Savarkar photo Ganeshotsav 2022 : ಸದ್ಯ ಸಾರ್ವಕರ್ ಹಾಗೂ ಟಿಪ್ಪು ಪೋಟೋ ವಿವಾದದಿಂದ ರಾಜ್ಯ ಸರ್ಕಾರ ಕಂಗೆಟ್ಟು ಹೋಗಿದೆ. ಈ ಮಧ್ಯೆ ಮುಂದಿರುವ ಗಣೇಶೋತ್ಸವದ ವೇಳೆ ವೀರ ಸಾವರ್ಕರ್ ವಿಚಾರ ಮತ್ತೊಂದು ವಿವಾದಕ್ಕೆ ಕಾರಣವಾಗೋ ಸಾಧ್ಯತೆಗಳು ದಟ್ಟವಾಗಿದ್ದು,ಸಾವರ್ಕರ್ ದೇಶ ಭಕ್ತಿಯನ್ನು ಪ್ರಶ್ನಿಸಿದ ಕಾಂಗ್ರೆಸ್ ಹಾಗೂ ಎಡಪಂಥಿಯರಿಗೆ ಉತ್ತರ ನೀಡಲು ಹಿಂದೂಪರ ಸಂಘಟನೆಗಳು ಹಾಗೂ ಚಕ್ರವರ್ತಿ ಸೂಲಿಬೆಲೆಯಂತಹ ಹಿಂದೂ ಚಿಂತಕರು ಗಣೇಶೋತ್ಸವವನ್ನು ಸಾರ್ವಕರ್ ಉತ್ಸವದ ರೀತಿಯಲ್ಲಿ ಮಾಡಲು ಸಿದ್ಧತೆ ನಡೆಸಿದ್ದಾರೆ.
ಕಳೆದ ಒಂದು ವರ್ಷದಿಂದ ಒಂದಾದ ಮೇಲೊಂದರಂತೆ ಧರ್ಮ ದಂಗಲ್ ಗಳನ್ನು ನೋಡಿ ಕಂಗೆಟ್ಟಿರುವ ಬಿಜೆಪಿ ಸರ್ಕಾರಕ್ಕೆ ಈ ಭಾರಿ ಗಣೇಶ ಉತ್ಸವದ ಎದುರಿನಲ್ಲೂ
ಮತ್ತೊಂದು ಧರ್ಮ ದಂಗಲ್‌ಗೆ ಕಾದಿದೆ ಎಂದು ಅಂದಾಜಿಸಲಾಗುತ್ತಿದೆ. ಹೌದು ರಾಜ್ಯದಲ್ಲಿ ಸ್ವಾತಂತ್ರ್ಯೋತ್ಸವದ ವೇಳೆ ನಡೆದ ಒಂದು ಫ್ಲೆಕ್ಸ್ ಗಲಾಟೆ ಈಗ ಸಾವಿರಾರು ಸಾವರ್ಕರ್ ಫ್ಲೆಕ್ಸ್ ಹುಟ್ಟಿಗೆ ಕಾರಣವಾಗಲಿದೆ ಎನ್ನಲಾಗ್ತಿದೆ. ಸಾವರ್ಕರ್ ಪೋಟೊಗೆ ವಿರೋಧಿಸಿದ ಎಡಪಂಥಿಯರಿಗೆ ಉತ್ತರಿಸುವ ನಿಟ್ಟಿನಲ್ಲಿ ಈ ಬಾರಿಯ ಗಣೇಶ ಉತ್ಸವ ಜೊತೆಗೆ ಸಾರ್ವಕರ್ ಉತ್ಸವ ನಡೆಸಲು ಚಿಂತನೆ ನಡೆದಿದೆ.
