Gold Smuggling : ಲಾಕ್‌ಡೌನ್‌ನಲ್ಲೂ ಕಳ್ಳ ಸಾಗಾಣಿಕೆ! ಹೊಸ ಮಾರ್ಗ ಕಂಡುಕೊಂಡ ಸ್ಮಗ್ಲರ್‌ಗಳು

ಕೋವಿಡ್ -19 ಸಾಂಕ್ರಾಮಿಕದಿಂದ ಲಾಕ್‌ಡೌನ್‌ (Lockdown) ನಿಂದ ಅಂತರಾಷ್ಟ್ರೀಯ ವಿಮಾನ ಪ್ರಯಾಣ ನಿಂತುಹೋಗಿದೆ. ಹೀಗಾಗಿ ಭಾರತಕ್ಕೆ ವಿಮಾನದ ಮೂಲಕ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಚಿನ್ನವನ್ನು ಸ್ಮಗ್ಲರ್ (Gold Smuggling) ಗಳು ಭಿನ್ನ ಮಾರ್ಗದ ಮೂಲಕ ತರುತ್ತಿದ್ದಾರೆ. ಕಳ್ಳ ಸಾಗಾಣಿಕೆಯ ಬಹುಭಾಗ ಪಕ್ಕದ ರಾಷ್ಟ್ರ ಮ್ಯಾನ್ಮಾರ್ ನಿಂದ ಬಂದದ್ದಾಗಿದೆ. ಕಳ್ಳಸಾಗಣೆ ಮಾಡುವ ಮಾರ್ಗವು ಲಾಕ್‌ಡೌನ್‌ನಿಂದ ಭೂಮಾರ್ಗವನ್ನು ಬದಲಾಗಿದೆ. ಮ್ಯಾನ್ಮಾರ್ ಚೀನಾ-ಭಾರತ ದೇಶಗಳು ಆಗ್ನೇಯ ಏಷ್ಯಾದ ತ್ರಿ-ಜಂಕ್ಷನ್‌ನಲ್ಲಿ ಇರುವುದರಿಂದ, ಈ ಮಾರ್ಗವು ಕಳ್ಳಸಾಗಣೆ  ಕೇಂದ್ರಬಿಂದುವಾಗಿದೆ. ಅಗ್ಗದ ಸಿಗರೇಟ್ ವಿದೇಶಿ ಪ್ರಾಣಿಗಳಿಂದ ಹಿಡಿದು ಚಿನ್ನದವರೆಗೆ ಕಳ್ಳ ಸಾಗಾಣಿಕೆ ನಡೆಸಲು ಈ ಮಾರ್ಗದ ಬಳಕೆ ಜಾಸ್ತಿಯಾಯಿತು.

ಹಣಕಾಸು ಸಚಿವಾಲಯದ ಅಡಿಯಲ್ಲಿನ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ವಾರ್ಷಿಕ ವರದಿಯು 2020-21ರಲ್ಲಿ ಸುಮಾರು 1,200 ಕೋಟಿ ರೂಪಾಯಿ ಮೌಲ್ಯದ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡರೆ, ಅದರಲ್ಲಿ ಮೂರನೇ ಎರಡರಷ್ಟು ಮ್ಯಾನ್ಮಾರ್ ಮೂಲದ್ದು ಎಂದು ಹೇಳುತ್ತದೆ. ಮ್ಯಾನ್ಮಾರ್ ಮೂಲದ ಸುಮಾರು 240 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಕಳ್ಳಸಾಗಣೆ ಮಾಡಿದ ನಿಜವಾದ ಪ್ರಮಾಣವು ವಶಪಡಿಸಿಕೊಳ್ಳುವಿಕೆಯ ಅನೇಕ ಪಟ್ಟು ಹೆಚ್ಚು ಎಂದು ವರದಿಯೊಂದು ಹೇಳುತ್ತದೆ.

