TAJ MAHAL : ಚಂದ್ರನ ಬೆಳಕಲ್ಲಿ ಪ್ರೇಮಸೌಧ ವೀಕ್ಷಣೆ : ಆಗಸ್ಟ್ 21 ರಿಂದ ಪ್ರವಾಸಿಗರನ್ನು ಆಕರ್ಷಿಸಲಿದೆ ತಾಜ್ ಮಹಲ್

ವದೆಹಲಿ : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಪ್ರೇಮಸೌಧ ವೀಕ್ಷಿಸೋದಕ್ಕೆ ಸಾಧ್ಯವಾಗ್ತಿಲ್ಲ. ಆದ್ರೀಗ ಚಂದ್ರನ ಬೆಳಕಲ್ಲಿ ತಾಜ್‌ ಮಹಲ್‌ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಅಮೃತಶಿಲೆಯಲ್ಲಿ ನಿರ್ಮಾಣಗೊಂಡಿರುವ ತಾಜ್‌ಮಹಲ್‌ನ್ನು ಚಂದ್ರನ ಬೆಳಕಲ್ಲಿ ವೀಕ್ಷಿಸೋದು ಸಂಭ್ರಮ. ಇದೇ ಕಾರಣಕ್ಕೆ ಇದೀಗ ಆಗಸ್ಟ್ 21ರಿದ 24ರ ವರೆಗೆ ರಾತ್ರಿ ವೀಕ್ಷಣೆಗೆ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರಿಗೆ ರಾತ್ರಿ 8.30 ರಿಂದ 9 ಗಂಟೆ, 9 ರಿಂದ 9 30 ಹಾಗೂ 9: 30 ರಿಂದ 10 ಗಂಟೆಯವರೆಗೆ ಪ್ರೇಮ ಸೌಧ (Taj Mahal) ವೀಕ್ಷಣೆಗೆ ಅವಕಾಶವಿದ್ದು, ಪ್ರವಾಸಿಗರನ್ನು ಬ್ಯಾಚ್‌ ಮೂಲಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಪ್ರವಾಸಿಗರು ಪ್ರೇಮ ಸೌಧ ವೀಕ್ಷಣೆ ಸಾಧ್ಯವಾಗಿರಲಿಲ್ಲ. ಆದ್ರೀಗ ಬೆಳದಿಂಗಳಲ್ಲಿ ತಾಜ್‌ ಮಹಲ್‌ ವೀಕ್ಷಣೆಗೆ ಅವಕಾಶ ಕೊಟ್ಟಿರುವುದು ಸಹಜವಾಗಿಯೇ ಪ್ರವಾಸಿಗರಿಗೆ ಸಂತಸವನ್ನು ತಂದಿದೆ.

Comments are closed.