ಈ ತೀರ್ಮಾನದಂತೆ ಗಣೇಶನ ಉತ್ಸವದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಲು ಪ್ಲ್ಯಾನ್ ಸಿದ್ಧವಾಗಿದೆ. ಹಿಂದೂ ಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಸಾವರ್ಕರ್ ಫ್ಲೆಕ್ಸ್ ಅಳವಡಿಸೋದಾಗಿ ಹೇಳಿಕೊಂಡಿದ್ದಾರಂತೆ. ಒಂದೆರಡು ಸ್ಥಳದಲ್ಲಿ ಮಾತ್ರವಲ್ಲ ಬರೋಬ್ಬರಿ ಹತ್ತು ಸಾವಿರ ಸಾರ್ವಜನಿಕ ಗಣೇಶ ಉತ್ಸವಗಳ ಪೆಂಡಲ್ ಗಳಲ್ಲಿ ಸಾವರ್ಕರ್ ಪೋಟೋ ಹಾಕಲಾಗುತ್ತದೆ. ಅಲ್ಲದೆ 10 ಸಾವಿರ ಸಾರ್ವಕರ ಪೋಟೋ ಹಾಗೂ ಬ್ಯಾನರ್ ಅಳವಡಿಕೆಗೆ ಚಿಂತನೆ ನಡೆದಿದೆ. ಗಣೇಶೋತ್ಸವ ನಡೆಯೋ ಸ್ಥಳದಲ್ಲಿ ಬಾಲಗಂಗಾಧರ್‌ನಾಥ್ ತಿಲಕ ಹಾಗೂ ಸಾರ್ವಕರ್ ಪೋಟೋ ಇಡುವ ಅಭಿಯಾನಕವನ್ನೇ ನಡೆಸಲು ಈಗಾಗಲೇ ಸಿದ್ಧತೆ ನಡೆದಿದೆ. ಅಲ್ಲದೇ ಗಣೇಶನ ಪೆಂಡಾಲ್ ಗಳಲ್ಲಿ ಸಾರ್ವಕರ ಸಾಧನೆಯ ವಿಡಿಯೋ ಡಿಸ್ಪ್ಲೇಗೂ ಸಿದ್ಧತೆ ನಡೆದಿದ್ದು, ಇದರಲ್ಲಿ ಸಾರ್ವಕರ್ ಜೀವನಗಾಥೆಯನ್ನು ಬಿಂಬಿಸುವ ಕಾರ್ಯ ನಡೆಯಲಿದೆಯಂತೆ.
ಈಗಾಗಲೇ ಈ ಅಭಿಯಾನಕ್ಕೆ ರೂಪುರೇಷೆ ಸಿದ್ಧಪಡಿಸಿರುವ ಹಲವು ಚಿಂತಕರ ಹೋರಾಟಗಾರರು ಯೋಜನೆಗೆ ಅಂತಿಮ ಸ್ಪರ್ಷ ನೀಡೋದರಲ್ಲಿ ಬ್ಯುಸಿಯಾಗಿದ್ದಾರೆ.ಒಟ್ಟಿನಲ್ಲಿ ರಾಜ್ಯದಲ್ಲಿ ಸದ್ಯದಲ್ಲೇ ಮತ್ತೊಂದು ಧರ್ಮ ದಂಗಲ್ ನಡೆಯೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಈಗಾಗಲೇ ಧರ್ಮಸೂಕ್ಷ್ಮ ವಾತಾವರಣ ನಿರ್ಮಾಣವಾಗಿದ್ದು ಇದರೊಂದಿಗೆ ರಾಜಕೀಯ ಮೇಲಾಟಗಳು ಜೋರಾಗಿ ನಡೆದಿವೆ.ಇಂಥ ಹೊತ್ತಿನಲ್ಲಿ ಗಣೇಶೋತ್ಸವವೂ ಸರ್ಕಾರಕ್ಕೆ ಆತಂಕ ತರುತ್ತಿದೆ.
ಇದನ್ನೂ ಓದಿ : Anirudh Jatkar Reaction : ಜೊತೆ ಜೊತೆಯಲಿ ವಿವಾದಕ್ಕೆ ಬಿಗ್ ಟ್ವಿಸ್ಟ್ : ನಿರ್ದೇಶಕ, ನಿರ್ಮಾಪಕರ ವಿರುದ್ದ ನಟ ಅನಿರುದ್ದ್ ಆರೋಪ
Savarkar photo Ganeshotsav 2022 Master plan of pro-Hindu organizations