Savarkar controversy : ನಮ್ಮ ಮೆಟ್ರೋಗೂ ಕಾಲಿಟ್ಟ ಸಾರ್ವಕರ್ ವಿವಾದ : ಪೋಟೋ ಅಳವಡಿಕೆಗೆ ವಿರೋಧ

ಬೆಂಗಳೂರು : (Savarkar controversy)ಮಂಗಳೂರಿನ ಶಾಲೆ‌ಹಾಗೂ ಶಿವಮೊಗ್ಗದಲ್ಲಿನ ವೀರ ಸಾವರ್ಕರ್ ವಿವಾದದ ಬಳಿಕ‌ ಬೆಂಗಳೂರು ಮೆಟ್ರೋ (Bangalore Metro) ದಲ್ಲೂ ಸಾವರ್ಕರ್ ವಿವಾದ ಹುಟ್ಟಿಕೊಂಡಿದ್ದು, ಮೆಟ್ರೋ ನಿಲ್ದಾಣದಲ್ಲಿ ಅಳವಡಿಸಲಾದ ವೀರಸಾವರ್ಕರ್ ಪೋಟೋ ವಿಚಾರಕ್ಕೆ ಹಾಗೂ ಬಿಎಂಆರ್ ಸಿಎಲ್ (BMRCL) ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಪರ ಹಾಗೂ ವಿರೋಧ ಚರ್ಚೆ ಹುಟ್ಟಿಕೊಂಡಿದೆ.

ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವೀರ ಸಾವರ್ಕರ್ ( Veer Savarkar) ಪೋಟೋವನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಚಂದ್ರಶೇಖರ್ ಆಜಾದ್ ಹಾಗೂ ಸರ್ದಾರ್ ಉದ್ಧಮ್ ಸಿಂಗ್ ಪೋಟೋವನ್ನು ಅಳವಡಿಸಲಾಗಿದೆ. ಈ ಪೋಟೋಗಳು ಈ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವೀರ ಸಾವರ್ಕರ್ ಪರ ಹಾಗೂ ವಿರುದ್ಧ ಜನರು ಕಮೆಂಟ್ ಮಾಡ್ತಿದ್ದಾರೆ.

ಮೆಟ್ರೋದ ವೀರ ಸಾವರ್ಕರ್ ಪೋಟೋ ಅಳವಡಿಕೆಯನ್ನು ಪ್ರಶ್ನಿಸಿರುವ ಬಹುತ್ವ ಕರ್ನಾಟಕ ಎಂಬ ಟ್ವಿಟರ್ ಪೇಜ್ ,ಹೆಲ್ಲೋ ಬೆಂಗಳೂರು ಮೆಟ್ರೋ ಅಧಿಕಾರಿಗಳೇ ಯಾಕೆ ಸ್ವಾಮಿ ಸಾವರ್ಕರ್ ಚಿತ್ರ? ಅವರ ಕೊಡುಗೆ ಏನು? ಬ್ರಿಟಿಷರಿಗೆ ಕ್ಷಮೆ ಕೇಳಿದವರನ್ನು ನಾವು ಯಾಕೆ ಗೌರವಿಸಬೇಕು? ನಿಮಗೆ ಬೇರೆ ಯಾರು ಸಿಕ್ಕಿಲ್ಲವೇ ? ಇದು ಯಾರ ಆದೇಶ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಖಾರವಾಗಿ ಹಲವು ದೇಶಪ್ರೇಮಿ ಕಮೆಂಟ್ ಗಳು ಬಂದಿದ್ದು, ಸಾವರ್ಕರ್ ಪೋಟೋ ಸಂಸತ್ತಿನಲ್ಲೂ‌ಇದೆ. ಅದನ್ನು ತೆರವುಗೊಳಿಸೋ ತಾಕತ್ತು ಇದ್ಯಾ?! ಸಾವರ್ಕರ್ ಪೋಟೋ ಹಾಕದೇ ಇನ್ನೇನು ಜಿನ್ನಾ ಪೋಟೋ ಹಾಕಬೇಕಿತ್ತಾ?! ಭಾರತ ತುಂಡು ಮಾಡಿ ಭಯೋತ್ಪಾದಕರ ದೇಶ ಪಾಕಿಸ್ತಾನ ಕಟ್ಟಿ ಇಲ್ಲಿ ಭಾರತದಲ್ಲಿ ಕೂಡಾ ಭಯೋತ್ಪಾದನೆ ಬೆಳೆಸುತ್ತಿರುವವರ ಪೋಟೋ ಹಾಕಬೇಕಿತ್ತಾ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಪಾಕಿಸ್ತಾನಕ್ಕೆ ಹೋಗಬೇಕಿದ್ದ ಹಲವರು ಇಲ್ಲೇ ಉಳಿದುಕೊಂಡು ಸಾವರ್ಕರ್ ದೇಶಭಕ್ತಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಹಿಜಾಬ್, ಹಲಾಲ ಬಳಿಕ ಸಾವರ್ಕರ್ ವಿವಾದ ತಲೆದೋರಿದ್ದು, ಶಿವಮೊಗ್ಗ ಇದೇ ಕಾರಣಕ್ಕೆ ಉದ್ವಿಘ್ನಗೊಂಡಿದೆ. ಇದರ ಮಧ್ಯೆ ಬೆಂಗಳೂರು ಮೆಟ್ರೋದಲ್ಲೂ ಸಾವರ್ಕರ್ ಪೋಟೋವೇ ವಿವಾದಕ್ಕೆ ಕಾರಣವಾಗ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಜೋರಾಗಿದೆ. ಆದರೆ ಸಧ್ಯಕ್ಕೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಮೆಟ್ರೋ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ : Bigg boss Kannada OTT : ರಾಕೇಶ್​ ಅಡಿಗನಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಸ್ಫೂರ್ತಿ ಗೌಡ

ಇದನ್ನೂ ಓದಿ : Knife stabbing case: ಶಿವಮೊಗ್ಗ ಚಾಕು ಇರಿತ ಪ್ರಕರಣ : ಮೆಗ್ಗಾನ್​ ಆಸ್ಪತ್ರೆಗೆ ಬಿ.ವೈ ವಿಜಯೇಂದ್ರ ಭೇಟಿ

Savarkar controversy that has reached namma metro : Opposition to installation of photo

Comments are closed.