Shakti Scheme : ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ : ಮಹಿಳೆಯರಿಗೆ ಸರಕಾರದ ಗುಡ್‌ನ್ಯೂಸ್‌ : ಶಕ್ತಿ ಯೋಜನೆಗೆ ಹೊಸ ರೂಲ್ಸ್‌ ಜಾರಿ

Shakti Scheme New Rules : ಕರ್ನಾಟಕ ಸರಕಾರ ರಾಜ್ಯದಲ್ಲಿನ ಎಲ್ಲಾ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಶಕ್ತಿ ಯೋಜನೆಯ ಮೂಲಕ ನಿತ್ಯವೂ ಲಕ್ಷಾಂತರ ಮಂದಿ ಬಸ್ಸುಗಳಲ್ಲಿ ಉಚಿತವಾಗಿಯೇ ಪ್ರಯಾಣಿಸುತ್ತಿದ್ದಾರೆ. ಇನ್ಮುಂದೆ ಮೂಲ ದಾಖಲೆ ಇಲ್ಲದೇಯೂ ಮಹಿಳೆಯರು ಪ್ರಯಾಣಿಸಬಹುದು

Shakti Scheme New Rules : ಕರ್ನಾಟಕ ಸರಕಾರ (Karnataka Government) ರಾಜ್ಯದಲ್ಲಿನ ಎಲ್ಲಾ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಶಕ್ತಿ ಯೋಜನೆಯ ಮೂಲಕ ನಿತ್ಯವೂ ಲಕ್ಷಾಂತರ ಮಂದಿ ಬಸ್ಸುಗಳಲ್ಲಿ ಉಚಿತವಾಗಿಯೇ ಪ್ರಯಾಣಿಸುತ್ತಿದ್ದಾರೆ. ಇದೀಗ ಶಕ್ತಿ ಯೋಜನೆಯ ನಿಯಮದಲ್ಲಿ ಬದಲಾವಣೆ ಮಾಡಿದ್ದು, ರಾಜ್ಯ ಸರಕಾರ ದೀಪಾವಳಿಯ ಹೊತ್ತಲ್ಲೇ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದೆ.

ಕರ್ನಾಟಕ ಸರಕಾರದ ಸಾರಿಗೆ ಇಲಾಖೆಗೆ ಸೇರಿದ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿದೆ.

Shakti Scheme Free travel in government bus Karnataka Government give good news for womens New rules for Shakti Yojana
Image Credit to Original Source

ಇದನ್ನೂ ಓದಿ : PM Kisan Samman Nidhi : ಪಿಎಂ ಕಿಸಾನ್‌ ಯೋಜನೆಯ ಹಣ ನಾಳೆಯೇ ರೈತರ ಖಾತೆಗೆ ಜಮೆ : ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ? ಪರಿಶೀಲಿಸಿ

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ಕರ್ನಾಟಕ ರಾಜ್ಯದಲ್ಲಿ ಜೂನ್‌ 11 ರಿಂದ ಮಹಿಳೆಯರು ಸರಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸಲು ಸರಕಾರ ಹಲವು ನಿಯಮಗಳನ್ನು ರೂಪಿಸಿದೆ.

ಸಾಮಾನ್ಯವಾಗಿ ರಾಜ್ಯ ಅಥವಾ ಕೇಂದ್ರ ಸರಕಾರ ನೀಡಿರುವ ಯಾವುದೇ ದಾಖಲೆಗಳನ್ನು ತೋರಿಸಿ ಸರಕಾರಿ ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆದರೆ ಉಚಿತ ಪ್ರಯಾಣಕ್ಕೆ ಮೂಲ ದಾಖಲೆ ಕಡ್ಡಾಯವಾಗಿತ್ತು. ಆದ್ರೆ ಇನ್ಮುಂದೆ ಮೂಲ ದಾಖಲೆ ಇಲ್ಲದೆಯೂ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.

ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : 12000 ರೂ. ಹೂಡಿಕೆ ಮಾಡಿ ರೂ 70 ಲಕ್ಷ ಪಡೆಯಿರಿ

ಬಸ್ಸುಗಳ ಪ್ರಯಾಣದ ವೇಳೆಯಲ್ಲಿ ಮೂಲ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಕಂಡಕ್ಟರ್‌ ಹಾಗೂ ಪ್ರಯಾಣಿಕ ಮಹಿಳೆಯರ ಜೊತೆಗೆ ಜಗಳಗಳು ನಡೆಯುತ್ತಿವೆ. ಇದೀಗ ಸಾರಿಗೆ ಇಲಾಖೆ ಈ ಗೊಂದಲಗಳಿಗೆ ತೆರೆ ಎಳೆಯಲು ಮಾಸ್ಟರ್‌ ಫ್ಲ್ಯಾನ್‌ ರೂಪಿಸಿದೆ.

Shakti Scheme Free travel in government bus Karnataka Government give good news for womens New rules for Shakti Yojana
Image Credit to Original Source

ಇನ್ಮುಂದೆ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಇನ್ಮುಂದೆ ಮೂಲ ಆಧಾರ್‌ ಕಾರ್ಡ್‌ ಪ್ರತಿಯನ್ನು ನೀಡಬೇಕೆಂಬ ಕಡ್ಡಾಯ ನಿಯಮದಲ್ಲಿ ಸಾರಿಗೆ ಇಲಾಖೆ ವಿನಾಯಿತಿಯನ್ನು ನೀಡಿದೆ. ಇನ್ಮುಂದೆ ಆಧಾರ್‌ ಕಾರ್ಡ್‌ ಅನ್ನು ಮೊಬೈಲ್‌ನಲ್ಲಿ ಪೋಟೋ ತೆಗೆದು ಇಟ್ಟುಕೊಂಡು ಪ್ರಯಾಣದ ವೇಳೆಯಲ್ಲಿ ತೋರಿಸುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ದೊರೆಯಲಿದೆ.

ಇದನ್ನೂ ಓದಿ : PM ಕಿಸಾನ್ ಯೋಜನೆ : ದೀಪಾವಳಿ ಹೊತ್ತಲ್ಲೇ 8 ಕೋಟಿಗೂ ಅಧಿಕ ರೈತರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಈ ಹಿಂದೆ ಮೂಲ ಆಧಾರ್‌ ಕಾರ್ಡ್‌ ಅಥವಾ ಇತರ ದಾಖಲೆಯನ್ನು ನೀಡಬೇಕಾಗಿತ್ತು. ಕೇವಲ ಆಧಾರ್‌ ಕಾರ್ಡ್‌ ಮಾತ್ರವಲ್ಲ ಸರಕಾರ ನೀಡಿರುವ ಇತರ ದಾಖಲೆಗಳ ಪೋಟೋವನ್ನು ಬಳಕೆ ಮಾಡಿಕೊಂಡು ಕೂಡ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವಿನ ಸಂಘರ್ಷ ಕೊನೆಯಾಗಲಿದೆ.

Shakti Scheme Free travel in government bus: Karnataka Government give good news for womens, New rules for Shakti Yojana

Comments are closed.