ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭ

ಶಿವಮೊಗ್ಗ: (Shimoga Airport Inauguration) ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಭಾಗದ ಜನರ ಹಲವು ವರ್ಷಗಳ ಕನಸು ನನಸಾಗುವ ಸಮಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಐತಿಹಾಸಿಕ ದಿನಕ್ಕೆ ಶಿವಮೊಗ್ಗ ಸಜ್ಜಾಗಿದೆ. ರಾಜ್ಯದ ಎರಡನೇ ಅತಿ ದೊಡ್ಡ ರನ್‌ ವೇ ಎಂಬ ಹೆಗ್ಗಳಿಕೆ ಪಾತ್ರವಾದ ವಿಮಾನ ನಿಲ್ದಾಣ ಇಂದು ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆಯಾಗಲಿದ್ದು, ದೀಮಂತ ನಾಯಕ ಬಿಎಸ್‌ ಯಡಿಯೂರಪ್ಪ ಅವರ ಜನ್ಮದಿನದಂದೇ ಉದ್ಘಾಟನೆಗೊಳ್ಳುತ್ತಿದೆ.

ವಿಮಾನ ನಿಲ್ದಾಣ ಹಾಗೂ ಇನ್ನೀತರ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ಮಲೆನಾಡಿಗೆ ಆಗಮಿಸಲಿದ್ದಾರೆ. ಸರಕಾರದ ವತಿಯಿಂದ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ ನೆರವೇರುತ್ತಿದ್ದು, ಪ್ರಧಾನಿ ಅವರನ್ನು ಸ್ವಾಗತಿಸುವ ಸಲುವಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ನಾಯಕರ ಬ್ಯಾನರ್‌ ಗಳು ಕಂಗೊಳಿಸುತ್ತಿವೆ. ಇನ್ನೂ ವಿಮಾನ ನಿಲ್ದಾಣ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಅವರು ಸಾರ್ವಜನಿಕ ಕಾರ್ಯಕ್ರಮದ ವೇದಿಕೆಗೆ ತೆರಳಲಿದ್ದು, ವಿವಿಧ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಇಂದು ಶಿವಮೊಗ್ಗದ ಜನತೆಗೆ ಎರಡೆರಡು ವಿಶೇಷತೆಗಳು. ಒಂದು ಕಡೆ ಮಲೆನಾಡಿಗರ ಕನಸಿನ ವಿಮಾನ ನಿಲ್ದಾಣದ ಉದ್ಘಾಟನೆಯಾದರೆ ಇನ್ನೊಂದು ಕಡೆ ಮಲೆನಾಡಿನ ಹೆಮ್ಮೆಯ ಪುತ್ರ ಯಡಿಯೂರಪ್ಪ ಅವರ ಜನ್ಮದಿನ. 449.22 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣ ಕರ್ನಾಟಕದ ಅತಿ ದೊಡ್ಡ ರನ್‌ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಮಾನ ನಿಲ್ದಾಣದ ವಿಶೇಷತೆಗಳೇನು?
775 ಎಕರೆ ವಿಸ್ತೀರ್ಣದಲ್ಲಿ 449.22 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು, 3.2 ಕಿ.ಮೀ ರನ್‌ ವೇ ಅನ್ನು ಹೊಂದಿದೆ. ಅಲ್ಲದೇ ೪,೩೨೦ ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಪ್ಯಾಸೆಂಜರ್‌ ಟರ್ಮಿನಲ್‌ ಇದ್ದು, ಏರ್‌ ಟ್ರಾಫಿಕಿಂಗ್‌ ಸೆಂಟರ್‌ ಹಾಗೂ ಇತರೆ ಸೌಲಭ್ಯಗಳು ಇದರಲ್ಲಿದೆ. ಇನ್ನೂ ಇದಕ್ಕೆ ಕುವೆಂಪು ಎಂದು ನಾಮಕರಣ ಮಾಡಲು ನಿರ್ಧರಿಸಿದ್ದು. ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಪ್ರಧಾನಿ ಮೋದಿ ಅವರು ಅಧಿಕೃತವಾಗಿ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಿದ್ದಾರೆ.

ಇದನ್ನೂ ಓದಿ : “ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿಯಾಗಲಿ : ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಮೋದಿ ಟ್ವೀಟ್

ಇಂದು ಕರ್ನಾಟಕಕ್ಕೆ ಭೇಟಿ ನೀಡಲಿರುವ ಪಿಎಂ ಮೋದಿ 215 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅನೇಕ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಕೆಲವು ಅಭಿವೃದ್ಧಿ ಯೋಜನೆಗಳಲ್ಲಿ ಬೈಂದೂರ್-ರಾಣಿಬೆನ್ನೂರ್ ಅನ್ನು ಸಂಪರ್ಕಿಸುವ ಶಿಕಾರಿಪುರ ಪಟ್ಟಣಕ್ಕಾಗಿ ಹೊಸ ಬೈಪಾಸ್ ರಸ್ತೆಯ ನಿರ್ಮಾಣ, ಮೆಗರವಳ್ಳಿಯಿಂದ ಅಗುಂಬೆಗೆ ಎನ್ಎಚ್ -169 ಎ ವಿಸ್ತರಣೆ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಭಾರತಿಪುರದಲ್ಲಿ ಹೊಸ ಸೇತುವೆ ನಿರ್ಮಾಣ, ಇದಲ್ಲದೆ, ಪಿಎಂ ಮೋದಿ ಅವರು 13 ನೇ ಕಂತಿನ ಸುಮಾರು 16,000 ಕೋಟಿ ರೂ. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ಬೆಳಗಾವಿಯಲ್ಲಿ ಎಂಟು ಕೋಟಿ ಗೂ ಹೆಚ್ಚು ಫಲಾನುಭವಿಗಳಿಗೆ ನೇರ ಪ್ರಯೋಜನಗಳ ವರ್ಗಾವಣೆಯ ಮೂಲಕ ಬಿಡುಗಡೆ ಮಾಡಲಿದ್ದಾರೆ. 930 ಕೋಟಿ ರೂ.ಗಳ ಮೌಲ್ಯದ ಲೋಂಡಾ-ಬೆಳಗಾವಿ ನಡುವೆ ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆಯನ್ನು ಸಹ ಅವರು ಪ್ರಾರಂಭಿಸಲಿದ್ದಾರೆ.

Shimoga Airport Inauguration: Inauguration of Shimoga Airport

Comments are closed.