ಪೊಲೀಸರಿಗೆ ಜನರ ನಡುವಿನ ಜಗಳ, ಹೊಡೆದಾಟ, ಬಡಿದಾಟ, ಗಲಾಟೆ ಸುಧಾರಿಸೋದಕ್ಕೆ ಸಮಯವಿಲ್ಲ. ಪ್ರತಿನಿತ್ಯ ಸಾವಿರಾರು ಜನರು ನ್ಯಾಯ ಅರಸಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾರೆ. ಆದರೆ ಇಲ್ಲೊಬ್ಬ ರೈತನು ಕೂಡ ತನ್ನ ಕಷ್ಟ ಹೊತ್ತು ಪೊಲೀಸರ ಮೊರೆ ಹೋಗಿದ್ದ. ಆದರೆ ಆತನ ಕಷ್ಟ ಪರಿಹರಿಸಬೇಕಿದ್ದ ಪೊಲೀಸರಿಗೆ ಅವನ ದೂರು ನೋಡಿಯೇ ಸುಸ್ತಾಗಿದೆ. ಹೌದು ಮನೆಯ ವಸ್ತುಗಳ ಕಳ್ಳತನವಾದರೇ, ಜಗಳವಾದರೇ ಅಥವಾ ಮನೆಯ ಸಾಕುಪ್ರಾಣಿಗಳ ಕಳ್ಳತನವಾದರೇ ಜನರು ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾರೆ. ಆದರೆ ಇಲ್ಲೊಬ್ಬ ತನ್ನ ಸಾಕುಪ್ರಾಣಿಯ ವಿರುದ್ಧವೇ (Farmer Complaint Against Cow) ಪೊಲೀಸರಿಗೆ ದೂರು ನೀಡಿದ್ದಾನೆ. ತನ್ನ ನಾಲ್ಕು ಹಸುಗಳಿಗೆ ಬುದ್ಧಿ ಹೇಳಿ ಎಂದು ರೈತನೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ ವಿಲಕ್ಷಣ ಪ್ರಕರಣ ಶಿವಮೊಗ್ಗದಲ್ಲಿ ವರದಿಯಾಗಿದೆ. ಶಿವಮೊಗ್ಗ ( shivamogga ) ಜಿಲ್ಲೆಯ ಭದ್ರಾವತಿ ತಾಲೂಕಿನ ಬಾಳೆಹೊನ್ನೂರು ಬಳಿಯ ಸಿದ್ದೀಪುರ ಗ್ರಾಮದ 40 ವರ್ಷದ ರೈತ ರಾಮಯ್ಯ ಎನ್ನುವವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಮ್ಮ ಮನೆಯಲ್ಲಿರುವ ನಾಲ್ಕು ಹಸುಗಳ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.
ದೂರಿನಲ್ಲಿ ತಮ್ಮ ಸಮಸ್ಯೆಯನ್ನು ವಿವರವಾಗಿ ನಮೂದಿಸಿರುವ ರಾಮಯ್ಯ ಅವರು ಸಿದ್ದೀಪುರ ಗ್ರಾಮದ ನನ್ನ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ವಾಸವಾಗಿದ್ದೇನೆ. ವ್ಯವಸಾಯದ ಜತೆಗೆ ಜೀವನೋಪಾಯಕ್ಕಾಗಿ ನಾಲ್ಕು ಹಸುಗಳನ್ನು ಸಾಕಿಕೊಂಡಿದ್ದೇನೆ. ಅವುಗಳನ್ನು ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮೇಯಿಸಲು ಹಸಿರು ಹುಲ್ಲುಗಳಿರುವ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ. ಬೆಳಗ್ಗೆ ಮಾತ್ರವಲ್ಲದೆ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಮೇಯಿಸಲು ಕರೆದೊಯ್ಯುತ್ತೇನೆ. ಹೀಗಿದ್ದರೂ ಪ್ರತಿದಿನ ಹಸುಗಳು ನನಗೆ ಹಾಗೂ ನನ್ನ ಹೆಂಡತಿ ರತ್ನಮ್ಮಗೆ ಹಾಲು ಕರೆಯಲು ಕೊಡದೆ ಒದೆಯುತ್ತಿವೆ.
