ಮಂಗಳೂರು : ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಬಿದಿದ್ದಿದೆ. ಇದರಿಂದಾಗಿ ಕಳೆದ ನಾಲ್ಕು ದಿನಗಳಿಂದಲೂ ವಾಹನಗಳು ರಸ್ತೆಯಲ್ಲಿಯೇ ಬಾಕಿಯಾಗಿದ್ದು, ಸಾವರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿರಾಡಿಘಾಟ್ ರಸ್ತೆಯ ದೋಣಿಗಲ್ ಸಮೀಪದಲ್ಲಿ ಹೆದ್ದಾರಿ ಕುಸಿತವಾಗಿದೆ. ಇದರಿಂದಾಗಿ ಹಾಸನ ಜಿಲ್ಲಾಡಳಿತ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದೆ. ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಕಾರ್ಯವನ್ನು ನಡೆಸಿ ಬಸ್ ಸೇರಿದಂತೆ ೨೦ ಟನ್ ಸಾಮರ್ಥ್ಯದ ವಾಹನ ಸಂಚಾರಕ್ಕೆ ಅನುಮತಿಯನ್ನು ನೀಡಿದೆ. ಆದರೆ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧವನ್ನು ಹೇರಿದ್ದು, ಆದರೆ ಸರಕು ಸಾಗಾಣಿಕೆಯ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಅನ್ನೋ ಮಾಹಿತಿಯ ಹಿನ್ನೆಲೆಯಲ್ಲಿ ನೂರಾರು ವಾಹನಗಳು ಗುಂಡ್ಯಕ್ಕೆ ಬಂದಿದ್ದು, ಮೂರ್ನಾಲ್ಕು ದಿನಗಳಿಂದಲೂ ಸರಕು ಸಾಗಾಣಿಕೆಯ ವಾಹನಗಳು ರಸ್ತೆಯಲ್ಲಿಯೇ ಬಾಕಿ ಉಳಿದಿದೆ.

ರಸ್ತೆ ದುರಸ್ತಿಯಾಗುವ ನಿರೀಕ್ಷೆಯಲ್ಲಿದ್ದ ವಾಹನ ಚಾಲಕರು ಕಳೆದ ನಾಲ್ಕು ದಿನಗಳಿಂದಲೂ ಗುಂಡ್ಯದಲ್ಲಿಯೇ ಉಳಿದುಕೊಂಡಿದ್ದು, ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟ್‌ನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಚಾಲಕರು ಪ್ರತಿಭಟನೆಯನ್ನು ನಡೆಸಿದ್ದಾರೆ. ಸ್ಥಳಕ್ಕೆ ಕಡಬ ತಹಶೀಲ್ದಾರ್ ಅನಂತ ಶಂಕರ್ ಭೇಟಿ ನೀಡಿ ಮಾತಕತೆ ನಡೆಸಿದ್ದಾರೆ.

ಆದರೆ ಹಾಸನ ಜಿಲ್ಲಾಡಳಿತ ಶಿರಾಡಿ ಘಾಟಿಯಲ್ಲಿ ಸಂಚಾರಕ್ಕೆ ಅನುಮತಿಯನ್ನು ನಿರಾಕರಿಸಿದೆ. ಹೀಗಾಗಿ ಕಾರ್ಕಳದ ಮೂಲಕ ಸಂಚಾರ ಮಾಡುವಂತೆ ತಹಶೀಲ್ದಾರರು ವಿನಂತಿಸಿ ಕೊಂಡಿದ್ದಾರೆ. ಆದರೆ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಶಿರಾಡಿ ಘಾಟ್ ಕುಸಿತವಾಗಿರುವ ಹಿನ್ನೆಲೆಯಲ್ಲೀಗ ಗುಂಡ್ಯದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಇದನ್ನೂ ಓದಿ : Taliban: ನಿರೂಪಕಿ ಮೇಲೆ ತಾಲಿಬಾನ್ ದೌರ್ಜನ್ಯ: ಮಹಿಳೆ ನೀನು ಮನೆಗೆ ತೆರಳು ಎಂದ ಅಧಿಕಾರಿಗಳು!
ಇದನ್ನೂ ಓದಿ : ಕರಾವಳಿಯಲ್ಲಿ ತಗ್ಗದ ಕೊರೊನಾ ಅಬ್ಬರ : ಸದ್ಯಕ್ಕಿಲ್ಲ ಶಾಲಾರಂಭ