Sara Abubakar: ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್‌ ನಿಧನ

(Sara Abubakar) ಕನ್ನಡ ಸಾಹಿತ್ಯ ಲೋಕದ ಅಮೋಘ ಲೇಕಕಿಯರಲ್ಲಿ ಒಬ್ಬರಾದ ಸಾರಾ ಅಬೂಬಕ್ಕರ್‌ ಅವರು ತಮ್ಮ ೮೭ ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾಸರಗೋಡಿನಲ್ಲಿ ಜೂನ್‌ ೩೦, ೧೯೩೬ ರಂದು ಜನ್ಮ ತಾಳಿದರು. ಹುಟ್ಟಿನಿಂದಲೇ ಬರವಣಿಗೆಯ ಮೇಲೆ ಆಸಕ್ತಿ ಹೊಂದಿದ್ದ ಇವರು ಇಂದು ಖ್ಯಾತ ಸಾಹಿತಿ (Sara Abubakar) ಎಂದು ಹೆಸರುವಾಸಿಯಾಗಿದ್ದಾರೆ.

ಚಂದ್ರಗಿರಿ ತೀರದಲ್ಲಿ ಕಾಂದಂಬರಿ ಮೂಲಕ ಪ್ರಸಿದ್ದಿಯಾದ ಸಾರಾ‌ ಅಬೂಬಕ್ಕರ್ (Sara Abubakar) ಅವರು ಅನೇಕ ಕೃತಿಗಳನ್ನು ರಚಿಸಿ ಖ್ಯಾತಿಯನ್ನು ಪಡೆದರು. ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ, ತಳ ಒಡೆದ ದೋಣಿ, ಪಂಜರ ಹೀಗೆ ಮುಂತಾದ ಕೃತಿಗಳನ್ನು ರಚಿಸಿ ಖ್ಯಾತ ಸಾಹಿತಿ ಎನಿಸಿಕೊಂಡರು.

ಕೃತಿಯಷ್ಟೇ ಅಲ್ಲದೇ ಇವರು ಕಥಾ ಸಂಕಲನಗಳನ್ನು ಕೂಡ ಬರೆಯುತ್ತಿದ್ದರು. ಚಪ್ಪಲಿಗಳು, ಪಯಣ ಮತ್ತು ಇತರೆ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಹೀಗೆ ಅನೇಕ ಕಥಾ ಸಂಕಲನಗಳನ್ನು ಕೂಡ ಬರೆದಿದ್ದಾರೆ.

ಇದರ ಜೊತೆಗೆ ಕನರಿದ ಕನಸು, ಮಗಳು ಹುಟ್ಟಿದಳು, ತೇಳಾಡುವ ಮೋಡಗಳು, ತಾಳ, ಹೀಗೂ ಒಂದು ಕನಸು ಮುಂತಾದ ಬಾನುಲಿ ನಾಟಕಗಳನ್ನು ಕೂಡ ರಚಿಸಿದ್ದಾರೆ. ಲೇಖನ ಗುಚ್ಚ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ ಇವರ ಖ್ಯಾತ ಕಾದಂಬರಿಗಳು.

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತತಿನ ಬಿ. ಸರೋಜಾದೇವಿ ಪ್ರಶಸ್ತಿ, ಸಹನಾ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ಸುಳಿಯಲ್ಲಿ ಸಿಕ್ಕವರು ಕೃತಿಗೆ ಮಾತ್ರೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಹಾಗೂ ಮುಂತಾದ ಪ್ರಮುಖ ಪ್ರಶಸ್ತಿಗಳು ಲಭಿಸಿವೆ.

ಇದನ್ನೂ ಓದಿ : Siddhu Nija Kanasu : ಸಿದ್ಧು ನಿಜ ಕನಸುಗಳು ಪುಸ್ತಕ ಬಿಡುಗಡೆ : ಹೊಸ ವಿವಾದಕ್ಕೆ ಮುನ್ನುಡಿ ಬರೆದ ಬಿಜೆಪಿ

ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ ಲೇಡಿಹಿಲ್‌ ನ ನಿವಾಸದಲ್ಲಿ ಅಂತಿಮ ಕ್ರಿಯೆ ನಡೆಯಲಿದೆ.

Sara Abubakar: Famous writer Sara Abubakar passed away

Comments are closed.