ವರದಿಯ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕದ ಮೊದಲ ಮತ್ತು ಎರಡನೆಯ ಅಲೆಗಳ ನಂತರ ಚಿನ್ನದ ಬೇಡಿಕೆಯು ಏರಿಕೆ ಕಂಡಿದೆ. ಚಿನ್ನದ ಬೇಡಿಕೆಯಲ್ಲಿನ ಹೆಚ್ಚಳವು ಚಿನ್ನದ ಆಮದಿನ ಮಾಸಿಕ ಮೌಲ್ಯಗಳನ್ನು ಹಿಂದಿನ ಹಣಕಾಸು ವರ್ಷಗಳಲ್ಲಿನ ಮಟ್ಟವನ್ನು ಮೀರಿಸಿದೆ. ಲಾಕ್‌ಡೌನ್‌ಗಳ ನಂತರದ ಆರ್ಥಿಕ ಚಟುವಟಿಕೆಗಳಲ್ಲಿ ಚುರುಕಾದ ಚಿನ್ನದ ಬೇಡಿಕೆಯು ಚಿನ್ನದ ಕಳ್ಳ ಸಾಗಾಣಿಕೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಹೇಗೆಲ್ಲ ಚಿನ್ನದ ಕಳ್ಳ ಸಾಗಣೆ ಮಾಡುತ್ತಾರೆ?
ವಿಮಾನದ ಮೂಲಕ ಮಾತ್ರವಿದ್ದ ಸಾಗಣಿಕೆಯು, ನಂತರ ಟ್ರಕ್, ಮೋಟಾರ್ ಬೈಕ್ ಹಾಗೂ ಸ್ಕೂಟರ್ ಗಳಲ್ಲಿ ಪ್ರಾರಂಭವಾಯಿತು. ಇದರಲ್ಲಿ ಹೆಚ್ಚಿನದು ಪೇಸ್ಟ್ , ಮಾತ್ರೆ ಹಾಗೂ ಹುಡಿ ರೂಪದಲ್ಲಿ ಸಾಗಣೆ ಮಾಡಿದ್ದಾಗಿದೆ. ಇನ್ನು ಹಲವರು ತಮ್ಮ ದೇಹದಲ್ಲೇ ಅಡಗಿಸಿ ಚಿನ್ನ ಕಳ್ಳ ಸಾಗಾಣಿಕೆ ಮಾಡಲಾಗಿದೆ. ಇದನ್ನು ತಡೆಗಟ್ಟಲು ವಿಮಾನ ನಿಲ್ದಾಣದಲ್ಲಿ  ಸೂಕ್ತ ತಪಾಸಣೆ ಮೂಲಕ ಕಂಡು ಹಿಡಿಯಲಾಗುತ್ತದೆ. ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಕಳ್ಳರು ಭೂ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

2020 ರ ಏಪ್ರಿಲ್‌ನಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ವಶಪಡಿಸಿಕೊಂಡ ಪ್ರಕರಣಗಳ ಸಂಖ್ಯೆಯು ಸುಮಾರು 4 ಕೋಟಿಗೆ ಕುಸಿದಿದೆ ಎಂದು ಏಜೆನ್ಸಿ ಹೇಳುತ್ತದೆ. ಇದಕ್ಕೆ ಮುಖ್ಯ ಕಾರಣ ಲಾಕ್ ಡೌನ್ ಹಾಗೂ ರದ್ದಾದ ವಿಮಾನ ಪ್ರಯಾಣಗಳು. ನಂತರ ಈ ನಿರ್ಬಂಧಗಳು ಸಡಿಲಗೊಳ್ಳಲು ಪ್ರಾರಂಭಿಸಿದಾಗ, ಕಳೆದ ವರ್ಷ ಆಗಸ್ಟ್‌ನಲ್ಲಿ ಇದು 102.54 ಕೋಟಿಗೆ ಏರಿತು.

 ಡಿಸೆಂಬರ್ 2020 ರಲ್ಲಿ ಮತ್ತೆ ಲಾಕ್ ಡೌನ್ ಸಡಿಲಗೊಂಡಾಗ, ಗರಿಷ್ಠ 198.6 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಜನವರಿ 2021 ರಲ್ಲಿ, ಈ ಸಂಖ್ಯೆ 200.6 ಕೋಟಿಗೆ ಏರಿತು.

ಇದನ್ನೂ ಓದಿ: Omicron Guidelines : ವಿದೇಶದಿಂದ ಬರುವವರಿಗೆ 14 ದಿನಗಳ ಕ್ವಾರಂಟೈನ್‌ : ಅಂತರಾಷ್ಟ್ರೀಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ

ಇದನ್ನೂ ಓದಿ : Farmer Complaint Against Cow : ಹಾಲು ಕೊಡದೇ ಸತಾಯಿಸುವ ಹಸುವನ್ನು ಠಾಣೆಗೆ ಕರೆಸಿ: ಪೊಲೀಸರ ಮೊರೆ ಹೋದ ಶಿವಮೊಗ್ಗದ ರೈತ

(Gold Smuggling take land route by Myanmar in Covid 19 Pandemic says Report)

Comments are closed.