ್ಯಕೀಯ ಗೌಪ್ಯತೆ ನಿಯಮಗಳ ಉಲ್ಲಂಘನೆ. ವೈದ್ಯರ ವಿರುದ್ಧ ಕ್ರಮಕೈಗೊಳ್ಳುವ ಮುನ್ನ ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಗಮನದಲ್ಲಿರಬೇಕೆಂದು ಮನವಿ ಮಾಡಿದ್ದಾರೆ.

ವೈದ್ಯರಿಗೂ ಇತಿಮಿತಿಗಳಿವೆ. ಎಲ್ಲಾ ಸಂದರ್ಭದಲ್ಲೂ ಜೀವ ಉಳಿಸುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಪುನೀತ್ ಚಿಕಿತ್ಸೆಯಲ್ಲಿ ಪಾಲ್ಗೊಂಡ ವೈದ್ಯಕೀಯ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಫನಾ ಅಧ್ಯಕ್ಷ ಡಾ.ಪ್ರಸನ್ನ ಸಿಎಂಗೆ ಮನವಿ ಮಾಡಿದ್ದಾರೆ.
(Punit Raj Kumar was wrong in his treatment, Pana urges Dr. Raman Rao to provide security)