ಕೇವಲ ಹಸಿಹುಲ್ಲು ಮಾತ್ರವಲ್ಲದೆ ಹಿಂಡಿ, ಒಣಹುಲ್ಲನ್ನು ಹಾಕಿ ನಾನು ಹಸುಗಳನ್ನು ಆರೈಕೆ ಮಾಡುತ್ತಿದ್ದೇನೆ. ಆದರೂ ಹಸುಗಳು ನಿಯತ್ತಿನಿಂದ ವರ್ತಿಸದೇ ಹಾಲು ಕೊಡದೇ ತೊಂದರೆ ನೀಡುತ್ತಿವೆ ಎಂದು ತನ್ನ ಕಷ್ಟ ಹಂಚಿಕೊಂಡಿದ್ದಾನೆ. ಅಲ್ಲದೇ ಹೀಗೆ ಸಮಸ್ಯೆ ಉಂಟು ಮಾಡುತ್ತಿರುವ ನನ್ನ ನಾಲ್ಕು ಹಸುಗಳನ್ನು ಪೊಲೀಸ್ ಠಾಣೆಗೆ ಕರೆಸಿ ನಾಲ್ಕು ಬುದ್ದಿ ಮಾತು ಹೇಳಿ ನ್ಯಾಯ ಒದಗಿಸಿಕೊಡಬೇಕು. ಅದೇ ರೀತಿ ತನ್ನ ಹಸುಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸಿಕೊಡಬೇಕು ಎಂದು ಬಾಳೆಹೊನ್ನೂರಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರೈತನ ದೂರು (Farmer Complaint Against Cow)ನೋಡಿ ಪೊಲೀಸರೇ ಶಾಕ್ ಆಗಿದ್ದು ಈ ಪ್ರಕರಣವನ್ನು ನಿಭಾಯಿಸುವುದಾದರೂ ಹೇಗೆಂದು ತಲೆಚಚ್ಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ರೈತನೊಬ್ಬ ತನ್ನ ಹಸುಗಳು ಹಾಲು ಕೊಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಸುದ್ದಿ ವೈರಲ್ ಆಗಿದ್ದು, ದೂರಿನ ಪೋಟೋ ಕೂಡ ವೈರಲ್ ಆಗಿದೆ. ನೆಟ್ಟಿಗರು ಇದೆಂಥಾ ರೀತಿಯ ದೂರು ? ಹಸುಗೂ ಮಾಲೀಕನ ಮೇಲೆ ಅದಿನ್ನೆತ್ತಾ ಕೋಪ ಎಂದು ಲೇವಡಿಮಾಡ್ತಿದ್ದಾರೆ.
ಇದನ್ನೂ ಓದಿ : ಗಂಟಲಿಗೆ ಆಹಾರ ಸಿಕ್ಕು ವಿಲ ವಿಲನೇ ಒದ್ದಾಡಿದ ಗ್ರಾಹಕ; ವೇಯ್ಟರ್ ಹಾಗೂ ಪೊಲೀಸ್ ಅಧಿಕಾರಿ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಾಣ
ಇದನ್ನೂ ಓದಿ : ತೆಂಗಿನಕಾಯಿ ಒಡೆಯುತ್ತಲೇ ಬಿರುಕುಬಿಟ್ಟ ಹೊಸ ರಸ್ತೆ..! ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರಕ್ಕೆ ಮುಖಭಂಗ
ಇದನ್ನೂ ಓದಿ : ವಿಭಿನ್ನ ಹವ್ಯಾಸದಿಂದ ಬಹು ಜನಪ್ರಿಯವಾದ ಲಾಯ್ಡ್ ನಾಯಿ ಮರಿ
(A farmer who complained to the police against a cow that did not milk in shivamogga )