Sankirtana Yatra: ಕೇಸರಿಮಯವಾಯ್ತು ಶ್ರೀರಂಗಪಟ್ಟಣ : ಹಿಂದೂ ಜಾಗರಣಾ ವೇದಿಕೆಯಿಂದ ಸಂಕೀರ್ತನಾ ಯಾತ್ರೆ

ಮಂಡ್ಯ: (Sankirtana Yatra) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಹಿಂದೂ ಜಾಗರಣಾ ವೇದಿಕೆಯಿಂದ ಸಂಕೀರ್ತನಾ ಯಾತ್ರೆಯನ್ನು ಪ್ರಾರಂಭಿಸಿದ್ದು, ಮಂಡ್ಯ ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯದಿಂದ ಜಾಮಿಯಾ ಮಸೀದಿ ವೃತ್ತದ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಾಲಯ ತಲುಪಲಿದೆ. ಯಾತ್ರೆಯಲ್ಲಿ ಸುಮಾರು 10000 ಹನುಮ ಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆಯಿದೆ. ಇನ್ನು ಯಾತ್ರೆ ಹಿನ್ನೆಲೆ ಜಾಮಿಯಾ ಮಸೀದಿ ಬಳಿ ಬಿಗಿ ಪೊಲೀಸ್​ ಭದ್ರತೆ ಮಾಡಲಾಗಿದೆ.

ಪ್ರತಿ ವರ್ಷದ ರೀತಿ ಈ ಬಾರಿಯೂ ಸಹ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆಗೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದ ಇಂದು ಬೃಹತ್ ಸಂಕೀರ್ತನಾ ಯಾತ್ರೆ (Sankirtana Yatra) ನಡೆಯುತ್ತಿದೆ. ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಹೊಡೆದು ಟಿಪ್ಪು ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಮತ್ತೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಮರು ಪ್ರತಿಷ್ಠಪನೆಯಾಗಬೇಕೆಂದು ಹಲವು ವರ್ಷಗಳಿಂದ ಹಿಂದೂ ಜಾಗರಣ ವೇದಿಕೆ ಈ ಸಂಕೀರ್ತನಾ ಯಾತ್ರೆಯನ್ನೂ ಮಾಡಿಕೊಂಡು ಬಂದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಸದ್ಯ ಹೈಕೋರ್ಟ್ ಅಂಗಳದಲ್ಲಿದೆ.

ಹಿಂದೂ ಜಾಗರಣಾ ವೇದಿಕೆಯಿಂದ ನಡೆಯುತ್ತಿರುವ ಸಂಕೀರ್ತನಾ ಯಾತ್ರೆ ಹಿನ್ನಲೆ, ಜಾಮಿಯಾ ಮಸೀದಿ ಬಳಿ ಪೊಲೀಸ್ ಸರ್ಪಗಾವಲು, 25ಕ್ಕೂ ಹೆಚ್ಚು ಸಿಸಿ ಕ್ಯಾಮರಾ, ಒಂದು ಸಾವಿರಕ್ಕು ಅಧಿಕ ಪೊಲೀಸರ ನೀಯೋಜನೆ, ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನೂ ಈ ಸಂಕೀರ್ತನಾ ಯಾತ್ರೆಯಲ್ಲಿ ಸಾವರ್ಕರ್​ ಫೋಟೋ, ಜಾಮಿಯಾ ಮಸೀದಿ ಪ್ರವೇಶ ದ್ವಾರದ ಕಟ್ಟೆಗೆ ಸಾವರ್ಕರ್ ಬ್ಯಾನರ್ ಅಳವಡಿಸಲಾಗಿದ್ದು, ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ಬಳಿ ಸಾವರ್ಕರ್ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಶ್ರೀರಂಗಪಟ್ಟಣದಾದ್ಯಂತ ಕೇಸರಿ ಬಾವುಟ, ಹನುಮನ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು, ಶ್ರೀರಂಗಪಟ್ಟಣದ ಎಲ್ಲೆಡೆ ಕೇಸರಿಮಯವಾಗಿದ್ದು, ಜೈ ಶ್ರೀರಾಮ್‌ ಎನ್ನುವ ಘೋಷಣೆಗಳು ಮೊಳಗುತ್ತಿವೆ.

ಈ ಸಮಾಜ ಹಾಗೂ ರಾಷ್ಟ್ರವನ್ನು ಉನ್ನತಿಗೆ ಕೊಂಡೊಯ್ಯುವ ಪ್ರತಿಯೊಂದು ಕಾರ್ಯವು ಈ ದೇಶದ ಇತಿಹಾಸವಾಗಿ ದಾಖಲಿಸ್ಪಡುತ್ತದೆ. ಆ ಇತಿಹಾಸ ಮುಂದೆ ಧರ್ಮವಾಗುತ್ತದೆ ನಾಡಮುಂದೆ ಸಾವು ಕೂಡ ಸಣ್ಣದು ಎಂದು ವಿನಾಯಕ ದಾಮೋದರ ಸಾವರ್ಕರ್​ ಅವರು ಹೇಳಿದ ಬರಹವುಳ್ಳ ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ವಿವಾದಿತ ಪ್ರದೇಶಕ್ಕೆ ಮಂಡ್ಯ ಎಸ್​.ಪಿ ಎನ್​.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Wall writing: ಶಿವಮೊಗ್ಗದಲ್ಲಿ ವಿವಾದಾತ್ಮಕ ಗೋಡೆಬರಹ ಪತ್ತೆ

ಇದನ್ನೂ ಓದಿ : ದ.ಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ (ACB) ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಒಟ್ಟಾರೆ ಜಾಮಿಯಾ ಮಸೀದಿಯ ವಿವಾದ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಂಕೀರ್ತನಾ ಯಾತ್ರೆಯ ಮೂಲಕ ಹಿಂದೂ ಸಂಘಟನೆಗಳು ಜಾಮಿಯಾ ಮಸೀದಿಯಲ್ಲಾ ಮಂದಿರ ಎಂದು ಸಾರಲು ಹೊರಟಿದ್ದಾರೆ.

(Sankirtana Yatra) Sankirtana Yatra started today from Hindu Vigilance Forum in Srirangapatna, Mandya Srirangapatna will reach Kote Anjaneya Swamy Temple via Jamia Masjid Circle from Minishamba Temple. Around 10000 Hanuman Maladharis are likely to participate in the Yatra. Tight police security has been made near the Jamia Masjid in the background of the yatra.

Comments are closed.